ಹೊಸದಿಲ್ಲಿ: 2022ರ ಬಜೆಟ್‌ನಲ್ಲಿ 5G ಟೆಕ್ನಾಲಜಿ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಮೈಕ್ರೋಚಿಪ್ ಹೊಂದಿರುವ ಇ-ಪಾಸ್‌ಪೋರ್ಟ್‌ಗಳನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಅವರು ಪ್ರಕಟಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳು 5G ಮೊಬೈಲ್ ಸೇವೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಸ್ಪೆಕ್ಟ್ರಮ್ ಅನ್ನು 2022-23 ರೊಳಗೆ ಹರಾಜು ಮಾಡಲಾಗುವುದು ಎಂದು ಘೋಷಿಸಿದರು.
ಆದರೆ, 5G ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಲಭ್ಯವಾಗಲು 2023ರ ವರೆಗೆ ಕಾಯಬೇಕು. ಈ ವರ್ಷ ತರಂಗಾಂತರ (ಸ್ಪೆಕ್ಟ್ರಮ್) ಹರಾಜು ನಡೆಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಮೇ 2022ರ ವರೆಗೆ, ಟೆಲಿಕಾಂ ಕಂಪನಿಗಳು 5G ಪ್ರಯೋಗಕ್ಕೆ ಅನುಮತಿ ಪಡೆದಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಅಗ್ಗದ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು. 5G ತಂತ್ರಜ್ಞಾನಕ್ಕೆ ಅಗತ್ಯ ಉತ್ಪಾದನೆ ಆರಂಭಿಸಲು ಸರ್ಕಾರವು ಶೀಘ್ರದಲ್ಲೇ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI) ಅನ್ನು ಘೋಷಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
5ಜಿ ತಂತ್ರಜ್ಞಾನ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಕಡಿಮೆ ದರದಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳಿಗಾಗಿ ಆರ್ & ಡಿಗಾಗಿ ವಾರ್ಷಿಕ ಯುನಿವರ್ಸಲ್ ಅಬ್ಲಿಗೇಶನ್ ಸರ್ವಿಸ್ ಫಂಡ್ (ಯುಎಸ್‌ಒ) 5% ಒದಗಿಸಲಾಗುವುದು. ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಒಟ್ಟು ಆದಾಯದ 5% ಅನ್ನು ಸರ್ಕಾರಕ್ಕೆ ಪಾವತಿಸುತ್ತವೆ. ಈ ಮೊತ್ತವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಂವಹನ ಸೌಲಭ್ಯಗಳನ್ನು ಒದಗಿಸಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.
ದೇಶದ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ವಿವಿಧ ನಗರಗಳಲ್ಲಿ 5G ಪ್ರಯೋಗಗಳನ್ನು ಮಾಡುತ್ತಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ, ವೊಡಾಫೋನ್ ಐಡಿಯಾ (VI) ತನ್ನ 5G ನೆಟ್‌ವರ್ಕ್‌ನಲ್ಲಿ ಲೈವ್ ಟ್ರಯಲ್‌ನಲ್ಲಿ 4.2Gbps ವೇಗವನ್ನು ಸಾಧಿಸಿದೆ. ಈ ಪ್ರಯೋಗವನ್ನು ಪುಣೆಯಲ್ಲಿ ನವೆಂಬರ್ 26 ರಂದು ನಡೆಸಲಾಯಿತು ಮತ್ತು ಈ ವೇಗವು 26 GHz ಸ್ಪೆಕ್ಟ್ರಮ್ ಬ್ಯಾಂಡ್ (ಮಿಲಿಮೀಟರ್ ಬ್ಯಾಂಡ್) ನಲ್ಲಿ ಕಂಡುಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ