ಮಹತ್ವದ ತೀರ್ಮಾನ…ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು: ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.ಈ ಸಂಬಂಧ ಮುಂದಿನ ಅಧಿವೇಶನದ ವೇಳೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಶನಿವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲೂ ಸಹ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಲಾಟರಿ ಹೊರತುಪಡಿಸಿ, ಕಂಪ್ಯೂಟರ್ ಮತ್ತು ಮೊಬೈಲ್ ‌ಸೇರಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಹಣದ ವ್ಯವಹಾರ ನಡೆಸುವ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಪಂಚಾಯತ್ ರಾಜ್ ಡಿಲಿಮಿಟೇಷನ್ ಆ್ಯಕ್ಟ್‌ಗೆ ತಿದ್ದುಪಡಿ ತರಲುಸಹ ಸಂಪುಟ ನಿರ್ಧರಿಸಿದೆ. ಅಗತ್ಯ ಬಿದ್ದರೆ ಮಾತ್ರ ಡಿಲಿಮಿಟೇಷನ್ ಕಮಿಷನ್ ರಚನೆ ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ವೀಕೆಂಡ್​ ಕರ್ಫ್ಯೂ ತೆಗೆಯಲು ಕೆಲ ಸಚಿವರಿಂದ ಸಲಹೆ ಕೇಳಿಬಂದಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರವಾಗಿ ನಾಳೆ ಭಾನುವಾರ ತಜ್ಞರ ಜತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಬೀಜ ನಿಗಮಕ್ಕೆ 10 ಕೋಟಿ ಸಾಲದ ಕ್ಯಾಷ್ ಕ್ರೆಡಿಟ್ ಸೌಲಭ್ಯ 20 ಕೋಟಿಗೆ ಹೆಚ್ಚಳಕ್ಕೆ ಅನುಮತಿ. ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ 98.5 ರೂ. ಕೋಟಿ ರೂ. ಕೋಟಿ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ. ಹೇಮಾವತಿ ನಾಲೆಯಿಂದ 26 ಕೆರೆಗೆ ನೀರು ಬಿಡುವ ಯೋಜನೆಗೂ ಅಸ್ತು.
ಬಂಡವಾಳ ಹೂಡಿಕೆಗೆ ಸಮಾಲೋಚಕ ಪಾಲುದಾರರಾಗಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸೇವೆ 12 ತಿಂಗಳು ಮುಂದುವರಿಕೆ. ಕೊವಿಡ್ ಹಿನ್ನೆಲೆ ಕಳೆದ ವರ್ಷ ಮುಂದೂಡಿದ್ದ ಹೂಡಿಕೆದಾರರ ಸಮಾವೇಶ ಈ ವರ್ಷ ನಡೆಸಲು ತೀರ್ಮಾನ. ಮಾಡಲಾಗಿದೆ.
ಮೈಸೂರು ಅರಮನೆಯಲ್ಲಿ ಪೇಂಟ್ ಮತ್ತು ಫೋಟೋ ಸೆಷನ್ ಸಂಬಂಧ ಲೋಕಾಯುಕ್ತದಲ್ಲಿ 2 ಕೇಸ್ ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ಅಷ್ಟೊಂದು ತೀವ್ರತೆ ಇಲ್ಲವೆಂಬ ಕಾರಣ ಎರಡೂ ಪ್ರಕರಣಗಳನ್ನು ಕೈಬಿಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಫ್ಲ್ಯಾಷ್ ಇಲ್ಲದೆ ಫೋಟೋ ಶೂಟ್‌ಗೆ ಅವಕಾಶ ಇದೆ. ಹಾಗಾಗಿ ಮೈಸೂರು ಅರಮನೆ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಇದ್ದ ಪ್ರಕರಣ ತಿರಸ್ಕರಿಸಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement