ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಯಲ್ಲಾಪುರ : ಕೂಲಿ ಮಾಡಿದ ಹಣ ಕೇಳಿದ್ದಕ್ಕೆ ಏರ್‌ಗನ್‌ನಿಂದ ಗುಂಡಿನ ದಾಳಿ ; ದೂರು ದಾಖಲು

ಯಲ್ಲಾಪುರ: ಅಡಿಕೆ ತೋಟದಲ್ಲಿ ಕೆಲಸ ಮಾಡಿದ ಹಣವನ್ನು ಕೇಳಲು ಹೋದ ವ್ಯಕ್ತಿಯ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಿದ ಆರೋಪಿತ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ನಾಗರಾಜ ಬಾಂದೇಕರ (41) ಎಂಬವರ ಎಡಗೈ ಹೆಬ್ಬೆರಳಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಮೂರು ತಿಂಗಳ ಹಿಂದೆ ಸುಬ್ರಹ್ಮಣ್ಯ ಗಾಂವಕರ ಎಂಬುವವರ ಅಡಿಕೆ ತೋಟದಲ್ಲಿ ಕೆಲಸ ಮಾಡಿದ್ದೆ. ಕೆಲಸದ ಬಾಕಿ ಹಣವನ್ನು ಪಡೆಯುವ ಸಲುವಾಗಿ ನ.28ರಂದು ಸುಬ್ರಹ್ಮಣ್ಯ ಅವರ ಮನೆಗೆ ತೆರಳಿದ್ದಾಗ  ನೀನು ಕೆಲಸವನ್ನು  ಸರಿಯಗಿ ಮಾಡಿಲ್ಲ,  ಹಣವನ್ನೂ ನೀಡುವುದಿಲ್ಲ ಎಂದು ತಗಾದೆ ತೆಗೆದು ಸುಬ್ರಹ್ಮಣ್ಯ ಗಾಂವಕರ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಾಗರಾಜ ಬಾಂದೇಕರ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಪ್ರಶ್ನಿಸಿದ ತನಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಸುಬ್ರಹ್ಮಣ್ಯ, ತನ್ನ ಬಳಿಯಿದ್ದ ಏರ್‌ಗನ್‌ನಿಂದ ತನ್ನ ಹಣೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ಗುಂಡಿನಿಂದ ತಪ್ಪಿಸಿಕೊಳ್ಳಲು ತಾನು ಯತ್ನಿಸಿದಾಗ ಗುಂಡು ತನ್ನ ಎಡಗೈ ಹೆಬ್ಬೆರಳಿಗೆ ತಾಗಿದ್ದು, ಇದರಿಂದ ಗಾಯವಾಗಿದೆ. ಘಟನೆಯಲ್ಲಿ ಗಾಯಗೊಂಡ ತಾನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದರಿಂದ ದೂರು ನೀಡಲು ತಡವಾಯಿತು ಎಂದು ದೂರನಲ್ಲಿ ಉಲ್ಲೇಖಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಸುಬ್ರಹ್ಮಣ್ಯ ಗಾಂವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಖಾನಾಪುರ : ತೆಂಗಿನಕಾಯಿ ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಪತಿ-ಪತ್ನಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement