ಕುಮಟಾ: ಅ.10ರಂದು ʼಭಾವಧಾರʼ ಗೀತೆಗಳ ಗುಚ್ಛ ಗಾಯನ

ಕುಮಟಾ: ‘ಭಾವಧಾರ’ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೋಣ ರಸ್ತೆಯ ಬ್ಲಡ್ ಬ್ಯಾಂಕ್ ಹಾಲ್‌ನಲ್ಲಿ ಅಕ್ಟೋಬರ್ 10ರಂದು ಶನಿವಾರ ಸಂಜೆ 9 ಗಂಟೆಯಿಂದ ಸಂಜೆ ವರೆಗೆ ನಡೆಯಲಿದೆ.
ದಿವಂಗತ ಡಾ. ಅನಿಲ ಹೆಗಡೆ,  ಡಾ. ವಿ.ಕೆ. ಹಂಪಿಹೊಳಿ, ಟಿ.ಡಿ. ಕಾಮತ್ ಹಾಗೂ ಉಮಾ ಎಸ್. ಹೆಗಡೆ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗೌರೀಶ ಯಾಜಿ ಅವರ ಸಂಗೀತ ನಿರ್ದರ್ಶನದ ಗೀತೆಗಳ ಗುಚ್ಛವನ್ನು ಪ್ರಸ್ತುತಪಡಿಸಲಾಗುತ್ತದೆ.  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೂಜಳ್ಳಿಯ ಷಡಕ್ಷರಿ ಗವಾಯಿ ಅಕಾಡೆಮಿಯ ಆಡಳಿತ ಮಂಡಳಿ ಕೋರಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement