

ಬೆಂಗಳೂರು : ಕರ್ನಾಟಕದಲ್ಲಿ ಸತತವಾಗಿ ಏರಿಕೆಯಾಗಿದ್ದ ಅಕ್ಕಿ ಬೆಲೆಯಲ್ಲಿ ಇಳಿಕೆಯಾಗಿದೆ. ಅದರಲ್ಲೂ ಸೋನಾ ಮಸೂರಿ ಅಕ್ಕಿ ದರ ಕೆಜಿಗೆ 20 ರೂಪಾಯಿ ವರೆಗೂ ಕಡಿಮೆಯಾಗಿದೆ.
ಬೆಲೆ ಏರಿಕೆಯ ಪರಿಣಾಮದಿಂದ ಸೋನಾ ಮಸೂರಿಗೆ ಅಕ್ಕಿ ಕೆಜಿಗೆ 80 ರೂ.ದಿಂದ 90 ರೂ.ವರೆಗೆ ಮಾರಾಟವಾಗುತ್ತಿತ್ತು. ಇದೀಗ ಕೆಜಿಗೆ 65ರೂ.ದಿಂದ 70 ರೂ.ವರೆಗೆ ಇಳಿಕೆಯಾಗಿದೆ. ಹೊಸ ಭತ್ತದ ಪೂರೈಕೆ ಹೆಚ್ಚಾದಂತೆ, ಸಗಟು ಬೆಲೆಗಳಲ್ಲಿ ಪ್ರತಿ ಕ್ವಿಂಟಲ್ಗೆ ₹2,000 ವರೆಗೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದ್ದರಿಂದ ಬೆಲೆಯಲ್ಲಿ ಈ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕಳೆದ 3-4 ತಿಂಗಳಿಂದಲೂ ಅಕ್ಕಿ ಬೆಲೆ ಏರಿಕೆಯಾಗುತ್ತಲೇ ಇತ್ತು. ವಿಶೇಷವಾಗಿ ತುಂಗಭದ್ರಾ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಭತ್ತದ ಕೃಷಿಗೆ ಸರಿಯಾದ ಸಮಯದಲ್ಲಿ ನೀರು ಸಿಗಲಿಲ್ಲ. ಹೀಗಾಗಿ ಭತ್ತದ ಪೂರೈಕೆ ಕುಸಿದಿದ್ದರಿಂದ ಅಕ್ಕಿ ಬೆಲೆ ಹೆಚ್ಚಳವಾಗಿತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಕ್ಕಿ ತಳಿಗಳಲ್ಲಿ ಒಂದಾದ ‘ಸೋನಾ ಮಸೂರಿ’ಯ ಚಿಲ್ಲರೆ ಬೆಲೆಯು ಕಳೆದ ಎರಡು ತಿಂಗಳುಗಳಲ್ಲಿ ಪ್ರತಿ ಕೆಜಿಗೆ 20 ರೂಪಾಯಿಯಷ್ಟು ಏರಿಕೆಯಾಗಿ ಕೆಜಿಗೆ 82ರಿಂದ 98 ರೂಪಾಯಿಗೆ ಮಾರಾಟವಾಗುತ್ತಿತ್ತು. ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾದ ಬಹುತೇಕ ಎಲ್ಲಾ ಬಗೆಯ ಅಕ್ಕಿಗಳ ಬೆಲೆಯಲ್ಲಿ 20 ರಿಂದ 30 ರೂಪಾಯಿಗಳ ವರೆಗೂ ಏರಿಕೆಯಾಗಿತ್ತು.
ಈಗ ಮಾರುಕಟ್ಟೆಗೆ ಭತ್ತ ಪೂರೈಕೆಯಾಗುತ್ತಿರುವ ಕಾರಣ ಅಕ್ಕ ದರ ಇಳಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದ್ದು, ಈಗ ಟಾವು ಮುಗಿದಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಪೂರೈಕೆಯಾಗುತ್ತಿದೆ. ಅಲ್ಲದೆ, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದ್ದರಿಂದ ಅಕ್ಕಿ ಬೆಲೆ ಕೊಂಚ ಇಳಿಕೆಯಾಗಿದೆ ಎನ್ನಲಾಗಿದೆ.
ಕಿ





ನಿಮ್ಮ ಕಾಮೆಂಟ್ ಬರೆಯಿರಿ