ಕೇರಳದಲ್ಲಿ ಕೊರೊನಾ ಉಲ್ಬಣ.. 35 ಸಾವಿರಕ್ಕೂ ಹೆಚ್ಚು ದಾಖಲೆಯ ದೈನಂದಿನ ಸೋಂಕು ದಾಖಲು

ತಿರುವನಂತಪುರಂ: ಕೇರಳದಲ್ಲಿ ಬುಧವಾರ 35,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ 35,013 ಕೋವಿಡ್‌ -19 ಪ್ರಕರಣಗಳು ದಾಖಲಾಗಿದ್ದರೆ, 2.66 ಲಕ್ಷಕ್ಕೂ ಹೆಚ್ಚು ಜನರು ಪ್ರಸ್ತುತ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, 41 ಜನರು ಸೋಂಕಿನಿಂದ ಮೃತಪಟ್ದಿದ್ದಾರೆ. ಒಟ್ಟು ಸಂಖ್ಯೆ 5,211ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ, ಸೋಂಕಿನ ಸಂಖ್ಯೆ 14,95,377 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 2,66,646 ಆಗಿವೆ. ಮಧ್ಯಾಹ್ನ 2 ಕ್ಕೆ ಕೊನೆಗೊಂಡ ಕೊನೆಯ 24 ಗಂಟೆಗಳಲ್ಲಿ 1,38,190 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪರೀಕ್ಷಾ ಸಕಾರಾತ್ಮಕ ದರ (ಟಿಪಿಆರ್) ಶೇ 25.34 ರಷ್ಟಿತ್ತು. 15,505 ಜನರನ್ನು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದರು.
ಎರ್ನಾಕುಲಂ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ – 5,287 – ಇಂದು ಕೋಝಿಕೋಡ್ 4,317, ತ್ರಿಶೂರ್ 4,107, ಮಲಪ್ಪುರಂ 3,184 ಮತ್ತು ತಿರುವನಂತಪುರಂ 3,210 ಪ್ರಕರಣಗಳನ್ನು ದಾಖಲಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement