ಬಿಜೆಪಿಯಿಂದ ಅಚ್ಚರಿಯ ಆಯ್ಕೆ : ಮೋಹನ ಯಾದವ್ ಮಧ್ಯಪ್ರದೇಶದ ನೂತನ ಸಿಎಂ

ಭೋಪಾಲ: ಅಚ್ಚರಿಯ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್‌ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾದವ್ (ಒಬಿಸಿ) ಸಮುದಾಯದ ನಾಯಕ ಮೋಹನ ಯಾದವ್ (58) ಅವರನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶದಲ್ಲಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಇತರೆ ಹಿಂದುಳಿದ ವರ್ಗದವರು (ಒಬಿಸಿ) ಇದ್ದಾರೆ. ಆದರೆ, ಕುತೂಹಲಕಾರಿಯಾಗಿ ಯಾದವ ಸಮುದಾಯವು ಹೆಚ್ಚು ಪ್ರಭಾವಶಾಲಿಯಾಗಿಲ್ಲ.
ಸೋಮವಾರ ಸಂಜೆ, ಮೋಹನ ಯಾದವ್ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಮಧ್ಯಪ್ರದೇಶದಲ್ಲಿ ಬಿಜೆಪಿಯು ಐತಿಹಾಸಿಕ ಗೆಲುವು ದಾಖಲಿಸಿದೆ. ಶಿವರಾಜ ಸಿಂಗ್‌ ಸರ್ಕಾರದ ಕಳೆದ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಅವರು ಬಿಜೆಪಿಗೆ ಧನ್ಯವಾದ ಅರ್ಪಿಸಿದರು. ‘ನಾನೊಬ್ಬ ಪಕ್ಷದ ಸಣ್ಣ ಕಾರ್ಯಕರ್ತ… ಈ ಅವಕಾಶಕ್ಕಾಗಿ ಪಕ್ಷಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.
ಉಜ್ಜಯಿನಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಾದವ್ ಅವರಿಗೆ ಜಗದೀಶ್ ದೇವದಾ ಮತ್ತು ರಾಜೇಂದ್ರ ಶುಕ್ಲಾ ಇಬ್ಬರು ಉಪಮುಖ್ಯಮಂತ್ರಿಗಳಾಗಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸ್ಪೀಕರ್ ಆಗಲಿದ್ದಾರೆ.

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 163 ಸ್ಥಾನಗಳನ್ನು ಗೆದ್ದಿದೆ. ಪಕ್ಷದ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಭೋಪಾಲ್‌ನಲ್ಲಿ ನಡೆದ ನೂತನ ಚುನಾಯಿತ ಶಾಸಕರ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರು ಉನ್ನತ ಹುದ್ದೆಗೆ ಮೋಹನ ಯಾದವ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಪಕ್ಷದ ನಾಯಕತ್ವದಿಂದ ನಿಯೋಜಿಸಲಾದ ವೀಕ್ಷಕರಲ್ಲಿ ಒಬ್ಬರಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರು ಮೋಹನ್ ಯಾದವ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.
ಶಿವರಾಜ್ ಸಿಂಗ್ ಚೌಹಾಣ ಅವರು ಯಾದವ್ ಅವರನ್ನು ಅಭಿನಂದಿಸಿದರು ಮತ್ತು ಅವರು ಮಧ್ಯಪ್ರದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಮೋಹನ ಯಾದವ್ ಯಾರು?
ಮೋಹನ ಯಾದವ್ ಅವರ ರಾಜಕೀಯ ಜೀವನವು 2013 ರಲ್ಲಿ ಶಾಸಕರಾಗಿ ಅವರ ಮೊದಲ ಚುನಾವಣೆಯೊಂದಿಗೆ ಪ್ರಾರಂಭವಾಯಿತು ಮತ್ತು ನಂತರದ 2018 ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅವರು ಮರು ಆಯ್ಕೆಯಾದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ನೇತೃತ್ವದ ಸರ್ಕಾರದಲ್ಲಿ ಜುಲೈ 2, 2020 ರಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ರಾಜ್ಯದ ರಾಜಕೀಯ ಲ್ಯಾಂಡ್‌ ಸ್ಕೇಪ್‌ನಲ್ಲಿ ಮೋಹನ ಯಾದವ್ ಅವರ ಪ್ರಭಾವವು ಮತ್ತಷ್ಟು ಗಟ್ಟಿಯಾಯಿತು.
1965ರ ಮಾರ್ಚ್ 25ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನಿಸಿದ ಮೋಹನ್ ಯಾದವ್ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಒಡನಾಟ ಹೊಂದಿದ್ದಾರೆ. ಅವರ ರಾಜಕೀಯ ಪ್ರಯತ್ನಗಳ ಜೊತೆಗೆ, ಅವರು ಉದ್ಯಮಿ ಎಂದೂ ಕರೆಯಲ್ಪಡುತ್ತಾರೆ.
ನವೆಂಬರ್‌ ನಲ್ಲಿ ನಡೆದ 2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಮೋಹನ ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೇತನ್ ಪ್ರೇಮನಾರಾಯಣ ಯಾದವ್ ವಿರುದ್ಧ 12,941 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಗೆಲುವು ಸತತ ಮೂರನೇ ಬಾರಿಗೆ ಶಾಸಕರಾಗಿ ಅವರು ಆಯ್ಕೆಯಾಗುವಂತೆ ಮಾಡಿತು.

ಪ್ರಮುಖ ಸುದ್ದಿ :-   ಪರೀಕ್ಷೆಯಲ್ಲಿ ಫೇಲ್‌ ಆದ್ರೂ 2 ವರ್ಷ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಹಿಳೆ..! ಸಬ್-ಇನ್ಸ್‌ಪೆಕ್ಟರ್ ಆಗಿ‌ ಪೋಸ್‌...!!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement