ನಾಗರಹೊಳೆ : ಬೇಟೆಯಾಡಲು ದಾಳಿಗೆ ಮುಂದಾಗಿದ್ದ ಬೃಹತ್‌ ಹುಲಿಯನ್ನೇ ಹೆದರಿಸಿ ಓಡಿಸಿದ ಗೂಳಿ | ವೀಕ್ಷಿಸಿ

ಬೆಂಗಳೂರು: ಹುಲಿ ಕಂಡರೆ ಬಹುತೇಕ ಎಲ್ಲ ಪ್ರಾಣಿಗಳು ಹೆದರಿ ಓಡುತ್ತವೆ. ಅದರಲ್ಲಿಯೂ ಹುಲಿ ಬೇಟೆಯಾಡುವುದರಲ್ಲಿ ನಿಸ್ಸೀಮ. ಆದರೆ ಇಲ್ಲೊಂದು ಯಾರೂ ಊಹಿಸಿದ ಘಟನೆ ನಡೆದಿದೆ.
ಈ ವಿಲಕ್ಷಣ ಘಟನೆಯಲ್ಲಿ ನಾಗರಹೊಳೆ ಅರಣ್ಯದ ರಸ್ತೆಯಲ್ಲಿ ದೊಡ್ಡ ಗೂಳಿಯೊಂದು ಹಲಿಯ ಮೇಲೆ ಎರಗಿದೆ. ಈ ಘಟನೆ ನಡೆದಿರುವುದು ನಾಗರಹೊಳೆ ಅಭಯಾರಣ್ಯದ ಮಾಸ್ತಿಗುಡಿ ಸಮೀಪದ ಮೈಸೂರು-ಮಾಸ್ತಿಗುಡಿ ರಸ್ತೆಯಲ್ಲಿ ನಡೆದಿದೆ. ಇದು ಮಂಗಳವಾರ ಬೆಳಿಗ್ಗೆ ನಡೆದಿದೆ ಎಂದು ಹೇಳಲಾಗಿದೆ.

ಹೋರಿಯೊಂದು ಅರಣ್ಯದ ರಸ್ತೆಯಲ್ಲಿ ಬರುವಾಗ ಸನಿಹದಲ್ಲೇ ಇದ್ದ ಭಾರಿ ಗಾತ್ರದ ಹುಲಿಯೊಂದು ಅದನ್ನು ಹಿಡಿಯಲು ಹುಂಚು ಹಾಕಿ ಅದರ ಮೇಲೆ ದಾಳಿ ಮಾಡಲು ಮುಂದಾಗಿದೆ. ಆದರೆ ಇದನ್ನಯ ತಕ್ಷಣವೇ ಗ್ರಹಿಸಿದ ಗೂಳಿ ತಿರುಗಿ ಹಿಲಿಯತ್ತ ನುಗ್ಗಿದೆ. ಕೊಂಬು ಬಾಗಿಸಿ ತಿವಿಯಲು ಹೋರಿಯು ಹುಲಿಯತ್ತ ರಭಸದಿಂದ ಮುನ್ನುಗ್ಗಿದಾಗ ಹೋರಿಯ ಗಾಂಭೀರ್ಯ ಹಾಗೂ ಧೈರ್ಯಕ್ಕೆ ಬೆದರಿದ ಹುಲಿ ಪಕ್ಕಕ್ಕೆ ಓಡಿ ಹೋಗಿ ಮರದ ಮರೆಗಯಲ್ಲಿ ದಿಗ್ಬ್ರಮೆಯಿಂದ ಕ್ಷಣಕಾಲ ನಿಲ್ಲುತ್ತದೆ. ಹಾಗೂ ಗೂಳಿಗೆ ಮುಖಾಮುಖಿಯಾಗುವುದರಿಂದ ತಪ್ಪಿಸಿಕೊಳ್ಳುತ್ತದೆ. ಇದೇ ವೇಳೆ ಹೋರಿ ಹುಲಿಯಿಂದ ತಪ್ಪಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

ರಾಕೇಶ ಪ್ರಕಾಶ ಎನ್ನುವವರು ಈ ಕುರಿತು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗಿನ ಮಾನಂತವಾಡಿ ರಸ್ತೆಯಲ್ಲಿ ಗೂಳಿಯೊಂದು ಹುಲಿಯನ್ನು ಓಡಿಸಿದೆ. ಇದು ಅಸಾಮಾನ್ಯ ದೃಶ್ಯ ಎಂದು ವಿಡಿಯೋ ಮಾಡಿದ ರಾಕೇಶ್ ಪ್ರಕಾಶ್ ಹೇಳಿದ್ದಾರೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement