ಶಿವಸೇನೆಯ ಖಲಿಸ್ತಾನ್ ವಿರೋಧಿ ಮೆರವಣಿಗೆ ವೇಳೆ ಗುಂಪು ಘರ್ಷಣೆ: ಕಲ್ಲು ತೂರಾಟ, ಝಳಪಿಸಿದ ಕತ್ತಿಗಳು

ನವದೆಹಲಿ: ಶುಕ್ರವಾರ ಪಂಜಾಬ್‌ನ ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳು ಘರ್ಷಣೆ ನಡೆಸಿದ ನಂತರ ಕಲ್ಲು ತೂರಾಟ ನಡೆಸಲಾಯಿತು ಮತ್ತು ಕತ್ತಿಗಳನ್ನು ಬೀಸಲಾಯಿತು.
ಪಟಿಯಾಲದಲ್ಲಿ ಖಲಿಸ್ತಾನಿ ಗುಂಪುಗಳ ವಿರುದ್ಧ ಶಿವಸೇನೆ (ಬಾಳ್‌ ಠಾಕ್ರೆ) ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರ್ಯಾಲಿಯ ನೇತೃತ್ವವನ್ನು ಪಂಜಾಬ್ ಶಿವಸೇನೆ (ಬಾಳ್‌ ಠಾಕ್ರೆ) ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ ವಹಿಸಿದ್ದರು. ಶಿವಸೇನೆ (ಬಾಳ್‌ ಠಾಕ್ರೆ) ಎಂದು ಗುರುತಿಸಿಕೊಳ್ಳುವ ಗುಂಪು ನಡೆಸಿದ ಮೆರವಣಿಗೆಯು ಖಲಿಸ್ತಾನ್ ಪರ ಎಂದು ನಂಬಲಾದ ಸಿಖ್ ಗುಂಪಿನೊಂದಿಗೆ ಮುಖಾಮುಖಿಯಾದ ನಂತರ ಘರ್ಷಣೆಗಳು ಸಂಭವಿಸಿದವು. ಎರಡು ಗುಂಪುಗಳ ಸದಸ್ಯರು ಪರಸ್ಪರ ಕತ್ತಿಗಳನ್ನು ಬೀಸಿದರು ಮತ್ತು ಕಲ್ಲು ತೂರಿದರು.

ಕೆಲವು ಸಿಖ್ ಸಂಘಟನೆಗಳ ಸದಸ್ಯರು ಮತ್ತು ಶಿವಸೇನೆ (ಬಾಳ್ ಠಾಕ್ರೆ)‌ ನಡುವೆ ಪರಸ್ಪರ ಘರ್ಷಣೆ ನಡೆಸಿದರು, ಗುಂಪಿನಿಂದ ಹಲವಾರು ಜನರು ಘೋಷಣೆಗಳನ್ನು ಕೂಗಿದರು. ಶಿವಸೇನೆ (ಬಾಳ್‌ ಠಾಕ್ರೆ) ಕಾರ್ಯಕರ್ತರು “ಖಾಲಿಸ್ತಾನ್ ಮುರ್ದಾಬಾದ್” ಘೋಷಣೆಗಳನ್ನು ಕೂಗಿದರು. ಇದನ್ನು ಅನುಸರಿಸಿ, ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದವು, ಇದರಲ್ಲಿ ಒಂದು ವರ್ಗದ ಜನರು ಕತ್ತಿಗಳನ್ನು ಝಳಪಿಸುವುದನ್ನು ಮತ್ತು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೆಲವರು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ಈ ಹಿನ್ನಲೆಯಲ್ಲಿ ಭಾರೀ ಗದ್ದಲ ಕೇಳಿಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ದೇವಸ್ಥಾನದ ಬಳಿಯ ಕಟ್ಟಡದ ಮೇಲೆ ನಿಂತು ಕಲ್ಲು ಎಸೆಯುತ್ತಿರುವುದನ್ನು ಮತ್ತೊಂದು ವೀಡಿಯೊ ತೋರಿಸಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿ
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪೊಲೀಸ್ ಮಹಾನಿರ್ದೇಶಕರೊಂದಿಗೆ (ಡಿಜಿಪಿ) ಮಾತನಾಡಿದ್ದೇನೆ ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು.
ಪಟಿಯಾಲದಲ್ಲಿ ನಡೆದ ಘರ್ಷಣೆಯ ಘಟನೆ ಅತ್ಯಂತ ದುರದೃಷ್ಟಕರ. ನಾನು ಡಿಜಿಪಿ ಜೊತೆ ಮಾತನಾಡಿದ್ದು, ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಶಾಂತಿ ಮತ್ತು ಭ್ರಾತೃತ್ವ ಕಾಪಾಡಿಕೊಳ್ಳಿ’
ಪಟಿಯಾಲ ಡೆಪ್ಯುಟಿ ಕಮಿಷನರ್ ಸಾಕ್ಷಿ ಸಾಹ್ನಿ ಅವರು ಶಾಂತಿಗಾಗಿ ಕರೆ ನೀಡಿದರು ಮತ್ತು “ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಜನರಿಗೆ ಮನವಿ ಮಾಡಿದರು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ನಿರಂತರವಾಗಿ ನಿಗಾ ಇರಿಸಲಾಗಿದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಸಾಕ್ಷಿ ಸಾಹ್ನಿ ಹೇಳಿದ್ದಾರೆ.
ವಿವಾದವನ್ನು ಬಗೆಹರಿಸಲು ಎರಡು ಗುಂಪುಗಳ ನಡುವೆ ಮಾತುಕತೆಗೆ ಕರೆ ನೀಡಿದ ಸಾಕ್ಷಿ ಸಾಹ್ನಿ, “ನಮ್ಮ ಎಲ್ಲಾ ಧರ್ಮಗಳು ಮತ್ತು ಅವುಗಳ ಮೂಲ ತತ್ವಗಳಿಗೆ ಶಾಂತಿ ಮತ್ತು ಸೌಹಾರ್ದತೆ ಕೇಂದ್ರವಾಗಿದೆ, ಯಾವುದೇ ವಿವಾದ ಅಥವಾ ತಪ್ಪು ತಿಳುವಳಿಕೆ ಇದ್ದರೂ ಅದನ್ನು ಮಾತುಕತೆಯ ಮೂಲಕ ಪರಿಹರಿಸುವುದು ಮುಖ್ಯ ಎಂದು ಹೇಳಿದ್ದಾರೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement