ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಭಾನುವಾರ ಇ ಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆದೇಶದ ಮೇರೆಗೆ ಸೋಮವಾರ ಎಫ್ಐಆರ್ ದಾಖಲಾಗಿದ್ದು, ಶಮಿ ಪರವಾಗಿ ಅವರ ಸಹೋದರ ಹಸೀಬ್ ಈ ದೂರು ದಾಖಲಿಸಿದ್ದಾರೆ ಮತ್ತು ಬೆದರಿಕೆ ಇ ಮೇಲ್ ಕಳುಹಿಸಿದವರು ರಜಪೂತ್ ಸಿಂದರ್ ಎಂಬ ಹೆಸರಿನಿಂದ ಬೆದರಿಕೆ ಇ-ಮೇಲ್ ಬಂದಿದೆ ಎಂದು ಹೇಳಿದ್ದಾರೆ. ‘ 1 ಕೋಟಿ ರೂಪಾಯಿ ಹಣ ನೀಡಬೇಕು. ಹಣ ನೀಡದಿದ್ದರೆ ಪರಿಣಾಮಗಳು ಕೆಟ್ಟದಾಗಿರಲಿದ್ದು, ನಿನ್ನನ್ನು ಕೊಲ್ಲುತ್ತೇವೆ. ಸರ್ಕಾರ ನಮಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಈ ಮೇಲ್ನಲ್ಲಿ ಬಂದಿದೆ ಎಂದು ಶಮಿ ಅವರ ಸಹೋದರ ಹಸೀಬ್ ತಿಳಿಸಿದ್ದಾರೆ. ಇ ಮೇಲ್ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹಸೀಬ್ ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಕಳುಹಿಸುವವರು ಸನ್ ರೈಸರ್ಸ್ ಹೈದರಾಬಾದ್ ಜೊತೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಆಡುತ್ತಿರುವ ಕ್ರಿಕೆಟಿಗನಿಂದ ಒಂದು ಕೋಟಿ ರೂ.ಗಳ ಹಣದ ಬೇಡಿಕೆ ಇಟ್ಟಿದ್ದಾರೆ. ಎಫ್ಐಆರ್ ಅನ್ನು ಭಾರತೀಯ ದಂಡ ಸಂಹಿತೆ (ಬಿಎನ್ಎಸ್), 2023 ಸೆಕ್ಷನ್ 308(4), ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆ, 2008 ಸೆಕ್ಷನ್ 66ಡಿ ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆ, 2008 ಸೆಕ್ಷನ್ 66ಇ ಅಡಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ