ಸಿದ್ದಾಪುರ : ಸಾಹಿತಿ-ಪತ್ರಕರ್ತ ಗಂಗಾಧರ ಕೊಳಗಿಗೆ ಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿ

ಸಿದ್ದಾಪುರ : ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ದಿವಂಗತ ಎಂ.ಎಸ್. ಡಿಸೋಜಾ ಅವರ ಸ್ಮರಣಾರ್ಥ ಕೊಡಮಾಡುವ 6ನೇ ವರ್ಷದ ‘ಎಂ.ಎಸ್. ಡಿಸೋಜಾ ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಹಾಗೂ ಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿಪ್ರದಾನ ಕಾರ್ಯಕ್ರಮ ಆಗಸ್ಟ್ 30ರಂದು (ಭಾನುವಾರ) ಮಧ್ಯಾಹ್ನ 3 ಗಂಟೆಗೆ ಸಿದ್ದಾಪುರದ ಬಾಲ ಭವನದಲ್ಲಿ ನಡೆಯಲಿದೆ.
ಶಿಕ್ಷಕರ ವೇದಿಕೆ ಸಿದ್ದಾಪುರ ಹಾಗೂ ದಿವಂಗತ ಎಂ.ಎಸ್. ಡಿಸೋಜಾ ಅವರ ಪುತ್ರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿದ್ದಾಪುರ ಘಟಕದ ಉಪಾಧ್ಯಕ್ಷೆ ರೀಟಾ ಎಂ. ಡಿಸೋಜಾ ಅವರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ 2026ನೇ ಸಾಲಿನ ʼಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿ’ಯನ್ನು ಸಾಹಿತಿ ಹಾಗೂ ಪತ್ರಕರ್ತರಾದ ಗಂಗಾಧರ ಕೊಳಗಿ ಅವರಿಗೆ ಪ್ರದಾನ ಮಾಡಲಾಗುತ್ತದೆ.

ಅದೇ ರೀತಿ ಸಿದ್ದಾಪುರ ತಾಲೂಕಿನ ಕಡಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದೋನ್ನತ ಮುಖ್ಯ ಶಿಕ್ಷಕ ಮಹೇಶ್ ಶೇಟ್, ಕೊಂಡ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದೋನ್ನತ ಮುಖ್ಯ ಶಿಕ್ಷಕಿ ಹರಿಣಿ ಬೋರ್ಕರ್, ಅಂಬಾರದ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ನಜೀಬುಲ್ಲಾ ಅಬ್ದುಲ್ ಬಷೀರ್, ಗೋಳಿಕೈ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಕುಮಾರ ಎಂ. ಅವರಿಗೆ 2026ನೇ ಸಾಲಿನ ‘ಎಂ.ಎಸ್. ಡಿಸೋಜಾ ಉತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ರೀಟಾ ಎಂ. ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಡಿಕೆ ಶಿವಕುಮಾರ ಸರ್ಕಾರದ ಮೊದಲ ವಿಕೆಟ್ ಪತನ : ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement