ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ; ಯಾವ ಜಿಲ್ಲೆಗೆ ಯಾರು ? ಪಟ್ಟಿ ಇಲ್ಲಿದೆ

ಬೆಂಗಳೂರು : ಕರ್ನಾಟಕದ ವಿವಿಧ ಜಿಲ್ಲೆಗಳ ಕಾಂಗ್ರೆಸ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿ (DCC) ಅಧ್ಯಕ್ಷರ ನೇಮಕಾತಿಗೆ ಕಾಂಗ್ರೆಸ್‌ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಐಸಿಸಿ ವೀಕ್ಷಕರ ವರದಿಗಳ ಆಧಾರದ ಮೇಲೆ ಜಿಲ್ಲಾವಾರು ಕಾಂಗ್ರೆಸ್ ಸಂಘಟನೆಯ ಕಾರ್ಯವೈಖರಿ ಹಾಗೂ ಮುಖಂಡರು-ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಎಐಸಿಸಿ ವೀಕ್ಷಕರು ಸಲ್ಲಿಸಿದ ಸಮಗ್ರ ವರದಿಗಳನ್ನು ಸ್ವೀಕರಿಸಿದ ನಂತರ, ಪ್ರತಿ ವೀಕ್ಷಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದು ಎಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ನೂತನ ಜಿಲ್ಲಾಧ್ಯಕ್ಷರ ಪಟ್ಟಿ
ಬಾಗಲಕೋಟೆ: ದಯಾನಂದ ಎಸ್. ಪಾಟೀಲ
ಬೆಂಗಳೂರು ಉತ್ತರ : ಅಬ್ದುಲ್ ವಾಜಿದ್
ಬೆಂಗಳೂರು ದಕ್ಷಿಣ: ಒ. ಮಂಜುನಾಥ
ಬೆಂಗಳೂರು ಪೂರ್ವ: ಡಿ.ಕೆ. ಮೋಹನಬಾಬು
ಬೆಂಗಳೂರು ಪಶ್ಚಿಮ : ಹನುಮಂತರಾಯಪ್ಪ
ಬೆಂಗಳೂರು ಸೆಂಟ್ರಲ್: ಜೆ. ಶರವಣನ್
ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನಕುಮಾರ
ಚಿಕ್ಕೋಡಿ : ಲಕ್ಷ್ಮಣರಾವ್ ಚಿಂಗಳೆ
ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ (ರಾಜಾ ಸಲೀಂ)
ಬೆಳಗಾವಿ ಗ್ರಾಮಾಂತರ: ಬಸವರಾಜ ಶೇಗಾವಿ
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ
ಬಳ್ಳಾರಿ ಗ್ರಾಮಾಂತರ : ಕೆ. ಮಲ್ಲಿಕಾರ್ಜುನ
ಬೀದರ: ಅಬ್ದುಲ್ ಮನ್ನಾನ್ ಸೇಠ್
ಚಾಮರಾಜನಗರ: ಜೆ. ಯೋಗೇಶ
ಚಿಕ್ಕಮಗಳೂರು: ಎಚ್.ಪಿ. ಮಂಜೇಗೌಡ
ದಕ್ಷಿಣ ಕನ್ನಡ : ಪದ್ಮರಾಜ ಆರ್. ಪೂಜಾರಿ
ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ
ಧಾರವಾಡ ಗ್ರಾಮಾಂತರ : ಚಂದ್ರಶೇಖರ ಜುಟ್ಟಲ
ಗದಗ : ವಾಸಣ್ಣ ಕುರಡಗಿ
ಕಲಬುರಗಿ: ಡಾ. ಕಿರಣ ಎ. ದೇಶಮುಖ್
ಹಾಸನ: ಶಶಿಧರ್ ಜಿ.ಬಿ.
ಹಾವೇರಿ: ಸಂಜೀವಕುಮಾರ ನೀರಲಗಿ
ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ. ಡಂಗನವರ
ಕೊಡಗು : ಧರ್ಮಜ ಉತ್ತಪ್ಪ
ಕೋಲಾರ: ಎನ್. ನಾರಾಯಣಸ್ವಾಮಿ
ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ
ಮಂಡ್ಯ: ಕುಮಾರ ಕೊಪ್ಪ
ಮೈಸೂರು ನಗರ: ಆರ್. ಮೂರ್ತಿ
ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ
ರಾಯಚೂರು: ಕೆ. ಶಾಂತಪ್ಪ
ರಾಮನಗರ: ಸಿ.ಎನ್. ವೆಂಕಟೇಶ
ಶಿವಮೊಗ್ಗ: ಎಚ್.ಸಿ. ಯೋಗೇಶ
ಉಡುಪಿ: ಕಿಶನ್ ಕುಮಾರ ಹೆಗ್ಡೆ
ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ
ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ

ಪ್ರಮುಖ ಸುದ್ದಿ :-   ಸಚಿವ ಸತೀಶ ಜಾರಕಿಹೊಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ. ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement