ಒಂದು ಇಲಿ ಹಿಡಿಯಲು ರೈಲ್ವೆಯ ಲಕ್ನೋ ವಿಭಾಗ ಮಾಡಿದ ಖರ್ಚು ಸರಾಸರಿ 41 ಸಾವಿರ ರೂ….!

ನವದೆಹಲಿ : ಭಾರತದಲ್ಲಿ ಇಲಿಯನ್ನು ಹಿಡಿಯುವುದು ದೊಡ್ಡ ವಿಷಯವೇನಲ್ಲ ಏಕೆಂದರೆ ಅದಕ್ಕೆ ಸ್ವಲ್ಪ ಪ್ರಯತ್ನ ಪಡಬೇಕಾಗಬಹುದು. ಆದರೆ ಉತ್ತರ ರೈಲ್ವೆಯ ಲಕ್ನೋ ವಿಭಾಗವು ಒಂದು ಇಲಿಯನ್ನು ಹಿಡಿಯಲು ಸರಾಸರಿ 41,000 ರೂ.ಗಳನ್ನು ವೆಚ್ಚ ಮಾಡಿದೆ ಎಂದು ವರದಿಯೊಂದು ಹೇಳಿದೆ.
ನೀಮಚ್ ಮೂಲದ ಕಾರ್ಯಕರ್ತ ಚಂದ್ರಶೇಖರ ಗೌರ್ ಎಂಬವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯೆಯಾಗಿ ಲಕ್ನೋ ವಿಭಾಗವು 2020 ಮತ್ತು 2022 ರ ನಡುವೆ 168 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದೆ ಅಂದರೆ ಪ್ರತಿ ಇಲಿಗೆ 41,000 ರೂ.ಗಳಷ್ಟು ವೆಚ್ಚವಾದಂತಾಗುತ್ತದೆ ಎಂದು ನ್ಯೂಸ್‌ ೯ ಲೈವ್‌ ವರದಿ ಮಾಡಿದೆ. .
ದೆಹಲಿ, ಅಂಬಾಲಾ, ಮೊರಾದಾಬಾದ್, ಲಕ್ನೋ ಮತ್ತು ಫಿರೋಜ್‌ಪುರ ಸೇರಿದಂತೆ ಐದು ವಿಭಾಗಗಳನ್ನು ಹೊಂದಿರುವ ಇಡೀ ಉತ್ತರ ರೈಲ್ವೆಗೆ ಇಲಿಗಳನ್ನು ಹಿಡಿಯಲು ಖರ್ಚು ಮಾಡಿದ ಮೊತ್ತವನ್ನು ಕೋರಿ ಗೌರ್ ಆರ್‌ಟಿಐ ಸಲ್ಲಿಸಿದ್ದರು. ಆದರೆ, ಲಕ್ನೋ ವಿಭಾಗ ಮಾತ್ರ ಗೌರ್‌ಗೆ ಉತ್ತರ ನೀಡಿದೆ.

ಇಲಿಗಳಿಂದ ಹಾನಿಯ ಬಗ್ಗೆ ಉತ್ತರವಿಲ್ಲ
ಗೌರ್ ಆರ್‌ಟಿಐ ಮೂಲಕ ಇಲಿಗಳಿಂದ ಉಂಟಾದ ಹಾನಿಯ ಮೌಲ್ಯವನ್ನು ಕೇಳಿದ್ದರು. ಇದಕ್ಕೆ ಲಕ್ನೋ ವಿಭಾಗವು ಉತ್ತರ ನೀಡುವುದರಿಂದ ತಪ್ಪಿಸಿಕೊಂಡಿದೆ. “ಹಾನಿಗೊಳಗಾದ ಸರಕುಗಳು ಮತ್ತು ವಸ್ತುಗಳಿಗೆ ವಿವರಗಳು ಲಭ್ಯವಿಲ್ಲ. ಹಾನಿಯ ಬಗ್ಗೆ ಯಾವುದೇ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಲಕ್ನೋ ವಿಭಾಗ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಉತ್ತರದ ಪ್ರಕಾರ, ಲಕ್ನೋ ಮೂಲದ M/S ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್‌ಗೆ ಇಲಿಗಳನ್ನು ಹಿಡಿಯಲು 2019 ರಿಂದ ಗುತ್ತಿಗೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ಅಂಬಾಲಾ ಮತ್ತು ದೆಹಲಿ ವಿಭಾಗಗಳ ಉತ್ತರ
ಆರ್‌ಟಿಐ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಅಂಬಾಲಾ ವಿಭಾಗವು ಏಪ್ರಿಲ್ 2020 ಮತ್ತು ಮಾರ್ಚ್ 2023 ರ ನಡುವೆ ಕೀಟಗಳು, ಇಲಿಗಳು ಮತ್ತು ಧೂಮಪಾನದ ವಿರುದ್ಧಮಾಡಿದ ಕೆಲಸ-ಕಾರ್ಯಗಳಿಗಾಗಿ  39.3 ರೂ.ಗಳನ್ನು ಲಕ್ಷವನ್ನು ಖರ್ಚು ಮಾಡಿದೆ ಎಂದು ಹೇಳಿದೆ. ಆದಾಗ್ಯೂ, ವಿಭಾಗವು ಪ್ರತ್ಯೇಕ ವೆಚ್ಚಗಳು ಮತ್ತು ಹಿಡಿದ ಇಲಿಗಳ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.
ಮತ್ತೊಂದೆಡೆ, ದೆಹಲಿ ವಿಭಾಗವು ತನ್ನ ಉತ್ತರದಲ್ಲಿ ಹೆಚ್ಚಿನ ವಿವರಗಳನ್ನು ನೀಡದೆ ಪ್ಯಾಸೆಂಜರ್ ರೈಲುಗಳಲ್ಲಿ ಕೀಟ ಮತ್ತು ದಂಶಕಗಳ ನಿಯಂತ್ರಣಕ್ಕಾಗಿ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement