ನವದೆಹಲಿ: ಒಂದೇ ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು, ಸೋಮವಾರ (ಮಾ.28) ಪೆಟ್ರೋಲ್ ಬೆಲೆಯಲ್ಲಿ 30 ಮತ್ತು ಡೀಸೆಲ್ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ.
ಮಾರ್ಚ್ 22 ರಿಂದ ಆರಂಭವಾದ ಇಂಧನ ದರ ಏರಿಕೆಯು ಮಾ. 24 ಒಂದು ದಿನ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳೂ ಏರಿಕೆ ಕಂಡಿವೆ. . ಉಕ್ರೇನ್-ರಷ್ಯಾ ಯುದ್ಧದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇಂಧನ ದರ ಏರಿಕೆಯಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗಲಿದೆ. ಕಳೆದ 7 ದಿನಗಳಲ್ಲಿ ಲೀಟರಿಗೆ 4 ರೂ.ಗಳಷ್ಟು ಇಂಧನ ದರ ಏರಿಕೆಯಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ
ಬೆಂಗಳೂರು
ಪೆಟ್ರೋಲ್: ಪ್ರತಿ ಲೀಟರ್ಗೆ 104.73 ರೂ.
ಡೀಸೆಲ್: ಪ್ರತಿ ಲೀಟರ್ಗೆ 85.04 ರೂ.
ದೆಹಲಿ
ಪೆಟ್ರೋಲ್: 99.41 ರೂ.
ಡೀಸೆಲ್: 90.77 ರೂ.
ಮುಂಬೈ
ಪೆಟ್ರೋಲ್: 114.18 ರೂ.
ಡೀಸೆಲ್: 98.48 ರೂ.
ಕೋಲ್ಕತ್ತಾ
ಪೆಟ್ರೋಲ್: 108.83 ರೂ.
ಡೀಸೆಲ್: 93.92 ರೂ.
ಚೆನ್ನೈ
ಪೆಟ್ರೋಲ್: 104.90 ರೂ.
ಡೀಸೆಲ್: 95.00 ರೂ.
ನಿಮ್ಮ ಕಾಮೆಂಟ್ ಬರೆಯಿರಿ