ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

ಬೆಳಗಾವಿ: ಕಬ್ಬಿಗೆ ಬೆಲೆ ನಿಗದಿಪಡಿಸುವ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಮೊದಲೇ ಇಬ್ಬರು ರೈತ ಮುಖಂಡರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಘಟನೆ ನಡೆದಿದೆ.
ಸಭಾಂಗಣದೊಳಗೆ ಪರಸ್ಪರ ತಳ್ಳಾಟ, ನೂಕಾಟ ಹಾಗೂ ಕೂಗಾಟದಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಕೈಕೈ ಮಿಲಾಯಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ, ಗದ್ದಲ ಎಬ್ಬಿಸುತ್ತಿದ್ದವರನ್ನು ಸಭಾಂಗಣದಿಂದ ಹೊರಗೆ ಕಳುಹಿಸಿದರು.

ಕಬ್ಬಿಗೆ ಪ್ರತಿ ಟನ್‌ಗೆ ₹4,500ರಿಂದ ₹5,500ರವರೆಗೆ ಬೆಲೆ ನಿಗದಿಪಡಿಸುವ ಬೇಡಿಕೆ ಸೇರಿದಂತೆ ವಿವಿಧ ಬೆಲೆ ಸಂಬಂಧಿತ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಸಂಘರ್ಷಕ್ಕೆ ಕಾರಣವಾದವು. ಎರಡೂ ಬಣಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತು.
ಕೋಡಿಹಳ್ಳಿ ಚಂದ್ರಶೇಖರ ಬಣದ ಮುಖಂಡರು ಹಾಗೂ ಬೆಂಬಲಿಗರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನ್ನಪ್ಪ ಪೂಜಾರಿ ಬಣದ ಮುಖಂಡರು ಹಾಗೂ ಬೆಂಬಲಿಗರ ನಡುವೆ ಈ ಸಂಘರ್ಷ ನಡೆಯಿತು. ಆರಂಭದಲ್ಲಿ ಮಾತಿನ ವಾಗ್ವಾದಕ್ಕೆ ಸೀಮಿತವಾಗಿದ್ದ ಗಲಾಟೆ ಬಳಿಕ ತಳ್ಳಾಟ, ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು. ಒಂದು ಹಂತದಲ್ಲಿ ಕೆಲವರು ಹೊಡೆದಾಡಿಕೊಂಡರು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement