ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಆರೋಪ; ‘ಧುರಂಧರ್’ ನಟನ ಬಂಧನ

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಕಳೆದ ಹತ್ತು ವರ್ಷಗಳಿಂದ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಧುರಂಧರ್’ ನಲ್ಲಿ ನಟಿಸಿದ್ದ ನದೀಮ್ ಖಾನ್ ಅವರನ್ನು ಜನವರಿ 22 ರಂದು ಬಂಧಿಸಲಾಗಿದ್ದು, ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.
 41 ವರ್ಷದ ಸಂತ್ರಸ್ತ ಮಹಿಳೆಯು ವಿವಿಧ ನಟರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನದೀಮ್ ಖಾನ್ ಅವರ ಪರಿಚಯವಾಗಿ ಇಬ್ಬರೂ ಹತ್ತಿರವಾಗಿದ್ದರು.
ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ನಟ, ಕಳೆದ 10 ವರ್ಷಗಳಿಂದ ಮಾಲ್ವಾನಿ ಮತ್ತು ವರ್ಸೋವಾದಲ್ಲಿರುವ ತನ್ನ ನಿವಾಸದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
 ನಟ ಮದುವೆಗೆ ನಿರಾಕರಿಸಿದ ನಂತರ ಮಹಿಳೆ ವರ್ಸೋವಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಘಟನೆಯು ಮೊದಲು ಮಾಲ್ವಾನಿ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ವರ್ಸೋವಾ ಪೊಲೀಸರು ಪ್ರಕರಣವನ್ನು ‘ಶೂನ್ಯ ಎಫ್‌ಐಆರ್’ ಅಡಿಯಲ್ಲಿ ದಾಖಲಿಸಿ, ಮುಂದಿನ ತನಿಖೆಗಾಗಿ ಮಾಲ್ವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement