ಜಿಂಕೆ ಮೇಲೆ ಮಂಗನ ಸವಾರಿ…! ಐಐಟಿ ಮದ್ರಾಸ್‌ನಲ್ಲಿ ಸೆರೆಯಾದ ದೃಶ್ಯ…ವೀಕ್ಷಿಸಿ

ಚೆನ್ನೈ: ಸಾಮಾಜಿಕ ಮಾಧ್ಯಮಗಳಲ್ಲಿ‌ ಕಂಡು ಬರುವ ಪ್ರಾಣಿಗಳ ವೀಡಿಯೋಗಳು ನಕ್ಕು ನಗಿಸುತ್ತವೆ. ಇಂಥದ್ದೇ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಿಂಕೆಯ ಮೇಲೆ ಕೋತಿ ಸವಾರಿ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT Madras) ಕ್ಯಾಂಪಸ್‌ನಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.
ವೀಡಿಯೊ ಕ್ಲಿಪ್‌ನಲ್ಲಿ ಜಿಂಕೆಯೊಂದು ಕ್ಯಾಂಪಸ್‌ನ ಕಟ್ಟಡಗಳ ಸಮೀಪ ಹುಲ್ಲು ಮೇಯಲು ಅಡ್ಡಾಡುತ್ತಿದೆ. ಅದರ ಮೇಲೆ ಆರಾಮವಾಗಿ ಕುಳಿತ ಕೋತಿಯೊಂದು ಆನಂದಿಸುತ್ತಿದೆ. ತನ್ನ ಮೇಲೆ ಮಂಗ ಸವಾರಿ ಮಾಡುತ್ತಿದ್ದರೂ ಜಿಂಕೆ ಕಿಂಚಿತ್ತೂ ವಿಚಲಿತವಾಗದೇ ಮೇಯುತ್ತ ಓಡಾಡಿದೆ.

ಐಐಟಿ ಮದ್ರಾಸ್ ಕ್ಯಾಂಪಸ್ ಅನ್ನು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದ್ದು, ಅದರ ಹೆಚ್ಚಿನ ಭಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಹೀಗಾಗಿ ಅಲ್ಲಿನ ಕ್ಯಾಂಪಸ್‌ನಲ್ಲಿ ಜಿಂಕೆ, ಕೋತಿ ಸೇರಿದಂತೆ ಅನೇಕ ಜಾತಿಯ ಪ್ರಾಣಿಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದೆ

ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಐಐಟಿ ಮದ್ರಾಸ್‌ನಲ್ಲಿ ಮಂಗಗಳು ಹೀಗಿರುತ್ತವೆ ಎಂದು ಕೆಲವರು ಹೇಳಿದರೆ, ಇನ್ನೊಬ್ಬರು, ಮಂಗಗಳು ಮನುಷ್ಯರಂತೆ ಪ್ರಾಣಿಗಳ ಮೇಲೆ ಸವಾರಿ ಮಾಡುತ್ತವೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಅದು ಐಐಟಿ ಕ್ಯಾಂಪಸ್‌ನ ಮಂಗ, ಹೀಗಾಗಿ ಸ್ಮಾರ್ಟ್ ಆಗಿ ವರ್ತಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement