ಎಮ್ಮೆ ಮೇಲೆ ಗಂಭಿರವಾಗಿ ನಿಂತು ಶ್ವಾನವೊಂದು ಎರಡು ಎಮ್ಮೆಗಳ ಜೊತೆ ಸವಾರಿ ಹೊರಟಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿ ಎಮ್ಮೆ ಮೇಲೇರಿ ನಿಂತಿದೆ. ಒಂದು ಸ್ವಲ್ಪವೂ ಅಲುಗಾಡುತ್ತಿಲ್ಲ. ಎಮ್ಮೆ ಕೂಡಾ ನಾಯಿಯನ್ನು ಅಷ್ಟೇ ಬ್ಯಾಲೆನ್ಸ್ ಮಾಡುತ್ತಾ ಕರೆದುಕೊಂಡು ಹೋಗಿದೆ.
ವೀಡಿಯೊದಲ್ಲಿ ಬೀದಿ ನಾಯಿಯೊಂದು ಎರಡು ಎಮ್ಮೆಗಳ ಮೇಲೆ ಆಕರ್ಷಕವಾಗಿ ನಿಂತು ಸವಾರಿ ಮಾಡುತ್ತಿದೆ. ಎರಡು ಜಾನುವಾರುಗಳ ಮೇಲೆ ನಾಯಿಮರಿ ಎಷ್ಟು ಸುಂದರವಾಗಿ ತನ್ನನ್ನು ತಾನು ಸಮತೋಲನಗೊಳಿಸುತ್ತದೆ. , ಕ್ಲಿಪ್ ಪೂರ್ತಿ ನಾಯಿ ತನ್ನ ಹಿಡಿತವನ್ನು ಕಾಪಾಡಿಕೊಳ್ಳುವುದನ್ನು ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. ಇದಲ್ಲದೆ, ಎರಡೂ ಜಾನುವಾರುಗಳು ನಾಯಿಯು ಅವುಗಳ ಮೇಲೆ ಸವಾರಿ ಮಾಡುತ್ತಿದ್ದರೂ ಸಹಜವಾಗಿಯೇ ನಡೆದುಕೊಂಡು ಹೋಗುತ್ತಿವೆ.
ಈ ವಿಡಿಯೋ ಟ್ವೀಟ್ ಮಾಡಿದ ಶಾಝಿಯಾ ಚೌಧರಿ ಎಂಬವರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಈತನಕ 9 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇನ್ನು ಇನ್ಸ್ಟಾಗ್ರಾನಲ್ಲಿಯೂ ಈ ವೀಡಿಯೊ ಇದ್ದು ಈತನಕ 16 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ರಾಷ್ಟ್ರೀಯ ಪ್ರಾಣಿ ನಾಯಿಯಾಗಲಿ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಬಾಹುಬಲಿ ಬಂದ ಎಂದಿದ್ದಾರೆ ಮತ್ತೊಬ್ಬರು.
ನಿಮ್ಮ ಕಾಮೆಂಟ್ ಬರೆಯಿರಿ