ಬಾಹ್ಯಾಕಾಶದಲ್ಲಿ ಸಿನೆಮಾ ನಿರ್ಮಿಸಲು ರಷ್ಯಾ ಸಿದ್ಧತೆ..!

ಮಾಸ್ಕೋ: ರಷ್ಯಾದ ಇಬ್ಬರು ಅಂತರಿಕ್ಷ ಯಾನಿಗಳು ಹಾಗೂ ಸಿನೆಮಾ ಕ್ಷೇತ್ರದ ಇಬ್ಬರು ಸೇರಿಕೊಂಡು ಮುಂದಿನ ತಿಂಗಳು ಬಾಹ್ಯಾಕಾಶದಲ್ಲಿ ಸಿನೆಮಾ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಿದ್ದಾರೆ…!
ಇದು ನಡೆದರೆ ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಂಡ ಪ್ರಪ್ರಥಮ ಸಿನೆಮ ಇದಾಗಲಿದೆ ಎಂದು ನಟ, ನಿರ್ದೇಶಕ ಕ್ಲಿಮ್ ಶಿಪೆಂಕೊ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.
ತಾವು 4 ಮಂದಿ ಸೋಯುಜ್ ಎಂಎಸ್-19 ಬಾಹ್ಯಾಕಾಶ ನೌಕೆಯಲ್ಲಿ ಅಕ್ಟೋಬರ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದು ಅಲ್ಲಿ ಸಿನೆಮಾದ ಚಿತ್ರೀಕರಣ ಮಾಡಲಿದ್ದೇವೆ. ಓರ್ವ ಸಾಮಾನ್ಯ ವ್ಯಕ್ತಿಯ ಕುರಿತ ಸಿನೆಮಾ ಇದಾಗಲಿದೆ. ಬಾಹ್ಯಾಕಾಶ ಯಾನದ ಬಗ್ಗೆ ಕನಸಿನಲ್ಲೂ ಯೋಚಿಸಿರದ ಓರ್ವ ವೈದ್ಯ, ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಅಂತರಿಕ್ಷ ಯಾನಿಯ ಜೀವ ಉಳಿಸುವ ಕಥೆಯ ಸಿನೆಮಾ ಇದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವೃತ್ತಿನಿರತ ಗಗನ ಯಾನಿಗಳೂ ಸಿನೆಮಾದಲ್ಲಿ ಇರಲಿದ್ದಾರೆ ಎಂದು ತಿಳಿಸಿದ ಅವರು ತಾನು ಈ ಸಿನಿಮಾದಲ್ಲಿಲ್ಲ. ಆದರೂ, ಬಾಹ್ಯಾಕಾಶದಂತಹ ಅಸಾಮಾನ್ಯ ಪ್ರದೇಶದಲ್ಲಿ ಸಿನೆಮಾವನ್ನು ಯಾವ ರೀತಿ ನಿರ್ಮಿಸುತ್ತಾರೆ ಎಂಬ ಬಗ್ಗೆ ನನಗೂ ಕುತೂಹಲವಿದೆ ಎಂದು ಕಮಾಂಡರ್ ಆಂಟನ್ ಶಕಲೆರೋವ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement