ಕಾರವಾರ:ಅರಬ್ಬಿ ಸಮುದ್ರದ ಅಲೆಗಳ ನಡುವೆ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿ ಮೀನು ಬಲೆ ಎಳೆಯುತ್ತಿದ್ದ ಮೀನುಗಾರನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಮುದ್ರದಲ್ಲಿನ ಲೈಟ್‌ಹೌಸ್ ಸಮೀಪ ನಡೆದಿದೆ.
ಮೃತ ಮೀನನುಗಾರನನ್ನು ಕುಮಟಾ ತಾಲೂಕಿನ ಸಸಿಹಿತ್ಲು ಗ್ರಾಮದ ವೆಂಕಟೇಶ ಹರಿಕಂತ್ರ (32) ಎಂದು ಗುರುತಿಸಲಾಗಿದೆ. ಬೋಟ್ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾಗ ಮೀನು ಬಲೆ ಎಳೆಯುವಾಗ ಆಕಸ್ಮಿಕವಾಗಿ ವೆಂಕಟೇಶ ಸಮುದ್ರಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಸಮುದ್ರಕ್ಕೆ ಬಿದ್ದ ವೆಂಕಟೇಶ ಮೃತಪಟ್ಟಿದ್ದಾರೆ. ಬೋಟ್‌ನಲ್ಲಿದ್ದ ಇತರ ಮೀನುಗಾರರು ಬಳಿಕ ಅವರ ಮೃತದೇಹವನ್ನು ಬೈತಖೋಲ್ ಧಕ್ಕೆಗೆ ತಂದಿದ್ದು,ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ