ಸುರಂಗದ ಹೊರಗಿನ ದೇವಸ್ಥಾನದಲ್ಲಿ ‘ಧನ್ಯವಾದ’ ಹೇಳಬೇಕು”: ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಯ ನಂತರ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್

ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತಂದ ನಂತರ ಬುಧವಾರ ಬೆಳಿಗ್ಗೆ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು “ಧನ್ಯವಾದʼ” ಗಳನ್ನು ಹೇಳಲು ಸುರಂಗದ ಹೊರಗಿನ ತಾತ್ಕಾಲಿಕ ದೇವಾಲಯಕ್ಕೆ ಹೋಗಬೇಕಾಗಿದೆ ಎಂದು ಹೇಳಿದ್ದಾರೆ.
ದೀರ್ಘಾವಧಿಯ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಸ್ಥಳದಲ್ಲಿಯೇ ಇದ್ದ ಡಿಕ್ಸ್, ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿರುವುದು ಒಂದು “ಪವಾಡ” ಎಂದು ಹೇಳಿದ್ದಾರೆ.
“ನೆನಪಿಡಿ, ಕ್ರಿಸ್‌ಮಸ್ ವೇಳೆಗೆ ನಾನು 41 ಜನರು ಮನೆಗೆ ಹೋಗುತ್ತಾರೆ ಮತ್ತು ಯಾರಿಗೂ ಗಾಯವಾಗುವುದಿಲ್ಲ ಎಂದು ಹೇಳಿದ್ದೆ. . ಕ್ರಿಸ್‌ಮಸ್ ಬೇಗನೆ ಬರುತ್ತಿದೆ. ನಾವು ಶಾಂತವಾಗಿದ್ದೇವೆ ಮತ್ತು ನಮಗೆ ಏನು ಬೇಕು ಎಂದು ನಮಗೆ ತಿಳಿದಿತ್ತು. ನಾವು ಅದ್ಭುತ ತಂಡವಾಗಿ ಕೆಲಸ ಮಾಡಿದ್ದೇವೆ. ಭಾರತವು ಅತ್ಯುತ್ತಮ ಇಂಜಿನಿಯರ್‌ಗಳನ್ನು ಹೊಂದಿದೆ. ಈ ಯಶಸ್ವಿ ಮಿಷನ್‌ನ ಭಾಗವಾಗಲು ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರೊಫೆಸರ್ ಆಗಿರುವ ಡಿಕ್ಸ್‌ ಅವರು ಬ್ಯಾರಿಸ್ಟರ್ ಪದವಿ ಜೊತೆಗೆ ಅವರು ಜಿನೀವಾದಲ್ಲಿ ಇಂಟರ್ನ್ಯಾಷನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಉತ್ತರಕಾಶಿಯಲ್ಲಿ ನೆಲೆಸಿದ್ದಾರೆ. ರಕ್ಷಣಾ ತಂಡಗಳಿಗೆ ಸಹಾಯ ಮಾಡುತ್ತಾ ಮತ್ತು ಕಾರ್ಯಾಚರಣೆಯ ಪ್ರಗತಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ಬಿಕ್ಕಟ್ಟಿನ ಮಧ್ಯೆ ಸಹಾಯ ಮಾಡಲು ಧಾವಿಸಿ ಪ್ರಶಂಸೆ ಪಡೆದಿದ್ದಾರೆ.
ಮಂಗಳವಾರ, ಕಾರ್ಮಿಕರ ಸುರಕ್ಷತೆಗಾಗಿ ಡಿಕ್ಸ್ ಅವರು ಸುರಂಗದ ಹೊರಗಿನ ದೇವಾಲಯದ ಮುಂದೆ ಪ್ರಾರ್ಥಿಸುತ್ತಿರುವ ವೀಡಿಯೊ ಅನೇಕ ಹೃದಯಗಳನ್ನು ಗೆದ್ದಿದೆ. “ನಾನು ದೇವಸ್ಥಾನಕ್ಕೆ ಹೋಗಬೇಕು ಏಕೆಂದರೆ ನಾವು ಪವಾಡಕ್ಕೆ ಸಾಕ್ಷಿಯಾಗಿದ್ದೇವೆ. ಏನಾಯಿತು ಎಂಬುದಕ್ಕೆ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

ಹಿಮಾಲಯದ ಸೂಕ್ಷ್ಮ ಭೂಪ್ರದೇಶದ ಕಾರಣದಿಂದಾಗಿ ಹಲವಾರು ಹಿನ್ನಡೆಗಳನ್ನು ಅನುಭವಿಸಿದ ಸವಾಲಿನ ಕಾರ್ಯಾಚರಣೆಯ ನಂತರ 41 ಕಾರ್ಮಿಕರನ್ನು ಮಂಗಳವಾರ ರಾತ್ರಿ ಒಬ್ಬೊಬ್ಬರಾಗಿ ಹೊರಗೆ ತರಲಾಯಿತು. 25-ಟನ್ನುಗಳ ಆಗರ್ ಯಂತ್ರವು ಮುರಿದುಹೋದ ನಂತರ, ಇಲಿ-ರಂಧ್ರ ಗಣಿಗಾರಿಕೆ ತಜ್ಞರ ಕೈಯಿಂದ ಕೊರೆಯುವ ಕಾರ್ಯವನ್ನು ಆರಂಭಿಸಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲಾಯಿತು.
ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರಗೆ ಕರೆತರುತ್ತಿದ್ದಂತೆ, ಅವರ ಮನೆಗಳಲ್ಲಿ ಇದ್ದ ಹತಾಶೆಯು ಸಂತೋಷಕ್ಕೆ ತಿರುಗಿತು. ಎಲ್ಲಾ ಅಡೆತಡೆಗಳ ನಡುವೆಯೂ 17 ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ ದಣಿವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ತಂಡಗಳು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟವು.

“ಸೇವೆ ಮಾಡುವುದು ನನ್ನ ಗೌರವವಾಗಿದೆ, ಮತ್ತು ನಾನು ಒಬ್ಬ ಪೋಷಕನಾಗಿ, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ತರಲು ಸಹಾಯ ಮಾಡುವುದು ನನ್ನ ಕರ್ತುವ್ಯವಾಗಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ಪ್ರಜೆಯಾಗಿರುವ ಡಿಕ್ಸ್ ಅವರು ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿಯಿಂದ ಪ್ರಶಂಸೆ ಗಳಿಸಿದರು. ಸುರಂಗದ ರಕ್ಷಣಾ ಕಾರ್ಯಾಚರಣೆಯನ್ನು “ಅಗಾಧವಾದ ಸಾಧನೆ” ಎಂದು ಕರೆದರು. ಭಾರತದಲ್ಲಿನ ಆಸ್ಟ್ರೇಲಿಯಾದ ಹೈ ಕಮಿಷನರ್ ಫಿಲಿಪ್ ಗ್ರೀನ್, “ನೆಲದಲ್ಲಿ ಪ್ರಮುಖ ತಾಂತ್ರಿಕ ಬೆಂಬಲವನ್ನು ಒದಗಿಸಿದ ಆಸ್ಟ್ರೇಲಿಯಾದ ಪ್ರೊಫೆಸರ್ ಅರ್ನಾಲ್ಡ್ ಡಿಕ್ಸ್‌ಗೆ ವಿಶೇಷ ಅಭಿನಂದನೆಗಳು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

4.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement