

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಬುಧವಾರ (ನವೆಂಬರ್ 18) ಒಟ್ಟು 32 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರನ್ನು ಐದು ಪೊಲೀಸ್ ಕಮಿಷನರೇಟ್ಗಳಾಗಿ ವಿಭಜಿಸಿ ಸರ್ಕಾರ ಆದೇಶ ಹೊರಡಿಸಿದ ನಂತರ ಈ ವರ್ಗಾವಣೆ ಬಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತಕುಮಾರ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಪುನರ್ರಚಿಸಲಾಗಿದ್ದು, ಹೊಸದಾಗಿ ಸೃಷ್ಟಿಸಲಾದ ವಲಯ ಆಯುಕ್ತರ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಿಸಲಾಗಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವೆಗಳು) ಜಂಟಿ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಬೆಂಗಳೂರು ನಗರ ಎಡಿಜಿಪಿ ಮತ್ತು ಪೊಲೀಸ್ ಆಯುಕ್ತರಾಗಿದ್ದ ಅವರನ್ನು, ಖಾಲಿ ಇದ್ದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ನಿಯೋಜಿಸಲಾಗಿದೆ.
ಸೀಮಂತಕುಮಾರ ಸಿಂಗ್ ಅವರ ಸ್ಥಾನಕ್ಕೆ ಹಾಗೂ ಹೊಸ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ 1996ನೇ ಬ್ಯಾಚ್ನ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್.ಹಿತೇಂದ್ರ ಅವರು ಇನ್ಮುಂದೆ ಬೆಂಗಳೂರು ನಗರದ ಎಡಿಜಿಪಿ ಹಾಗೂ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ (Chief Commissioner of Police) ಕಾರ್ಯನಿರ್ವಹಿಸಲಿದ್ದಾರೆ.
ಅಲ್ಲದೆ, ಬೆಂಗಳೂರು ನಗರದ ಪೊಲೀಸ್ ಅನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂದು ಐದು ವಿಭಾಗಗಳಾಗಿ ವಿಂಗಡಿಸಿ ಐದು ಕಮಿಷನರೇಟ್ ಹುದ್ದೆಗಳನ್ನು ಸರ್ಕಾರ ಸೃಷ್ಟಿಸಲಾಗಿದ್ದು, ಎಲ್ಲ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಿದೆ. ಹಾಗೂ ಸ್ಥಳ ನಿರೀಕ್ಷೆಯಲ್ಲಿದ್ದ ಹೇಮಂತ ನಿಂಬಾಳ್ಕರಗೆ ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಹೊಸದಾಗಿ ಸೃಷ್ಟಿಸಲಾಗಿರುವ ವಿವಿಧ ವಲಯಗಳ ಪೊಲೀಸ್ ಆಯುಕ್ತರ ಹುದ್ದೆಗಳಿಗೆ ಐಜಿಪಿ (IGP) ದರ್ಜೆಯ ಅಧಿಕಾರಿಗಳ ನೇಮಕ
ಲಾಭು ರಾಮ: ಆಯುಕ್ತರು, ಕೇಂದ್ರ ಬೆಂಗಳೂರು ನಗರ (Central Bengaluru City).
ಡಾ. ಪಿ.ಎಸ್. ಹರ್ಷ: ಆಯುಕ್ತರು, ಪೂರ್ವ ಬೆಂಗಳೂರು ನಗರ (East Bengaluru City).
ವಿಕಾಶಕುಮಾರ ವಿಕಾಶ: ಆಯುಕ್ತರು, ಪಶ್ಚಿಮ ಬೆಂಗಳೂರು ನಗರ (West Bengaluru City).
ಡಾ. ಎಂ.ಬಿ. ಬೋರಲಿಂಗಯ್ಯ: ಆಯುಕ್ತರು, ಉತ್ತರ ಬೆಂಗಳೂರು ನಗರ (North Bengaluru City).
ಸಿ. ವಂಶಿ ಕೃಷ್ಣ: ಬೆಂಗಳೂರು ನಗರ (ಆಡಳಿತ) ಜಂಟಿ ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ (South Bengaluru City) ಪೊಲೀಸ್ ಆಯುಕ್ತರಾಗಿ ಹೆಚ್ಚುವರಿ ಹೊಣೆ
ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬಿಜಯಕುಮಾರ ಸಿಂಗ್: ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ.
ಎಸ್. ಮುರುಗನ್: ಎಡಿಜಿಪಿ, ಕರ್ನಾಟಕ ಲೋಕಾಯುಕ್ತ.
ಮನೀಶ ಖರ್ಬಿಕರ್: ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು.
ಎನ್. ಶಶಿಕುಮಾರ್: ಐಜಿಪಿ, ಪಶ್ಚಿಮ ವಲಯ, ಮಂಗಳೂರು.
ಅನುಪಮ್ ಅಗರ್ವಾಲ್: ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP).
ಡಾ. ಶರಣಪ್ಪ ಎಸ್.ಡಿ.: ಡಿಐಜಿ, ರೈಲ್ವೆ ಇಲಾಖೆ.
ಕುಲದೀಪಕುಮಾರ ಆರ್. ಜೈನ್: ಡಿಐಜಿಮತ್ತು ಕಲಬುರಗಿ ನಗರ ಪೊಲೀಸ್ ಆಯುಕ್ತರು.
ಎಂ. ಪುಟ್ಟಮಾದಯ್ಯ: ಡಿಐಜಿಪಿ, ದಕ್ಷಿಣ ವಲಯ, ಮೈಸೂರು.
ಡಾ. ಎಂ. ಅಶ್ವಿನಿ: ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು.
ಜೆ.ಕೆ. ರಶ್ಮಿ: ಡಿಐಜಿಪಿ, ಜಲಸಂಪನ್ಮೂಲ ಇಲಾಖೆ ಜಾಗೃತ ದಳ.
ಬೆಂಗಳೂರು ನಗರದ ವಿವಿಧ ವಿಭಾಗಗಳ ನೂತನ ಡಿಸಿಪಿಗಳು (DCPs) ಮತ್ತು ಇತರ ಅಧಿಕಾರಿಗಳು:
ಡಾ. ಅನೂಪ್ ಎ. ಶೆಟ್ಟಿ: ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ
ಲಕ್ಷ್ಮಣ ನಿಂಬರಗಿ: ಡಿಸಿಪಿ, ನಗರ ಸಶಸ್ತ್ರ ಮೀಸಲು ಪಡೆ (CAR ಕೇಂದ್ರ ಕಚೇರಿ), ಕೇಂದ್ರ ಬೆಂಗಳೂರು ನಗರ.
ಚೆನ್ನಬಸವಣ್ಣ ಲಂಗೋಟಿ: ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ.
ನಾಗೇಶ ಡಿ.ಎಲ್.: ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ
ಲೋಕೇಶ ಭರಮಪ್ಪ ಜಗಲಾಸರ: ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ
ಯತೀಶ ಎನ್.: ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ
ಸೈದುಲು ಅದಾವತ್: ಎಸ್ಪಿ, ಆಂತರಿಕ ಭದ್ರತಾ ವಿಭಾಗ (ISD), ಬೆಂಗಳೂರು
ಶ್ರೀಹರಿ ಬಾಬು ಬಿ.ಎಲ್.: ಡಿಸಿಪಿ, ವೈಟ್ಫೀಲ್ಡ್, ಪೂರ್ವ ಬೆಂಗಳೂರು ನಗರ
ಡಾ. ಗೀತಾ ಎಂ.ಎಸ್.: ಡಿಸಿಪಿ, ಪೂರ್ವ ಬೆಂಗಳೂರು ನಗರ
ರಂಜಿತ್ ಕುಮಾರ ಬಂಡಾರು: ಡಿಸಿಪಿ (ಆಡಳಿತ), ಬೆಂಗಳೂರು ನಗರ
ಅಶೋಕ ಕೆ.ವಿ.: ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ
ಅಮತೆ ವಿಕ್ರಮ: ಡಿಸಿಪಿ, ಉತ್ತರ ಬೆಂಗಳೂರು ನಗರ
ಲಕ್ಷ್ಮಿ ಗಣೇಶ ಕೆ.: ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ
ಪಿ.ವಿ. ಸ್ನೇಹಾ: ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ





ನಿಮ್ಮ ಕಾಮೆಂಟ್ ಬರೆಯಿರಿ