ಪಶ್ಚಿಮ ಬಂಗಾಳ ಉಪಚುನಾವಣೆ : ಮುಸ್ಲಿಮರು 70% ಇರುವ ರೆಜಿನಗರ ಕ್ಷೇತ್ರದಲ್ಲಿ ದಾಖಲೆಯ ಅಂತರದಲ್ಲಿ ಗೆದ್ದ ಬಿಜೆಪಿ !

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮುಸ್ಲಿಮರೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ರೆಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 75,816 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಮಹತ್ವದ ರಾಜಕೀಯ ಮುನ್ನಡೆ ದಾಖಲಿಸಿದೆ.
ಸುಮಾರು ಶೇ. 70ರಷ್ಟು ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರು ಇರುವ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ (Shankharavh Sarkar) ಒಟ್ಟು 1,29,914 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಆಮ್ ಜನತಾ ಉನ್ನಯನ ಪಕ್ಷದ (ಎಜೆಯುಪಿ) ಅಭ್ಯರ್ಥಿ ಗೋಲಂ ನಬಿ ಆಜಾದ್ 54,098 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ. 63.14ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದ್ದರೆ, ಗೋಲಂ ನಬಿ ಆಜಾದ್ ಶೇ. 26.29ರಷ್ಟು ಮತಗಳನ್ನು ಪಡೆದಿದ್ದಾರೆ.

ವಿರೋಧ ಪಕ್ಷಗಳು ಮತಗಳನ್ನು ಪಡೆಯಲು ಸಂಪೂರ್ಣ ವಿಫಲವಾಗಿವೆ. ಕಾಂಗ್ರೆಸ್, ಮಮತಾ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಟಿಎಂಸಿಯಿಂದ ಪ್ರತ್ಯೇಕಗೊಂಡ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (ಡಿಟಿಎಂಸಿ) ಪಕ್ಷಗಳು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ವಿಫಲವಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲಾಹಿಲ್ ಕಾಫಿ ಕೇವಲ 6,168 ಮತಗಳನ್ನು ಪಡೆದರೆ, ಮಮತಾ ಟಿಎಂಸಿ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ಕೇವಲ 3,847 ಮತಗಳನ್ನು ಗಳಿಸಿದ್ದಾರೆ. ಡಿಟಿಎಂಸಿ ಅಭ್ಯರ್ಥಿ ಸಫಿಯುಜ್ಜಮಾನ್ ಶೇಖ್ ಅವರಿಗೆ 2,044 ಮತಗಳು ಲಭಿಸಿವೆ. ಸಿಪಿಐ(ಎಂ) ಅಭ್ಯರ್ಥಿ 3,797 ಮತಗಳನ್ನು ಪಡೆದಿದ್ದಾರೆ.
ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ. 70ರಷ್ಟು ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವುದು ಕ್ಷೇತ್ರದ ಬದಲಾಗುತ್ತಿರುವ ಚುನಾವಣಾ ರಾಜಕೀಯ ಸಮೀಕರಣಗಳತ್ತ ಗಮನ ಸೆಳೆದಿದೆ.

ಪ್ರಮುಖ ಸುದ್ದಿ :-   'ಫ್ಲೈದುಬೈ' ದುರಂತ ತಪ್ಪಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ ಘೋಷಣೆ

ಹುಮಾಯೂನ್ ಕಬೀರ್  ರಾಜೀನಾಮೆಯಿಂದ ಉಪಚುನಾವಣೆ
ಆಮ್ ಜನತಾ ಉನ್ನಯನ ಪಕ್ಷದ (ಎಜೆಯುಪಿ) ಸಂಸ್ಥಾಪಕ ಹುಮಾಯೂನ್ ಕಬೀರ್ ಅವರು ರೆಜಿನಗರ ವಿಧಾನಸಭಾ ಕ್ಷೇತ್ರವನ್ನು ತೆರವುಗೊಳಿಸಿದ್ದರಿಂದ ಇಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಈ ಹಿಂದೆ ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ಕಬೀರ್, ಬಳಿಕ ಎಜೆಯುಪಿ ಪಕ್ಷವನ್ನು ಸ್ಥಾಪಿಸಿದ್ದರು.
2026ರ ವಿಧಾನಸಭಾ ಚುನಾವಣೆಯಲ್ಲಿ ರೆಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹುಮಾಯೂನ್ ಕಬೀರ್ 58,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅವರು ನೌದಾ ವಿಧಾನಸಭಾ ಕ್ಷೇತ್ರವದಲ್ಲಿ ಜಯಗಳಿಸಿದ್ದು, ಅದನ್ನು ಉಳಿಸಿಕೊಂಡಿದ್ದರಿಂದ ರೆಜಿನಗರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಉಪಚುನಾವಣೆಯಲ್ಲಿ ಹುಮಾಯೂನ್ ಕಬೀರ್ ಅವರ ಪುತ್ರ ಗೋಲಂ ನಬಿ ಆಜಾದ್ ಎಜೆಯುಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಅವರು ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ವಿರುದ್ಧ ಸೋಲು ಅನುಭವಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement