
ಬೆಂಗಳೂರು: ತಮ್ಮ ಸಾಕು ಪ್ರಾಣಿಗಳು ಸತ್ತಾಗ, ಅವುಗಳು ಕಳೆದುಹೋದರೆ ಮಾಲೀಕರು ಪಡುವ ಪಾಡು ಅಷ್ಟಿಷ್ಟಲ್ಲ.
ಆದರೆ ನಗರದಲ್ಲಿ ಬೆಕ್ಕೊಂದನ್ನು ಕಳೆದುಕೊಂಡ ಮಾಲೀಕರೊಬ್ಬರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ, ಬೆಕ್ಕು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಜೊತೆಗೆ ಹುಡುಕಿಕೊಟ್ಟವರಿಗೆ 35 ಸಾವಿರ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬವರು, ತಮ್ಮ ಮನೆಯಲ್ಲಿ ಪರ್ಶಿಯನ್ ಕ್ಯಾಟ್ ಸಾಕಿದ್ದರು. ಈ ಬೆಕ್ಕು ಜನವರಿ 15ರಂದು ನಾಪತ್ತೆಯಾಗಿತ್ತು. ಹೀಗಾಗಿ ನಮ್ಮ ಬೆಕ್ಕು ಕಳ್ಳತನವಾಗಿದೆ. ಹುಡುಕಿ ಕೊಡುವಂತೆ ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ನಮ್ಮ ಮನೆಯ ಮೇಲ್ಛಾವಣಿಯಿಂದ ಬಂದು ಕಳ್ಳರು ತಮ್ಮ ಪರ್ಶಿಯನ್ ಕ್ಯಾಟ್ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಮೊಲದ ಜೊತೆಗೆ ಪರ್ಶಿಯನ್ ಬೆಕ್ಕು ಸಾಕಿದ್ದೆ. ಎರಡು ಅನ್ಯೋನ್ಯವಾಗಿದ್ದವು. ಈಗ ಯಾರೋ ಕದ್ದಿದ್ದಾರೆ. ಹುಡುಕಿ ಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ತಮ್ಮ ಬೆಕ್ಕು ಹುಡುಕಿ ಕೊಟ್ಟವರಿಗೆ 35 ಸಾವಿರ ಬಹುಮಾನ ಕೊಡುವುದಾಗಿಯೂ ಅವರು ಹೇಳಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ