ಪಬ್‌ ಜಿ ಆಡುವಾಗ ʼಪ್ರೀತಿʼ ಬೆಳೆದ ವ್ಯಕ್ತಿಯೊಂದಿಗೆ ಇರಲು 4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆ…!?

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಅಕ್ರಮವಾಗಿ ತಂಗಿದ್ದ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಪಾಕಿಸ್ತಾನಿ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್‌ ಜಿ(PUBG)ಯಲ್ಲಿ ಭೇಟಿಯಾದ ಭಾರತೀಯ ವ್ಯಕ್ತಿಯ ಮೇಲೆ ಪ್ರೀತಿ ಬೆಳೆದ ನಂತರ ಅವಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಎರಡು ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿದ್ದಾಳೆ…! .
ಪಾಕಿಸ್ತಾನೀ ಮಹಿಳೆಯ ಜೊತೆ ಗ್ರೇಟರ್ ನೋಯ್ಡಾ ನಿವಾಸಿಯಾಗಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಆತ ತನ್ನ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಇರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಪಾಕಿಸ್ತಾನಿ ಮಹಿಳೆ ಮತ್ತು ಸ್ಥಳೀಯ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯ ನಾಲ್ವರು ಮಕ್ಕಳೂ ಸಹ ಪೊಲೀಸ್ ವಶದಲ್ಲಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
20ರ ಆಸುಪಾಸಿನಲ್ಲಿರುವ ಪಾಕಿಸ್ತಾನಿ ಮಹಿಳೆ ಮತ್ತು ಸ್ಥಳೀಯ ವ್ಯಕ್ತಿ ಆನ್‌ಲೈನ್ ಗೇಮ್ PUBG ಮೂಲಕ ಸಂಪರ್ಕಕ್ಕೆ ಬಂದಿದ್ದರು, ಇದು ಅವರ ನಡುವೆ ಪ್ರೀತಿ ಬೆಳೆಯಲು ಕಾರಣವಾಯಿತು. ಹೀಗಾಗಿ ಮಹಿಳೆ ಆತನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ನೋಯ್ಡಾಕ್ಕೆ ಬಂದಿಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ...! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ...!

ವರದಿಗಳ ಪ್ರಕಾರ, ಪಾಕಿಸ್ತಾನಿ ಮಹಿಳೆ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಸುಮಾರು ಒಂದು ತಿಂಗಳ ಹಿಂದೆ ನೇಪಾಳ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾಳೆ. ಆಕೆ ಪಾಕಿಸ್ತಾನದಿಂದ ಗ್ರೇಟರ್ ನೋಯ್ಡಾದ ರಬುಪುರ ನಿವಾಸಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾಳೆ. ಅವಳು ಭಾರತಕ್ಕೆ ಬಂದ ನಂತರ, ಅವರಿಬ್ಬರು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟಿನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಇದಾದ ಕೆಲವೇ ದಿನಗಳಲ್ಲಿ, ಗ್ರೇಟರ್ ನೋಯ್ಡಾದಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಿಕ್ಕಿತು. ಅವಳ ಉಪಸ್ಥಿತಿಯಿಂದ ಪೊಲೀಸರಿಗೆ ಸುದ್ದಿ ಹೋಗಿರಬಹುದು ಎಂದು ಸಚಿನ್ ತಿಳಿದಾಗ, ಆತ ಮತ್ತು ಅವಳು ನಾಲ್ಕು ಮಕ್ಕಳೊಂದಿಗೆ ಅಲ್ಲಿಂದ ಹೋಗಿದ್ದರು. ಆದರೂ ಪೊಲೀಸರು ಅವರನ್ನು ಪತ್ತೆ ಮಾಡಿದ್ದಾರೆ.

ಇವರು ವಾಸವಿದ್ದ ಅಪಾರ್ಟ್‌ಮೆಂಟ್‌ನ ಮಾಲೀಕ ಬ್ರಿಜೇಶ್ ಅವರು ಮೇ ತಿಂಗಳಲ್ಲಿ ಮನೆಯನ್ನು ಸಚಿನ್‌ ಎಂಬಾತ ಬಾಡಿಗೆಗೆ ಪಡೆದಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಕೋರ್ಟ್‌ ಮದುವೆಯಾಗಿದ್ದಾರೆ ಮತ್ತು ನಾಲ್ಕು ಮಕ್ಕಳಿದ್ದಾರೆ ಎಂದು ತಿಳಿಸಿದ್ದರು ಎಂದು ಹೇಳಿದ್ದಾರೆ. ಮಹಿಳೆ ಪಾಕಿಸ್ತಾನದವಳಂತೆ ತೋರುತ್ತಿರಲಿಲ್ಲ, ಅವಳು ಸಲ್ವಾರ್ ಸೂಟ್ ಮತ್ತು ಸೀರೆಗಳನ್ನು ಧರಿಸುತ್ತಿದ್ದಳು ಎಂದು ಬ್ರಜೇಶ್‌ ಪೊಲೀಸರಿಗೆ ತಿಳಿಸಿದ್ದಾರೆ.
ಈಗ ಅವರನ್ನು ಅವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಇದು ನಿಜವಾದ ‘ಲವ್‌ ಸ್ಟೋರಿʼಯೇ ಅಥವಾ ವಂಚನೆ ಮತ್ತು ಹನಿ-ಟ್ರ್ಯಾಪಿಂಗ್ ಮತ್ತು ಬೇಹುಗಾರಿಕೆಯ ಭಾಗವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಒಳ್ಳೆಯ ಸುದ್ದಿ...| ಈ ವರ್ಷ ವಾಡಿಕೆಗಿಂತ ಮೊದಲೇ ಆಗಮಿಸಲಿದೆ ಮುಂಗಾರು ಮಳೆ...

 

 

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement