ಮಮತಾ ಗಾಯಗೊಂಡ ಘಟನೆ ‘ಅಪಘಾತ, ದಾಳಿ ಅಲ್ಲ’: ಚುನಾವಣಾ ಆಯೋಗಕ್ಕೆ ಪೊಲೀಸ್ ವರದಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಗಾಯಗೊಂಡ ಘಟನೆ ಅಪಘಾತವಾಗಿದೆ ಎಂದು ಪೊಲೀಸರು ಚುನಾವಣಾ ಆಯೋಗಕ್ಕೆ ಗುರುವಾರ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಇದು ತನ್ನ ಮೇಲೆ ನಡೆದಿದ್ದ ಹಲ್ಲೆ ಎಂದು ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆ.
ತೃಣಮೂಲ ಕಾಂಗ್ರೆಸ್ ಸದಸ್ಯರು ಸೇರಿದಂತೆ ಸ್ಥಳೀಯ ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ವಿಡಿಯೋ ತುಣುಕನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬಂದಿರುವುದಾಗಿ ವರದಿ ಹೇಳಿದೆ. ಕಿಕ್ಕಿರಿದ ಬಜಾರ್ ಪ್ರದೇಶದ ಮೂಲಕ ಬರುವಾಗ ಮಮತಾ ಅವರಿದ್ದ ಕಾರು ಸಣ್ಣ ಕಬ್ಬಿಣದ ಕಂಬಕ್ಕೆ ಬಡಿದಾಗ ಮುಖ್ಯಮಂತ್ರಿಯು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.
ಝಡ್‌ ಪ್ಲಸ್‌ ಭದ್ರತೆ ಹೊಂದಿರುವ (ಅತ್ಯುನ್ನತ ಭದ್ರತೆ ಮಟ್ಟ)ಬ್ಯಾನರ್ಜಿ, ತನ್ನ ಕಾರಿನ ಬಾಗಿಲು ತೆರೆದಿರುವ ಕಾರು ಸುತ್ತುವರಿದಿದ್ದ ಜನರತ್ತ ಕೈಬೀಸುತ್ತಿದ್ದಾಗ ಕಿರಿದಾದ ಬೀದಿಯಲ್ಲಿರುವ ಕಂಬಕ್ಕೆ ಕಾರು ಬಡಿದ ನಂತರ ಕಾರಿನ ಬಾಗಿಲು ಮುಚ್ಚಿದ್ದರಿಂದ ಅವರ ಕಾಲುಗಳಿಗೆ ಗಾಯವಅಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಮ್ಮನ್ನು ತಳ್ಳಿದ ನಾಲ್ಕೈದು ಜನರಿಂದ ತಮ್ಮ ಮೇಲೆ ಹಲ್ಲೆ ನಡೆದಿದ್ದು, ಅವರು ದೂಡಿದ್ದಕ್ಕೆ ಕಾರಿನ ಬಾಗಿಲಗೆ ಬಡಿದು ಗಾಯಗಳಾಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಸಂಜೆ ಆರೋಪಿಸಿದ್ದರು. ಈ ವಿದ್ಯಮಾನವನ್ನು ಬಿಜೆಪಿ ಹಾಗೂ ಎಡಪಕ್ಷಗಳು ಚುನಾವಣಾ “ನಾಟಕ” ಎಂದು ಎಂದು ಹೇಳಿದ್ದವು. ಅಷ್ಟೇ ಏಕೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಸಹ ಇದೇ ಮಾತನ್ನು ಹೇಳಿದ್ದರು. ಆದರೆ ಕೆಲ ಕಾಂಗ್ರೆಸ್‌ ನಾಯಕರು ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರು ಈ ಗಟನೆಯನ್ನು ಖಂಡಿಸಿದ್ದರು. ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯ ಡಿಜಿಪಿ ವರ್ಗ ಮಾಡಿದ್ದ ಕೆಲವೇ ಗಂಟೆಗಳಲ್ಲಿ ನಂದಿಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿದ್ದು, ಈ ಘಟನೆ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿತ್ತು.
ಏತನ್ಮಧ್ಯೆ, ಟಿಎಂಸಿ ಮುಖಂಡ ಶೇಖ್ ಸೂಫಿಯಾನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರ್ಬಾ ಮದಿನಿಪುರ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್‌ 341 (ತಪ್ಪಾದ ಸಂಯಮಕ್ಕಾಗಿ ಶಿಕ್ಷೆ) ಮತ್ತು 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡಿದ ಶಿಕ್ಷೆ) ಅಡಿ ಎಫ್‌ಐಆರ್ ಮಾಡಲಾಗಿತ್ತು.ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಚುನಾವಣಾ ಆಯೋಗವು ಆದೇಶಿಸಿತ್ತು.
ದಾಳಿ ನಡೆದ ಬಗ್ಗೆ ಪುರಾವೆಗಳಿಲ್ಲ:ಪೊಲೀಸ್ ವರದಿಯ ಪ್ರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ “ಯೋಜಿತ ದಾಳಿ” ಯ ಸಾಬೀತುಪಡಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ಅಲ್ಲಿ ಮುಖ್ಯಮಂತ್ರಿಯನ್ನು ತಳ್ಳುವ ಅಥವಾ ಹೊಡೆದ ಯಾವುದೇ ಪುರಾವೆಗಳಿಲ್ಲ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕಾರಿನ ಬಾಗಿಲು ಕಂಬಕ್ಕೆ ಬಡಿದಿದೆ ಹಾಗೂ ನಂತರ ಬಾಗಿಲು ಅವರ ಕಾಲುಗಳಿಗೆ ಅದನ್ನು ಬಡಿದಿದ್ದರಿಂದ ಅವರು ಗಾಯಗೊಂಡಿದ್ದಾರೆ ಎಂದು ಅಲ್ಲಿದ್ದ ಪೊಲೀಸರು ಹೇಳಿದ್ದಾರೆ ಎಂದು ಪ್ರಾಥಮಿಕ ವರದಿ ಹೇಳಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಡಿಜಿಪಿ ವರ್ಗಾವಣೆ:ನಂದಿಗ್ರಾಮದಲ್ಲಿ ನಡೆದ ಘಟನೆಗೆ ಕೆಲವು ಗಂಟೆಗಳ ಮೊದಲು, ಬಂಗಾಳದ ಡಿಜಿಪಿ ವೀರೇಂದ್ರ ಅವರನ್ನು ಚುಮಾವಣಾ ಆಯೋಗವು ವರ್ಗಾಯಿಸಿತು, ರಾಜ್ಯದ ವಿಶೇಷ ವೀಕ್ಷಕರ ವರದಿಯ ನಂತರ ಅವರನ್ನು ವರ್ಗಾವಣೆ ಮಾಡಿ ಐಪಿಎಸ್ ಅಧಿಕಾರಿ ಪಿ.ನಿರಾಜ್ನಾಯನ್ ಅವರನ್ನು ಅವರ ಬದಲಿಗೆ ನೇಮಿಸಲಾಗಿದೆ. ಬಂಗಾಳ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಅವರನ್ನು ವರ್ಗಾವಣೆಯ ಕೆಲ ದಿನಗಳ ನಂತರ ಈ ವರ್ಗಾವಣೆ ಮಾಡಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement