ಶಿವಮೊಗ್ಗ : ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಸಿಂಹದ ಮರಿಗಳು ಸಾವು

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ ಜನ್ಮ ನೀಡಿದ್ದ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ.
ಸಿಂಹದ ಮರಿಗಳು ಕೆಲ ದಿನಗಳ ಹಿಂದೆಯೇ ಮೃತಪಟ್ಟಿವೆ ಎನ್ನಲಾಗಿದೆ. ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತತಿ ವೃದ್ಧಿ ಉದ್ದೇಶದಿಂದ ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಿಂದ ಏಷ್ಯಾಟಿಕ್ ಸಿಂಹ ‘ಶಿವ’ ಹಾಗೂ ಐದು ವರ್ಷದ ಸಿಂಹಿಣಿ ‘ಸಾರಾ’ ಎಂಬೆರಡು ಸಿಂಹಗಳನ್ನು ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತರಲಾಗಿತ್ತು. ಇದೇ ವೇಳೆ ಮೂರು ಹುಲಿಗಳನ್ನೂ ಇಂದೋರ್‌ನಿಂದ ಇಲ್ಲಿಗೆ ಕರೆತರಲಾಗಿತ್ತು.
ಸಾರಾ ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಶಿವಮೊಗ್ಗದಲ್ಲಿ ಏಷ್ಯಾಟಿಕ್ ಸಿಂಹಕ್ಕೆ ಮರಿಗಳು ಜನಿಸಿರುವುದು ಇದೇ ಮೊದಲ ಬಾರಿಯಾಗಿದ್ದರಿಂದ, ಸಿಂಹಗಳ ಸಂತತಿ ವೃದ್ಧಿ ಕುರಿತು ಮೃಗಾಲಯದ ಅಧಿಕಾರಿಗಳಲ್ಲಿ ಹಾಗೂ ಪ್ರಾಣಿ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿತ್ತು. ಆದರೆ ಜನಿಸಿದ ನಾಲ್ಕೂ ಮರಿಗಳು ಬದುಕುಳಿಯಲಿಲ್ಲ. ಜನಿಸಿದ ಎರಡೇ ದಿನಗಳಲ್ಲಿ ಅವು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಸಿಂಹಿಣಿ ಸಾರಾಗೆ ಇದು ಮೊದಲ ಗರ್ಭಧಾರಣೆಯಾಗಿತ್ತು. ತಾಯ್ತನದ ಅನುಭವದ ಕೊರತೆಯಿಂದ ಮರಿಗಳ ಆರೈಕೆಯಲ್ಲಿ ಸಮಸ್ಯೆ ಉಂಟಾಗಿರಬಹುದು ಎಂದು ಹೇಳಲಾಗುತ್ತಿದೆ. ಸಿಂಹಿಣಿ ಮರಿಗಳಿಗೆ ಸಮರ್ಪಕವಾಗಿ ಹಾಲುಣಿಸದಿರುವುದೇ ಮರಿಗಳ ಸಾವಿಗೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ʼಆದಿಕವಿʼ ಪುರಸ್ಕಾರಕ್ಕೆ ಸಾಹಿತಿ ಶಾ. ಮಂ. ಕೃಷ್ಣರಾಯ, ʼವಾಗ್ದೇವಿʼ ಪುರಸ್ಕಾರಕ್ಕೆ ಸಹನಾ ಆಯ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement