ಬಿಜೆಪಿ ಯುವ ಮೋರ್ಚಾಕ್ಕೆ ನೂತನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾಕ್ಕೆ (BJYM) ನೂತನ ರಾಷ್ಟ್ರೀಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಂಗಳವಾರ (ಅಕ್ಟೋಬರ್ 20) ಪ್ರಕಟಿಸಿರುವ ನೇಮಕಾತಿ ಪಟ್ಟಿಯಲ್ಲಿ ಏಳು ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಹಾಗೂ ಮೂವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರ ನಿರ್ದೇಶನದಂತೆ ಈ ನೇಮಕಾತಿ ನಡೆದಿದೆ.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಹೇಮಾಂಗ ಜೋಶಿ ಅವರು ನೂತನ ಪದಾಧಿಕಾರಿಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರ ನಿರ್ದೇಶನದಂತೆ ಯುವ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳಾಗಿ ಹಾಗೂ ವಿವಿಧ ಜವಾಬ್ದಾರಿಗಳಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹೇಮಾಂಗ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ರಾಷ್ಟ್ರೀಯ ಪದಾಧಿಕಾರಿಗಳು
ಜಮ್ಮು ಮತ್ತು ಕಾಶ್ಮೀರದ ಶಾಸಕಿ ಶಗುನ್ ಪರಿಹಾರ, ಉತ್ತರ ಪ್ರದೇಶದ ನಿಖಿಲ್ ಮಣಿ ತಿವಾರಿ, ನಾಗಾಲ್ಯಾಂಡ್‌ನ ಅರವಿಂದ ದಮಾನಿ ಮತ್ತು ತೆಲಂಗಾಣದ ಮಲೋತ್ ಕೊಮಾಲಿ ನಾಯಕ್, ಬಿಹಾರದ ರಾಜ ರಾಜೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಶಾಸಕ ಸೌಮೇನ ಕರ್ಫಾ ಮತ್ತು ಛತ್ತೀಸ್‌ಗಢದ ಭೂಪೇಂದ್ರ ನಾಗ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಒಡಿಶಾದ ಅರ್ಪಿತಾ ಅಪರಾಜಿತಾ ಬಡ್ಜೆನಾ, ಉತ್ತರ ಪ್ರದೇಶದ ಹರ್ಷವರ್ಧನ ಸಿಂಗ್ ಮತ್ತು ಆಂಧ್ರಪ್ರದೇಶದ ಮಿಟ್ಟಾ ವಂಶಿ ಕೃಷ್ಣ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ಪ್ರಮುಖ ಸುದ್ದಿ :-   ಸದ್ಯಕ್ಕೆ ವಿರಾಮ : ಪ್ರತಿಭಟನೆಗೆ ಬ್ರೇಕ್ ನೀಡುವಂತೆ ಸಿಜೆಪಿ ಬೆಂಬಲಿಗರಿಗೆ ದೀಪ್ಕೆ ಸಂದೇಶ ನೀಡಲು ಕಾರಣವೇನು ?

ಕಾರ್ಯದರ್ಶಿಗಳು ಮತ್ತು ಖಜಾಂಚಿ
ಏಳು ಮಂದಿ ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಅಸ್ಸಾಂನ ಬಿಸ್ವಜೀತ ಖೌಂಡ್, ಮಧ್ಯಪ್ರದೇಶದ ಆಶಿಶ್ ಝಾಲಾ, ಮಹಾರಾಷ್ಟ್ರದ ಸಯಾಲಿ ರಘುನಾಥ ಕುಲಕರ್ಣಿ, ರಾಜಸ್ಥಾನದ ಹಿಮಾಂಶು ಶರ್ಮಾ, ಪಂಜಾಬ್‌ನ ಸರ್ದಾರ್ ಅರ್ಮಾನಜೋತ್ ಬ್ರಾರ್, ಜಾರ್ಖಂಡ್‌ನ ಅಮನ್ ಯಾದವ್ ಮತ್ತು ಬಿಹಾರದ ರಾಹುಲ್ ಝಾಲಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಉತ್ತರ ಪ್ರದೇಶದ ವಿನೀತ್ ವತ್ಸ್ ತ್ಯಾಗಿ ಅವರನ್ನು ರಾಷ್ಟ್ರೀಯ ಖಜಾಂಚಿಯನ್ನಾಗಿ ನೇಮಿಸಲಾಗಿದ್ದು, ರಾಜಸ್ಥಾನದ ದೇವವ್ರತ ಸಿಂಗ್ ರಜಾವತ್ ಅಾವರು ರಾಷ್ಟ್ರೀಯ ಸಹ-ಖಜಾಂಚಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕಚೇರಿ ಮತ್ತು ಸಂಶೋಧನಾ ಜವಾಬ್ದಾರಿಗಳ ಹಂಚಿಕೆ
ಗುಜರಾತ್‌ನ ಧ್ರುವ ಪಂಡಿತ್ ಅವರನ್ನು ರಾಷ್ಟ್ರೀಯ ಕಚೇರಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದ್ದು, ದೆಹಲಿಯ ಮೋಹಿತ್ ಸೋನಿ ಸಹ-ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ತೆಲಂಗಾಣದ ಅಖಿಲಾ ಬಂದಂ ಅವರು ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಗುಜರಾತ್‌ನ ರಂಗಂ ತ್ರಿವೇದಿ, ತೆಲಂಗಾಣದ ಕಮಲ್ ಮಡಿಶೆಟ್ಟಿ ಮತ್ತು ಹರಿಯಾಣದ ಡಾ. ರಮಾ ಬಲ್ಹಾರಾ ಅವರನ್ನು ಸಹ-ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗ 
ಬಿಹಾರದ ಹಿಮಾಂಶು ಯಾದವ್ ಅವರನ್ನು ಮಾಧ್ಯಮ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ದೆಹಲಿಯ ಶಿವಾನಿ ಸಿಂಗ್ ಮತ್ತು ವಿಷು ಬಸೋಯಾ ಹಾಗೂ ಹಿಮಾಚಲ ಪ್ರದೇಶದ ಅತುಲ್ ಠಾಕೂರ್ ಅವರು ಮಾಧ್ಯಮ ಸಹ-ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ದೆಹಲಿಯ ಅಪೂರ್ವ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮ ಉಸ್ತುವಾರಿಯನ್ನಾಗಿ ನೇಮಿಸಲಾಗಿದ್ದು, ಬಿಹಾರದ ಮಾನವೇಂದ್ರ ಚೌಹಾಣ್ ಸಾಮಾಜಿಕ ಮಾಧ್ಯಮ ಸಹ-ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಮುಖ ಸುದ್ದಿ :-   ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement