ನವದೆಹಲಿ: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿ ಏಪ್ರಿಲ್ 3 ರಂದು ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ನೀಡಿದ ತೀರ್ಪು ಸ್ಪಷ್ಟವಾಗಿ ತಪ್ಪಾಗಿದೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಉಮರ್ ಅಟಾ ಬಂಡಿಯಲ್ ಗುರುವಾರ ಹೇಳಿದ್ದಾರೆ ಎಂದು ಡಾನ್ (DAWN) ಪತ್ರಿಕೆ ವರದಿ ಮಾಡಿದೆ.
ಸಿಜೆಪಿ ಬಂಡಿಯಲ್ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಅವರ ತೀರ್ಪು ಪ್ರಾಥಮಿಕವಾಗಿ 95 ನೇ ವಿಧಿಯ ಉಲ್ಲಂಘನೆಯಾಗಿದೆ. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಉಮರ್ ಅತಾ ಬಂಡಿಯಲ್ ಅವರು ರಾಷ್ಟ್ರೀಯ ಅಸೆಂಬ್ಲಿ ಪ್ರಕ್ರಿಯೆಯ ಪ್ರಕರಣದ ಅಂತಿಮ ತೀರ್ಪಿಗೆ ಮುಂಚಿತವಾಗಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಇಂದು, ಸುಪ್ರೀಂ ಕೋರ್ಟ್ ಸತತ ಐದನೇ ದಿನವೂ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿತು. ನ್ಯಾಶನಲ್ ಅಸೆಂಬ್ಲಿಯ ಡೆಪ್ಯೂಟಿ ಸ್ಪೀಕರ್ ಅವರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸುವುದರ ಜೊತೆಗೆ ಅಧ್ಯಕ್ಷರು ಸಂಸತ್ತನ್ನು ವಿಸರ್ಜನೆ ಮಾಡುವುದರ ಬಗ್ಗೆ ನಡೆಯುತ್ತಿರುವ ಪ್ರಮುಖ ವಿಚಾರಣೆಯು ಸಂಬಂಧಿಸಿದೆ.
ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಲ್ ನೇತೃತ್ವದ ನ್ಯಾಯಮೂರ್ತಿ ಇಜಾಜುಲ್ ಅಹ್ಸಾನ್, ನ್ಯಾಯಮೂರ್ತಿ ಮಜರ್ ಆಲಂ ಖಾನ್ ಮಿಯಾಂಖೇಲ್, ನ್ಯಾಯಮೂರ್ತಿ ಮುನಿಬ್ ಅಖ್ತರ್ ಮತ್ತು ನ್ಯಾಯಮೂರ್ತಿ ಜಮಾಲ್ ಖಾನ್ ಮಂಡೋಖೇಲ್ ಅವರನ್ನೊಳಗೊಂಡ ಪಂಚಸದಸ್ಯ ಪೀಠವು ಗುರುವಾರ ಬೆಳಿಗ್ಗೆ ಈ ವಿಷಯವನ್ನು ಕೈಗೆತ್ತಿಕೊಂಡಿತು.
ಡಾನ್ ಪತ್ರಿಕೆಯ ಪ್ರಕಾರ, ದೇಶದ ಸಾಂವಿಧಾನಿಕ ಬಿಕ್ಕಟ್ಟು ಮತ್ತು ಸಂವಿಧಾನದ ಪ್ರಕಾರ ಎಲ್ಲವೂ ನಡೆಯುತ್ತಿದೆಯೇ ಎಂದು ಬಂಡಿಯಲ್ ಅಧ್ಯಕ್ಷ ಆರಿಫ್ ಅಲ್ವಿ ಅವರ ವಕೀಲ ಸೆನೆಟರ್ ಅಲಿ ಜಾಫರ್ ಅವರನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷರ ವಕೀಲ ಜಾಫರ್ ತಮ್ಮ ವಾದವನ್ನು ಮುಗಿಸುತ್ತಿದ್ದಂತೆ, ಅವರು ಈ ಅವಲೋಕನ ಮಾಡಿದರು.
ಒಂದು ಹಂತದಲ್ಲಿ, ದೇಶವು ಸಾಂವಿಧಾನಿಕ ಬಿಕ್ಕಟ್ಟಿನ ಮಧ್ಯೆ ಇದೆಯೇ ಅಥವಾ ಇಲ್ಲವೇ ಎಂದು ಹೇಳಲು ಏಕೆ ನಿರಾಕರಿಸುತ್ತಿದ್ದೀರಿ ಎಂದು ಬಂಡಿಯಲ್ ವಕೀಲರನ್ನು ಪ್ರಶ್ನಿಸಿದರು. ಎಲ್ಲವೂ ಸಂವಿಧಾನದ ಪ್ರಕಾರ ನಡೆಯುತ್ತಿದ್ದರೆ, ಬಿಕ್ಕಟ್ಟು ಎಲ್ಲಿದೆ?” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.
ವಿಚಾರಣೆ ವೇಳೆ ಮಿಯಾಂಖೇಲ್ ಅವರು ಪ್ರಧಾನ ಮಂತ್ರಿ ಜನಪ್ರತಿನಿಧಿಯೇ ಎಂದು ಜಾಫರ್ ಅವರನ್ನು ಕೇಳಿದರು. ವಕೀಲರು ಸಕಾರಾತ್ಮಕವಾಗಿ ಉತ್ತರಿಸಿದರು.
ಸಂಸತ್ತಿನಲ್ಲಿ ಸಂವಿಧಾನವನ್ನು ಉಲ್ಲಂಘಿಸಿದರೆ ಪ್ರಧಾನಿಯನ್ನು ರಕ್ಷಿಸಬಹುದೇ ಎಂದು ಮಿಯಾಂಖೇಲ್ ಕೇಳಿದರು. ಸಂವಿಧಾನವು ಒತ್ತಿಹೇಳುವ ನಿಯಮಗಳಿಗೆ ಅನುಸಾರವಾಗಿ ರಕ್ಷಿಸಬೇಕು ಎಂದು ಜಾಫರ್ ಉತ್ತರಿಸಿದರು. ಸಂವಿಧಾನವನ್ನು ರಕ್ಷಿಸಲು ಪ್ರತಿಯೊಂದು ವಿಧಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಒಬ್ಬ ಸದಸ್ಯನಲ್ಲದೆ ಇಡೀ ಸಭೆಯ ವಿರುದ್ಧ ಅನ್ಯಾಯವನ್ನು ನಡೆಸಿದಾಗ ಏನಾಗುತ್ತದೆ ಎಂದು ಬಂದಿಯಲ್ ಕೇಳಿದರು.
ಗುರುವಾರ ಪ್ರಕರಣದ ಕುರಿತು ಉಪ ಸ್ಪೀಕರ್ ಖಾಸಿಂ ಸೂರಿ ಅವರ ವಕೀಲ ನಯೀಮ್ ಬೊಖಾರಿ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಖಲೀದ್ ಜಾವೇದ್ ಖಾನ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. .
ನಿಮ್ಮ ಕಾಮೆಂಟ್ ಬರೆಯಿರಿ