ಉಡುಪಿ: ಯಾರಿಗೂ ಅನುಮಾನ ಬರಬಾರದು ಎಂದು ಕಾರಿಗೆ ಮದುವೆ ವಾಹನದಂತೆ ಅಲಂಕಾರ ಮಾಡಿ, ಅದರಲ್ಲಿ ಕಳುವು ಮಾಡಿದ್ದ ದನಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. ಮದುವೆ ವಾಹನವನ್ನು ಎಸ್ಕಾರ್ಟ್ ಮಾಡಿಕೊಂಡು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕಾರ್ಯಾಚರಣೆ ನಡೆಸಿದ 16 ದನಗಳನ್ನುಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
ದನಗಳನ್ನು ಸಾಗಾಟ ಮಾಡಲು ಈ ಖದೀಮರು ಬಳಸಿದ ಹೊಸತಂತ್ರಗಾರಿಕೆ ಸಾರ್ವಜನಿಕರನ್ನು ದಂಗುಬಡಿಸಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಮದುವೆಗೆ ತೆರಳುವ ವಾಹನದ ರೀತಿ ಕಾರನ್ನು ಸಂಪೂರ್ಣ ಡೆಕೋರೇಷನ್ ಮಾಡಲಾಗಿತ್ತು. ಡೆಕೋರೇಷನ್ ಮಾಡಿದ ಕಾರಿನಲ್ಲಿ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಮಾಹಿತಿ ಆಧರಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ನಂತರ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದುವೆ ಕಾರ್ಯಕ್ರಮಕ್ಕೆ ವಾಹನ ಹೋಗುತ್ತದೆ ಎಂದು ಕಾಣುವಂತೆ ಅಲಂಕಾರಿ ಮಾಡಿ ನಂತರ ಆ ವಾಹನದಲ್ಲಿ ಕಳುವು ಮಾಡಿದ ಹಸುಗಳನ್ನು ಯಾರಿಗೂ ಗೊತ್ತಾಗದಂತೆ ಸಾಗಿಸುತ್ತಿದ್ದರು. ಈ ಬಗ್ಗೆ ಸುಳಿವು ದೊರೆತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರಕರಣವನ್ನು ಭೇದಿಸಿದ್ದು, 16 ದನಕರುಗಳನ್ನು ರಕ್ಷಿಸಿದ್ದಾರೆ.
ಕರಾವಳಿ ಜಿಲ್ಲೆ ಉಡುಪಿಯಲ್ಲಿ ದನಗಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲಲ್ಲಿ ದಾಳಿಗಳು ನಡೆದರೂ ಬಿಡಾಡಿ ದನಗಳನ್ನು ತುಂಬಿಸಿಕೊಂಡು ಕಳ್ಳತನ ಮಾಡುವ ಘಟನೆ ನಿರಂತರವಾಗಿ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ