ಮನುಷ್ಯನ ಒಟ್ಟು ಆಯುಷ್ಯ 150 ವರ್ಷ..?

ಒಬ್ಬ ಮನುಷ್ಯನ ಆಯುಷ್ಯ ಎಷ್ಟಿರಬಹುದು? 100 ವರ್ಷ ಇದು ಸಾಮಾನ್ಯ ಉತ್ತರ. ಆದರೆ, ಕೆಲ ದೇಶಗಳಲ್ಲಿ ನೂರು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇನ್ನು ಬದುಕಿರುವುದರಿಂದ ಮನುಷ್ಯನ ಸರಾಸರಿ ಆಯುಷ್ಯ 150 ವರ್ಷ ಇರಬಹುದೇ ಎಂಬ ಅನುಮಾನ ವಿಜ್ಞಾನಿಗಳದ್ದು.
ಫ್ರೆಂಚ್ ಮೂಲದ ಮಹಿಳೆಯೊಬ್ಬರು ತಮ್ಮ 122ನೇ ವಯಸ್ಸಿನಲ್ಲೂ ಇನ್ನು ಆರೋಗ್ಯವಾಗಿರುವುದು ಇಂತಹ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 1888ರಲ್ಲಿ ಜನಿಸಿರುವ ಜೆನ್ನಿ ಕಾಲ್ಮೆಂಟ್ ಎಂಬ ಮಹಿಳೆ ಇನ್ನು ಕೆಲ ವರ್ಷ ಬದುಕಿರುತ್ತಾರಂತೆ.
ಒಕಿನೋವಾ, ಜಪಾನ್, ಸರ್ದಿಯಾನಾ,ಇಟಲಿ ಮತ್ತಿತರ ಕೆಲ ರಾಷ್ಟ್ರಗಳಲ್ಲಿ ಕೆಲವರು ನೂರಿಪ್ಪತ್ತು ವರ್ಷ ಮೇಲ್ಟಟ್ಟು ಜೀವಿಸಿರುವ ಉದಾಹರಣೆಗಳಿವೆ. ಇದೀಗ ಫ್ರೆಂಚ್ ಮಹಿಳೆ 122 ವರ್ಷದಲ್ಲೂ ಇನ್ನು ಗಟ್ಟಿಮುಟ್ಟಾಗಿರುವುದರಿಂದ ಮನುಷ್ಯನ ನಿಜವಾದ ಆಯುಷ್ಯ ಎಷ್ಟು ಎಂಬ ಪ್ರಶ್ನೆ ಎದುರಾಗಿದೆ.
ಈ ಹಿಂದೆ ನಡೆಸಿದ್ದ ಕೆಲ ಸಂಶೋಧನೆಗಳು ಮನುಷ್ಯ 140 ವರ್ಷದವರೆಗೆ ಬದುಕಬಹುದು ಎಂದು ಅಂದಾಜಿಸಿದ್ದವು. ಇದೀಗ ಹೊಸ ಸಂಶೋಧನೆಯಲ್ಲಿ ಒಬ್ಬ ಮನುಷ್ಯ 150 ವರ್ಷದವರೆಗೆ ಜೀವಿಸಬಹುದು ಎನ್ನುವುದು ಪತ್ತೆಯಾಗಿದೆ.
ಉಡಾಫೆ ಜೀವನ ಮಾಡಿದೆ ಇದು ಸಾಧ್ಯವಿಲ್ಲ. ಕಷ್ಟಪಟ್ಟು ದುಡಿದು, ಆರೋಗ್ಯವಂತ ಜೀವನ ನಡೆಸುವುದರೀಂದ ಮಾತ್ರ ಶತಾಯುಷಿಗಳಾಗಿ ಬದುಕಬಹುದು ಎಂದು ಹೇಳುತ್ತದೆ ಅಧ್ಯಯನ.

ಪ್ರಮುಖ ಸುದ್ದಿ :-   ವೀಡಿಯೊ | ಹತ್ತಿರ ಬಂದು, ಕಾರಿನ ಕೆಳಕ್ಕೆ ತೂರಿ ಕಾರನ್ನು ಸ್ವಯಂ ಎತ್ತಿ-ಒಯ್ದು, ಪರ್ಫೆಕ್ಟ್‌ ಪಾರ್ಕ್ ಮಾಡುವ ರೋಬೋಟ್ ವ್ಯಾಲೆಟ್ | ವೀಕ್ಷಿಸಿ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement