ವಿಡಿಯೋ | ಶಾಲಾ ಪರಿಶೀಲನೆಗೆ ವಿರೋಧ; ಸಿಜೆಪಿ ಕಾರ್ಯಕರ್ತರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಗ್ರಾಮಸ್ಥರು

ಜೈಪುರ : ರಾಜಸ್ಥಾನದ ಜೈಪುರ ಜಿಲ್ಲೆಯ ಬಾಗ್ರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP) ತಂಡಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಮಪುರಾ ಕನ್ವಾರ್‌ಪುರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಗ್ರಾಮಸ್ಥರು ಸಿಜೆಪಿ ಕಾರ್ಯಕರ್ತರನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಸಿಜೆಪಿ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ಅದರ ಮೂಲಸೌಕರ್ಯ ಪರಿಶೀಲಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಮಾತುಕತೆ ನಡೆಸುವುದು ತಂಡದ ಉದ್ದೇಶವಾಗಿತ್ತು.
ತಂಡ ಗ್ರಾಮಕ್ಕೆ ಆಗಮಿಸುವ ಮುನ್ನವೇ ಸ್ಥಳೀಯರು ಗ್ರಾಮದ ಪ್ರಮುಖ ಪ್ರವೇಶ ರಸ್ತೆಗೆ ತಡೆ ನಿರ್ಮಿಸಿದ್ದರು ಎನ್ನಲಾಗಿದೆ.

ಗ್ರಾಮಕ್ಕೆ ಪ್ರವೇಶಿಸುತ್ತಿದ್ದ ವಾಹನಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಬಳಿಕ ಗ್ರಾಮಸ್ಥರು ಮತ್ತು ಸಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಹಾಗೂ ಘರ್ಷಣೆ ಉಂಟಾಗಿದ್ದು, ಅಂತಿಮವಾಗಿ ಸಿಜೆಪಿ ತಂಡವನ್ನು ಗ್ರಾಮದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನಂತರ ಗ್ರಾಮಸ್ಥರು ಶಾಲೆಯ ಹೊರಭಾಗದಲ್ಲಿ ಧರಣಿ ನಡೆಸಿ ಸಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರೂ ಗ್ರಾಮಸ್ಥರೊಂದಿಗೆ ಸೇರಿಕೊಂಡಿದ್ದರು.

ಪ್ರಮುಖ ಸುದ್ದಿ :-   ಚಾಮರಾಜನಗರ | 10 ಎಕರೆ ಅರಣ್ಯಕ್ಕೆ ಬೆಂಕಿ ; ಶಿಬಿರಗಳು ಸ್ಫೋಟ ; ಶಂಕಿತ ಬೇಟೆಗಾರರ ಸಾವಿಗೆ ಪ್ರತೀಕಾರದ ಶಂಕೆ

‘ ಸ್ಥಳೀಯರೇ ಶಾಲೆ ದುರಸ್ತಿ ಮಾಡಬಹುದು’ ಎಂದ ಗ್ರಾಮಸ್ಥರು
ರಾಮಪುರಾ ಕನ್ವಾರ್‌ಪುರಾ ಸರ್ಕಾರಿ ಶಾಲೆಯ ಕಟ್ಟಡವನ್ನು ಅಸುರಕ್ಷಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಕಟ್ಟಡವನ್ನು ಮುಚ್ಚಲಾಗಿದೆ. ಪರಿಣಾಮವಾಗಿ, ಪ್ರಸ್ತುತ ತರಗತಿಗಳನ್ನು ಶಾಲೆಯ ಸಮೀಪದಲ್ಲಿರುವ ಜಾನುವಾರು ಕೊಟ್ಟಿಗೆಯಲ್ಲಿ ನಡೆಸಲಾಗುತ್ತಿದೆ.

ಶಾಲೆಯ ಕಟ್ಟಡವನ್ನು ಸ್ಥಳೀಯರ ಸಹಕಾರದಿಂದಲೇ ದುರಸ್ತಿ ಮಾಡುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ವಾದಿಸಿದ್ದಾರೆ. ಅಲ್ಲದೆ, ಶಾಲೆಯ ದುರಸ್ತಿ ಕಾಮಗಾರಿಗೆ ಸರ್ಕಾರ ಈಗಾಗಲೇ ಹಣ ಮಂಜೂರು ಮಾಡಿದೆ ಎಂದು ಅವರು ಹೇಳಿದ್ದಾರೆ.
ಬಾಗ್ರು ಡಿವೈಎಸ್ಪಿ ಧರ್ಮೇಂದ್ರ ಶರ್ಮಾ ಅವರು ಇಂತಹ ಯಾವುದೇ ಬೆಳವಣಿಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಭಾಗವಾಗಿ ಸಿಜೆಪಿ ತಂಡ ಶುಕ್ರವಾರ ಜೈಪುರ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲು ಯೋಜಿಸಿತ್ತು. ಶಾಲೆಗಳ ಕಟ್ಟಡಗಳ ಸ್ಥಿತಿ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

ಪ್ರಮುಖ ಸುದ್ದಿ :-   ಶಿಕ್ಷಕಿ ಕೆನ್ನೆಗೆ ಹೊಡೆದ ಬಳಿಕ 6 ವರ್ಷದ ಬಾಲಕ ಕುಸಿದುಬಿದ್ದು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement