ಬೆಂಗಳೂರು : ರಾಜ್ಯ ಸರ್ಕಾರವು ಒಬ್ಬರು ಐಎಫ್ಎಸ್ ಅಧಿಕಾರಿ, ನಾಲ್ವರು ಐಎಎಸ್ ಅಧಿಕಾರಿಗಳು ಹಾಗೂ 15 ಐಪಿಎಸ್ ಅಧಿಕಾರಿಗಳನ್ನು (IPS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಫ್ಎಸ್ ಅಧಿಕಾರಿ ಲಿಂಗರಾಜ ಎಸ್.ಎಸ್ : ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ಯಲಗೌಡ ಶಿವನಗೌಡ ಪಾಟೀಲ (ಐಎಎಸ್): ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಜೊತೆಗೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯ ಸಮಕಾಲೀನ ಹೊಣೆಗಾರಿಕೆಯನ್ನೂ ನೀಡಲಾಗಿದೆ.
ದಿಗ್ವಿಜಯ ಬೋಡ್ಕೆ (ಐಎಎಸ್): ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಲವಿಶ್ ಒರ್ಡಿಯಾ (ಐಎಎಸ್): ಕೆಪಿಎಸ್ಸಿ ಪರೀಕ್ಷಾ ಜಂಟಿ ನಿಯಂತ್ರಕರಾಗಿರುವ ಇವರಿಗೆ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ನ (ಎಂಎಸ್ಐಎಲ್) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮುಕುಲ್ ಜೈನ್ (ಐಎಎಸ್): ಬೀದರ ನಗರ ಪಾಲಿಕೆ ಆಯುಕ್ತರಾಗಿದ್ದ ಇವರನ್ನು ಗದಗ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ವರ್ಗಾಯಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿಯೂ ಹಲವು ಪ್ರಮುಖ ವರ್ಗಾವಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಭೂಷಣ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಶಶಿಕುಮಾರ ಅವರಿಗೆ ಸರ್ಕಾರ ಸ್ಥಳ ತೋರಿಸಬೇಕಿದೆ.
ಪೊಲೀಸ್ ಅಧಿಕಾರಿಗಳು- ಎಲ್ಲಿಗೆ ವರ್ಗಾವಣೆ
ಪಿ.ಹರಿಶೇಖರನ್-(ಎಡಿಜಿಪಿ)- ಡಿಸಿಆರ್ಇಗೆ ವರ್ಗಾವಣೆ
ನಂಜುಂಡಸ್ವಾಮಿ (ಎಡಿಜಿಪಿ)– ಮಾನವಹಕ್ಕುಗಳ ಆಯೋಗ
ದಿವ್ಯಜ್ಯೋತಿ ರೇ-(ಎಡಿಜಿಪಿ), ಅಪರಾಧ ಮತ್ತು ತಾಂತ್ರಿಕ ವಿಭಾಗ
ಅಮಿತ್ ಸಿಂಗ್-(ಐಜಿಪಿ)- ಕೆಎಸ್ಆರ್ಪಿ
ಆರ್.ಚೇತನ್-(ಡಿಐಜಿಪಿ)– ಪಶ್ಚಿಮ ವಲಯ, ಮಂಗಳೂರು
ನಿಕ್ಕಮ್ ಪ್ರಕಾಶ-(ಡಿಐಜಿಪಿ), ಪೊಲೀಸ್ ಆಯುಕ್ತ, ಬೆಳಗಾವಿ
ಭೂಷಣ ಬೊರಸೆ-(ಡಿಐಜಿಪಿ), ಆಯುಕ್ತ, ಹುಬ್ಬಳ್ಳಿ-ಧಾರವಾಡ
ಡಿಐಜಿಪಿ ಎನ್.ಶಶಿಕುಮಾರ- ಸ್ಥಳ ತೋರಿಸದೆ ವರ್ಗಾವಣೆ
ಶಿವಪ್ರಕಾಶ ದೇವರಾಜ್-ಎಸ್ಪಿ, ಮಾದಕದ್ರವ್ಯ ನಿಗ್ರಹ ಪಡೆ
ಪದ್ಮಿನಿ ಸಾಹು-ಎಸ್ಪಿ, ಚಿಕ್ಕಬಳ್ಳಾಪುರ
ಆರ್.ಶ್ರೀನಿವಾಸಗೌಡ-(ಡಿಸಿಪಿ) ಸಿಸಿಬಿ-1 ಬೆಂಗಳೂರು
ಡಾ.ಶಿವಕುಮಾರ-(ಎಸ್ಪಿ),ಕರ್ನಾಟಕ ಲೋಕಾಯುಕ್ತ
ಕುಶಲ್ ಚೌಕ್ಸೆ- (ಡಿಸಿಪಿ); ಆಡಳಿತ ವಿಭಾಗ, ಬೆಂಗಳೂರು
ಸಾಹಿಲ್ ಬಾಗ್ಲಾ- ಎಸ್ಪಿ, ಕೊಪ್ಪಳ
ರೋಹನ್ ಜಗದೀಶ-ಎಸ್ಪಿ, ಬೆಂಗಳೂರು ದಕ್ಷಿಣ ಜಿಲ್ಲೆ
ಹೆಚ್.ಎನ್.ಮಿಥುನ್- ಎಸ್ಪಿ ಪೊಲೀಸ್ ವರಿಷ್ಠಾಧಿಕಾರಿ- ಗದಗ


ನಿಮ್ಮ ಕಾಮೆಂಟ್ ಬರೆಯಿರಿ