ಹಂಪಿಯಲ್ಲಿ ಐತಿಹಾಸಿಕ ಕೋಟೆ ಗೋಡೆ ಕುಸಿತ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಮಲ ಮಹಲ್ ಬಳಿ ವಿಜಯ ನಗರದ ರಾಮರಾಯನ ಕೋಟೆ ಅರಮನೆಯ ( ಕಮಲ ಮಹಲ್) ಗೋಡೆ ಕುಸಿದಿದೆ.
ಕಮಲ ಮಹಲ್ ಕೋಟೆಯ ಹೊರ ಭಾಗ ಕುಸಿದಿದ್ದು, ಆದರೂ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ. ಒಂದು ವೇಳೆ ಒಳಭಾಗದಲ್ಲಿ ಕುಸಿತವಾಗಿದ್ದರೆ ಮತ್ತಷ್ಟು ಸ್ಮಾರಕಗಳಿಗೆ ಹಾನಿಯಾಗುವ ಸಂಭವವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಲ್ಲಿ ಶೌಚಾಲಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ವಾಹನ‌ಗಳ ಸಂಚಾರದಿಂದ ಉಂಟಾದ ಭಾರೀ ಪ್ರಮಾಣದ ಕಂಪನದಿಂದ ಕೋಟೆ ಗೋಡೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಪುರಾತತ್ವ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಶಿರಸಿ ; ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ನಿಮ್ಮ ಕಾಮೆಂಟ್ ಬರೆಯಿರಿ

advertisement