ಬ್ಲಿಂಕೆನ್- ಜೈಶಂಕರ್ ನಡುವೆ ಅಪ್ಘಾನಿಸ್ತಾನ ಸಮಸ್ಯೆ ಕುರಿತು ಚರ್ಚೆ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನಡುವೆ ಬುಧವಾರ ನಡೆದ ಮಾತುಕತೆ ವೇಳೆಯಲ್ಲಿ ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ಹೆಚ್ಚಿನ ಚರ್ಚೆ ನಡೆದಿದೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ಲಿಂಕೆನ್, ಹಿಂಸಾಚಾರ ಮತ್ತು ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅಪ್ಘಾನಿಸ್ತಾನದ ಭವಿಷ್ಯವನ್ನು ಬರೆಯಲಾಗದು ಎಂದು ಹೇಳಿದರು.
ನಗರ ಕೇಂದ್ರಗಳಲ್ಲಿ ತಾಲಿಬಾನ್ ಕ್ರಮಗಳಿಂದ ತೀವ್ರ ರೀತಿಯ ತೊಂದರೆಯಾಗುತ್ತಿದೆ. ಅಪ್ಘಾನ್ ಸರ್ಕಾರ ಮತ್ತು ಅಪ್ಘಾನ್ ಪಡೆಗಳಿಗೆ ಬೆಂಬಲ ನೀಡುತ್ತೇವೆ. ತಾಲಿಬಾನ್ ಮುಖಂಡ ಪ್ರಪಂಚದಾದ್ಯಂತ ಪ್ರಯಾಣಿಸಲು ಬಯಸುತ್ತಾನೆ ಮತ್ತು ಅದನ್ನು ಮಾಡಲು ಒಂದೇ ಒಂದು ಮಾರ್ಗವಿದೆ. ತಾಲಿಬಾನ್ ತನ್ನ ಉದ್ದೇಶ ಸಾಧಿಸಲು ತನ್ನ ಪಡೆಗಳಿಂದ ದೇಶವನ್ನು ಪಡೆಯುವುದು ಸರಿಯಾದ ಮಾರ್ಗವಲ್ಲ ಎಂದು ಸಭೆಯ ನಂತರ ಜೈಶಂಕರ್ ಹೇಳಿದರು.
ಅಪ್ಘಾನಿಸ್ತಾನದಿಂದ ಅಮೆರಿಕಾ ಪಡೆಗಳನ್ನು ಹಿಂಪಡೆದಿರುವ ಮಧ್ಯೆ, ಕ್ರಿಯೆಯು ಪರಿಣಾಮಗಳನ್ನು ಹೊಂದಿರುತ್ತದೆ ಮತ್ತು ಅವುಗಳನ್ನು ಎದುರಿಸಬೇಕಾಗುತ್ತದೆ ಎಂದು ಜೈಶಂಕರ್ ಹೇಳಿದರು.
ಯುದ್ಧ ಪೀಡಿತ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ವ್ಯಾಪಕ ಒಮ್ಮತವಿದೆ ಎಂದ ಸಚಿವರು, ಪಾಕಿಸ್ತಾನದ ಬಗ್ಗೆ ಕೆಲ ಅಪವಾದಗಳಿವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸ್ಕೂಟಿ ಮೇಲೆ ಹತ್ತಿದ ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಟ್ರಕ್ ; ಮುಂದೇನಾಯ್ತೆಂದರೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement