ಈ ವರ್ಷದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿರಿಯ ನಟಿ ಆಶಾ ಪರೇಖ್ ಆಯ್ಕೆ

ನವದೆಹಲಿ: ಹಿರಿಯ ನಟಿ ಆಶಾ ಪರೇಖ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಅವರನ್ನು ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ವರ್ಷ ನಟಿ ಆಶಾ ಪರೇಖ್ ಅವರನ್ನು ಚಿತ್ರರಂಗದ ಭಾರತದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
52ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಆಯ್ಕೆಗಾಗಿ ತೀರ್ಪುಗಾರರ ತಂಡದಲ್ಲಿದ್ದ ಆಶಾ ಭೋಂಸ್ಲೆ, ಹೇಮಾ ಮಾಲಿನಿ, ಪೂನಂ ಧಿಲ್ಲೋನ್‌, ಟಿ ಎಸ್ ನಾಗಾಭರಣ ಹಾಗೂ ಉದಿತ್ ನಾರಾಯಣ ಅವರಿದ್ದ ಆಯ್ಕೆ ಸಮಿತಿಯು ಆಶಾ ಪರೇಖ್‌ ಅವರು ಭಾರತೀಯ ಚಿತ್ರರಂಗಕ್ಕೆ ಕೊಡೆಗೆ ನೀಡಿದ್ದನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ.
1952 ರ ಆಸ್ಮಾನ್ ಚಲನಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ ಆಶಾ ಪರೇಖ್, ದೋ ಬದನ್, ಉಪಕಾರ್ ಮತ್ತು ಕಾರವಾನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕಳೆದ ವರ್ಷ, ರಜನಿಕಾಂತ್ ಅವರಿಗೆ 2019 ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಂಕ್ರಾಮಿಕ ರೋಗದಿಂದಾಗಿ ಪ್ರಶಸ್ತಿಗಳು ಒಂದು ವರ್ಷ ವಿಳಂಬವಾಯಿತು.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

ಆಶಾ ಪರೇಖ್ 1950-1973 ರವರೆಗಿನ ಹಿಂದಿ ಚಲನಚಿತ್ರಗಳಲ್ಲಿ ಅಗ್ರ ತಾರೆಗಳಲ್ಲಿ ಒಬ್ಬರು. 1992 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರು ಭಾರತದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸೆನ್ಸಾರ್ ಬೋರ್ಡ್) ನ ಮೊದಲ ಮಹಿಳಾ ಅಧ್ಯಕ್ಷೆಯೂ ಆಗಿದ್ದರು.

ದಿಲ್ ದೇಕೆ ದೇಖೋ, ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ (1961), ಫಿರ್ ವೋಹಿ ದಿಲ್ ಲಯಾ ಹೂ (1963), ತೀಸ್ರಿ ಮಂಜಿಲ್ (1966), ಬಹಾರೋಂ ಕೆ ಸಪ್ನೆ (1967), ಪ್ಯಾರ್ ಕಾ ಮೌಸಮ್, ದೋ ಬದನ್ (1966), ಮೈನ್ ತುಳಸಿ ತೇರೆ ಆಂಗನ್ ಕಿ, ಇತರ ಹಲವು ಆಶಾ ಪರೇಖ್ ಅವರ ಹೆಸರಾಂತ ಚಿತ್ರಗಳು. ಅವರು ಗುಜರಾತಿ, ಪಂಜಾಬಿ ಮತ್ತು ಕನ್ನಡ ಚಲನಚಿತ್ರಗಳು ಸೇರಿದಂತೆ ದೇಶದ ಅನೇಕ ಪ್ರಾದೇಶಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಆಶಾ ಪರೇಖ್ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲಸದ ವಿಷಯದಲ್ಲಿ, ಆಶಾ ಪರೇಖ್ ಕೊನೆಯದಾಗಿ 1999 ರ ಚಲನಚಿತ್ರ ಸಾರ್ ಆಂಖೋನ್ ಪರ್ ನಲ್ಲಿ ಕಾಣಿಸಿಕೊಂಡರು.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement