ನವದೆಹಲಿ : ಖಾಸಗಿತನದ ಬಗ್ಗೆ ವಿಪಕ್ಷಗಳ ಪ್ರಶ್ನೆಗಳ ನಡುವೆಯೂ ಡೇಟಾ ಉಲ್ಲಂಘನೆಗೆ ಭಾರೀ ದಂಡವನ್ನು ವಿಧಿಸುವ ಡಿಜಿಟಲ್ ಪರ್ಸನಲ್ ಡೇಟಾ ಸಂರಕ್ಷಣಾ ಮಸೂದೆ-2023 ಡಿಜಿಟಲ್ ಹಕ್ಕುಗಳ ಕಾನೂನಿಗೆ ಲೋಕಸಭೆ ಇಂದು, ಸೋಮವಾರ ಅನುಮೋದನೆ ನೀಡಿತು.
ಬ್ಯಾಂಕಿಂಗ್, ಆರೋಗ್ಯ, ವಿಮೆ ಅಥವಾ ಫೋನ್ ಕರೆ ದಾಖಲೆಗಳ ಡಿಜಿಟಲ್ ಸೇವೆಗಳನ್ನು ಬಳಸುವ ನಾಗರಿಕರ ವೈಯಕ್ತಿಕ ಡೇಟಾಗಳ ಸುರಕ್ಷತೆಗೆ ಭರವಸೆ ನೀಡುವ ಡಿಜಿಟಲ್ ಪರ್ಸನಲ್ ಡೇಟಾ ಸಂರಕ್ಷಣಾ ಮಸೂದೆ-2023 ಅನ್ನು ಲೋಕಸಭೆ ಅಂಗೀಕರಿಸಿತು.
ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (ಡಿಪಿಡಿಪಿ) ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ಡೇಟಾ ದುರುಪಯೋಗದ ವಿರುದ್ಧ ಕಠಿಣ ದಂಡ ವಿಧಿಸುವ ಅವಕಾಶವನ್ನು ಈ ಮಸೂದೆ ಒದಗಿಸುತ್ತದೆ. ಇದು ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಲು ಡೇಟಾವನ್ನು ನಿರ್ವಹಿಸುವ ಘಟಕಗಳ ಮೇಲೆ ಷರತ್ತುಗಳನ್ನು ವಿಧಿಸುತ್ತದೆ ಮತ್ತು “ದೂರುಗಳನ್ನು ತನಿಖೆ ಮಾಡುವ ಮತ್ತು ದಂಡವನ್ನು ವಿಧಿಸುವ” ಡೇಟಾ ಸಂರಕ್ಷಣಾ ಮಂಡಳಿಯ ರಚನೆಗೆ ಅವಕಾಶ ನೀಡುತ್ತದೆ.
ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಲೋಕಸಭೆಯಲ್ಲಿ ವಿಧೇಯಕವನ್ನು ಗುರುವಾರ ಮಂಡಿಸಿದರು.
ಮಾನದಂಡಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಗರಿಷ್ಠ 250 ಕೋಟಿ ದಂಡ ಮತ್ತು ಕನಿಷ್ಠ 50 ಕೋಟಿ ದಂಡ ವಿಧಿಸುವುದನ್ನು ಮಸೂದೆ ಪ್ರಸ್ತಾಪಿಸಿದೆ.
ಆನ್‌ಲೈನ್‌ನಲ್ಲಿ ಭಾರತದೊಳಗೆ ಸಂಗ್ರಹಿಸಲಾದ ವೈಯಕ್ತಿಕ ದತ್ತಾಂಶಗಳಿಗೆ ನಿಯಮಗಳು ಅನ್ವಯಿಸುತ್ತವೆ, ಜೊತೆಗೆ ಆಫ್‌ಲೈನ್‌ನಲ್ಲಿ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿಯನ್ನು ನಂತರ ಡಿಜಿಟಲ್ ಮಾಡಲಾದ ದತ್ತಾಂಶಗಳಿಗೂ ಇದು ಅನ್ವಯಿಸುತ್ತದೆ. ಭಾರತದಲ್ಲಿನ ವ್ಯಕ್ತಿಗಳಿಗೆ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ಇದು ಭಾರತದ ಹೊರಗೆ ನಡೆಸಲಾದ ಅಂತಹ ಪ್ರಕ್ರಿಯೆಗೆ ಸಹ ಅನ್ವಯಿಸುತ್ತದೆ.
ಆಗಸ್ಟ್ 3 ರಂದು, ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಮಸೂದೆ ಮಂಡಿಸಿದಾಗ ಇದನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ವೈಷ್ಣವ್ ಅವರು ಇದು “ಸಾಮಾನ್ಯ ಬಿಲ್” ಎಂದು ಹೇಳಿದರು.
ಮುಖ್ಯಾಂಶಗಳು:
ಮೂರನೇ ವ್ಯಕ್ತಿಯ ಡೇಟಾ ಪ್ರೊಸೆಸರ್‌ನೊಂದಿಗೆ ಅದು ಹೆಲ್ಡ್ ಮಾಡಿದ್ದರೂ ಸಹ ಬಳಕೆದಾರರ ಡೇಟಾದೊಂದಿಗೆ ಸಂವಹನ ನಡೆಸುವ ಕಂಪನಿಗಳಿಂದ ವೈಯಕ್ತಿಕ ಡೇಟಾವನ್ನು ರಕ್ಷಿಸಬೇಕು.
ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಕಂಪನಿಗಳು ಡೇಟಾ ಪ್ರೊಟೆಕ್ಷನ್ ಬೋರ್ಡ್ (DPB) ಮತ್ತು ಬಳಕೆದಾರರಿಗೆ ಸೂಚಿಸಬೇಕು.
ಮಕ್ಕಳು ಮತ್ತು ದೈಹಿಕವಾಗಿ ವಿಕಲಚೇತನರ ಕುರಿತಾದ ಡೇಟಾವನ್ನು ಪೋಷಕರ ಅನುಮೋದನೆಯೊಂದಿಗೆ ಮಾತ್ರ ಪ್ರಕ್ರಿಯೆಗೊಳಿಸಲಾಗುತ್ತದೆ.
ಸಂಸ್ಥೆಗಳು ಡೇಟಾ ಸಂರಕ್ಷಣಾ ಅಧಿಕಾರಿಯನ್ನು ನೇಮಿಸಬೇಕು ಮತ್ತು ಅಂತಹ ಮಾಹಿತಿಯನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಬೇಕು.
ಭಾರತವನ್ನು ಹೊರತುಪಡಿಸಿ ಯಾವುದೇ ರಾಷ್ಟ್ರ ಅಥವಾ ಪ್ರದೇಶಕ್ಕೆ ವೈಯಕ್ತಿಕ ಡೇಟಾದ ವರ್ಗಾವಣೆಯನ್ನು ಸೀಮಿತಗೊಳಿಸುವ ಅಧಿಕಾರವನ್ನು ಕೇಂದ್ರವು ನಿರ್ವಹಿಸುತ್ತದೆ.
ಡೇಟಾ ಪ್ರೊಟೆಕ್ಷನ್ ಬೋರ್ಡ್ (DPB) ತೀರ್ಪುಗಳ ವಿರುದ್ಧದ ಮೇಲ್ಮನವಿಗಳನ್ನು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿಯು ಪರಿಶೀಲಿಸುತ್ತದೆ.
ಉಲ್ಲಂಘನೆಯಾದ ವೈಯಕ್ತಿಕ ಡೇಟಾದ ಪ್ರಕಾರ ಡೇಟಾ ಪ್ರೊಟೆಕ್ಷನ್ ಬೋರ್ಡ್ (DPB) ಉಲ್ಲಂಘನೆಯ ಪ್ರಮಾಣ ಮತ್ತು ಗಂಭೀರತೆಯ ಆಧಾರದ ಮೇಲೆ ಶಿಕ್ಷೆಯನ್ನು ನಿರ್ಧರಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ