ಜುಲೈ ತಿಂಗಳಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ದಾಟಿದ ಭಾರತದ ಜಿಎಸ್​ಟಿ ಸಂಗ್ರಹ

ದೆಹಲಿ: ಜುಲೈ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹ 1,16,393 ಕೋಟಿ ರೂ.ಗಳಷ್ಟಾಗಿದ್ದು, ಆ ಪೈಕಿ ಸಿಜಿಎಸ್​ಟಿ 22,197 ಕೋಟಿ ರೂ.ಗಳು, ಎಸ್​ಜಿಎಸ್​ಟಿ 28,541 ಕೋಟಿ ರೂ.ಗಳು, ಐಜಿಎಸ್​ಟಿ 57,864 ಕೋಟಿ ರೂ.ಗಳು (ಇದರಲ್ಲಿ 27,900 ಕೋಟಿ ರೂ.ಗಳು ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂ.ಗಳು ಸೆಸ್ ಆಗಿದೆ. (815 ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ). ಈ ಮೇಲಿನ ಅಂಕಿ ಅಂಶಗಳಲ್ಲಿ, 2021 ಜುಲೈ 1ರಿಂದ ಜುಲೈ 31ರವರೆಗೆ ಫೈಲ್ ಆಗಿರುವ ಜಿಎಸ್ ಟಿಆರ್-3 ಬಿ ಮತ್ತು ಐಜಿಎಸ್​ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.
2021ರ ಜುಲೈ 1ರಿಂದ 5ರ ವರೆಗೆ ಜಿಎಸ್​ಟಿ ರಿಟರ್ನ್ 4,937 ಕೋಟಿ ರೂ.ಗಳು ಸಂಗ್ರಹವಾಗಿದೆ. ಇದನ್ನು ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಕೊವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರ ವರೆಗೆ, ಅಂದರೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರು ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ಪ್ರಕಟಿಸಲಾಗಿತ್ತು.
ಸರ್ಕಾರ 28,087 ಕೋಟಿ ಸಿಜಿಎಸ್​ಟಿ ಮತ್ತು 24,100 ಕೋಟಿ ಎಸ್​ಜಿಎಸ್​ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್​ಟಿ ಮತ್ತು 52,641 ಕೋಟಿ ಎಸ್​ಜಿಎಸ್​ಟಿ ಸಂಗ್ರಹ ಮಾಡಿದೆ.
ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್​ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 33ರಷ್ಟು ಹೆಚ್ಚಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇಕಡಾ 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇ.32ರಷ್ಟು ಹೆಚ್ಚಾಗಿದೆ.
ಜಿಎಸ್​ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ. ಆದರೆ ಕಳೆದ ಜೂನಲ್ಲಿ 1 ಲಕ್ಷ ರೂ.ಗಳಿಗಿಂತ ಕಡಿಮೆಯಾಗಿತ್ತು. ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೊವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್​ಡೌನ್ ವಿಧಿಸಿರುವುದು ಕಾರಣವಾಗಿತ್ತು.
ಕೊವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್​ಟಿ ಸಂಗ್ರಹ ಈ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗಳಿಗಿಂತಹೆಚ್ಚಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್​ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement