ಸೌದಿ ವೀಸಾ ಪಡೆಯಲು ಭಾರತೀಯರಿಗೆ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿಲ್ಲ

ನವದೆಹಲಿ: ಸೌದಿ ವೀಸಾ(Saudi Visa)ಕ್ಕಾಗಿ ಅರ್ಜಿ ಸಲ್ಲಿಸಲು ಭಾರತೀಯರು (Indians) ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ.
ಇನ್ನು ಮುಂದೆ ಭಾರತೀಯ ಪ್ರಜೆಗಳು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಪಿಸಿಸಿ) ರಾಯಭಾರ ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ನವದೆಹಲಿಯಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿ ಗುರುವಾರ ತಿಳಿಸಿದೆ. ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಬಲವಾದ ಸಂಬಂಧವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ರಾಯಭಾರ ಕಚೇರಿಯು ಪ್ರಕಟಣೆಯೊಂದಿಗೆ ಟ್ವೀಟ್ ಮಾಡಿದ್ದು, ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಬಲವಾದ ಸಂಬಂಧಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಪಿಸಿಸಿ) ಸಲ್ಲಿಸುವುದರಿಂದ ಭಾರತೀಯ ಪ್ರಜೆಗಳಿಗೆ ವಿನಾಯಿತಿ ನೀಡಲು ಸೌದಿ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದೆ.

ಭಾರತೀಯ ನಾಗರಿಕರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ವೀಸಾ ಪಡೆಯಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (ಪಿಸಿಸಿ) ಇನ್ನು ಮುಂದೆ ಅಗತ್ಯವಾಗಿರುವುದಿಲ್ಲ. ಉಭಯ ದೇಶಗಳು ತಮ್ಮ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಿಂಗ್ಡನ್‌ನಲ್ಲಿ ವಾಸಿಸುವ ಇಪ್ಪತ್ತು ಲಕ್ಷ ಭಾರತೀಯರು ನೀಡಿದ ಕೊಡುಗೆಯನ್ನು ರಾಯಭಾರ ಕಚೇರಿ ಶ್ಲಾಘಿಸಿದೆ. ಸೌದಿ ಅರೇಬಿಯಾದಲ್ಲಿ ಶಾಂತಿಯುತವಾಗಿ ವಾಸಿಸುವ ಇಪ್ಪತ್ತು ಲಕ್ಷ ಭಾರತೀಯ ನಾಗರಿಕರ ಕೊಡುಗೆಯನ್ನು ರಾಯಭಾರ ಕಚೇರಿ ಪ್ರಶಂಸಿಸುತ್ತದೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಸತಿ ಸ್ಥಿತಿ, ಉದ್ಯೋಗ, ದೀರ್ಘಾವಧಿಯ ವೀಸಾ ಅಥವಾ ವಲಸೆಗಾಗಿ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (PCC) ನೀಡಲಾಗುತ್ತದೆ. ಪ್ರವಾಸಿ ವೀಸಾದಲ್ಲಿ ವಿದೇಶಕ್ಕೆ ಹೋಗುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುವುದಿಲ್ಲ.
ವಿದೇಶಿ ಪ್ರಜೆಗಳ ಪ್ರವೇಶ ಮತ್ತು ಉದ್ಯೋಗವನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ಕಾನೂನುಗಳನ್ನು ಹೊಂದಿಲ್ಲದ ಕಾರಣ 17 ದೇಶಗಳನ್ನು ಎಮಿಗ್ರೇಷನ್ ಚೆಕ್ ರಿಕ್ವೈರ್ಡ್ (ECR) ಎಂದು ವರ್ಗೀಕರಿಸಲಾಗಿದೆ.
ಈ ಪಟ್ಟಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಯೆಮೆನ್, ಸೌದಿ ಅರೇಬಿಯಾ, ಸುಡಾನ್, ಕತಾರ್ ಮತ್ತು ಅಫ್ಘಾನಿಸ್ತಾನ ಇತರವು ಸೇರಿವೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement