ರಮೇಶ್ ಜಾರಕಿಹೊಳಿ ಪಾಪ ಅಮಾಯಕರು, ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದು:ಎಚ್‌ಡಿಕೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಪಾಪ ಅಮಾಯಕರಿದ್ದಾರೆ, ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ಜನ ಮುಂಬೈಗೆ ಹೋಗಿದ್ದರು. ಮುಂಬೈಗೆ ಹೋಗಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು. ಇಂಥದನ್ನು ಯಾರೂ ಮಾಡಬಾರದು. 6 ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ಗೋವಾ, ಮುಂಬೈ, ಹೈದರಾಬಾದ್ ಸುತ್ತಾಡಿದ್ದರು. ಆಗ ಏಕೆ ಇವರು ಕೋರ್ಟ್ ಮೊರೆ ಹೋಗಿರಲಿಲ್ಲ. ಇಂತಹವರನ್ನು ನಂಬಿ ರಾಜಕಾರಣ ಮಾಡಬೇಕಾಗಿತ್ತಾ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬದವರು, ನಮ್ಮ ತಂದೆ ಕಾಲದಿಂದಲೂ ಇಂತಹ ಕೆಲಸ ಮಾಡುತ್ತಿಲ್ಲ. ಸಿಡಿ ಮುಂದಿಟ್ಟುಕೊಂಡು ನಾವೆಂದೂ ರಾಜಕೀಯ ಮಾಡಿಲ್ಲ. ಆ ಹೆಣ್ಣು ಮಗಳು ಸಂತ್ರಸ್ತೆಯಾಗಿದ್ದರೆ, ನಿಜಕ್ಕೂ ಕಿರುಕುಳ ಆಗಿದ್ದರೆ ಏಕೆ ಸಮಾಜದ ಮುಂದೆ ಬರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ ಹೆಣ್ಣು ಮಗಳ ವಿಡಿಯೋ ಬಂದಿದೆ. ಹೀಗಾಗಿ ಅವಳು ಸಂತ್ರಸ್ತೆಯೋ ಅಥವಾ ನಕಲಿ ಅಂತಿರುವ ರಮೇಶ್ ಜಾರಕಿಹೊಳಿ ಸಂತ್ರಸ್ತರೋ ನೀವೆ ಹೇಳಿ ಎಂದು ಮಾರ್ಮಿಕವಾಗಿ ಹೇಳಿದರು.
ಬ್ಲಾಕ್ ಮೇಲ್ ಮಾಡುವ ಪ್ರಕರಣಗಳಿಗೆ ಅಂತ್ಯ ಎಂದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಅರ್ಥ. ಮಹಾಭಾರತ ಹಾಗೂ ರಾಮಾಯಣ ಯಾವ ಕಾರಣಕ್ಕೆ ಆಯ್ತು? ಇದೆಲ್ಲಾ ಗಂಡು ಹೆಣ್ಣಿನಿಂದ ಅಲ್ಲವೇ.. ದಿನೇಶ್ ಕಲ್ಲಳ್ಳಿ ಮೇಲೆ ನಾನು ಹಣದ ವಿಚಾರವಾಗಿ ಏನೂ ಹೇಳಿಲ್ಲ. ಅವರು ಏಕೆ ಆ ರೀತಿ ನನ್ನ ಮೇಲೆ ದೂರು ಹೇಳಿ ವಾಪಸ್ ತೆಗೆದುಕೊಂಡರೋ ಗೊತ್ತಿಲ್ಲ, ನಿಮಗೆ ಬೇಕಾದರೆ ಅವರನ್ನೇ ಕೇಳಿ ಎಂದರು.
ಆರು ಸಚಿವರು ತಪ್ಪು ಮಾಡಿಲ್ಲ ಎಂದರೆ ಯಾಕೆ ನ್ಯಾಯಾಲಯಕ್ಕೆ ಹೋಗಬೇಕು. ನಿಮ್ಮ ಮುಖಕ್ಕೆ ನೀವೆ ಮಸಿ ಬಳಿದುಕೊಳ್ಳುತ್ತಿದ್ದೀರಿ. ನಾನು ಕೂಡ ತಪ್ಪು ಮಾಡಿದ್ದೆ ಎಂದು ವಿಧಾನ ಸಭೆಯ ಕಲಾಪದಲ್ಲೇ ಹೇಳಿದ್ದೆ. ಅದನ್ನ ತಿದ್ದುಕೊಂಡು ಬದುಕಬೇಕು. ಕೋರ್ಟ್​ಗೆ ಹೋದವರು ಅಮಾಯಕರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement