ಮೇ 27ರಿಂದ ಮೂರು ದಿನಗಳು ಮಾತ್ರ ಕಿರಾಣಿ , ಮಾಂಸ ಮಾರಾಟದ ಅವಧಿ ವರೆಗೆ ವಿಸ್ತರಣೆ

ಧಾರವಾಡ:ಕೊರೊನಾ ನಿಯಂತ್ರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನತೆಗೆ ಕಿರಾಣಿ , ಮಾಂಸದ ಪದಾರ್ಥಗಳನ್ನು ಪೂರೈಸಲು ಮೇ 27ರಿಂದ ಮೂರು ದಿನಗಳ ಕಾಲ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.
ಮೇ 27 ಗುರುವಾರ , ಮೇ.28 ಶುಕ್ರವಾರ ಹಾಗೂ ಮೇ.29 ಶನಿವಾರ ಈ ಮೂರು ದಿನಗಳಲ್ಲಿ ಅವಕಾಶ ನೀಡಲಾಗಿದೆ. ಹೆಚ್ಚು ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಕಿರಾಣಿ ಹಾಗೂ ಮಾಂಸ ಮಾರಾಟದ  ಸಮಯದ ಅವಧಿ ವಿಸ್ತರಿಸಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದ ಕಿರಾಣಿ ವರ್ತಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರು ಏಕಕಾಲಕ್ಕೆ ಅಂಗಡಿಗಳ ಮುಂದೆ ಜನಸಂದಣಿ ಉಂಟು ಮಾಡದೇ ಪ್ರತ್ಯೇಕವಾಗಿ ಬಂದು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಬಂದು ಖರೀದಿಸಬೇಕು. ಈ ಮೂರು ದಿನಗಳ ಅವಕಾಶದ ನಂತರ ಕಠಿಣ ಲಾಕ್‌ಡೌನ್ ಅವಧಿ ಪೂರ್ಣಗೊಂಡ ಬಳಿಕ ಜೂನ್ 7 ರ ನಂತರವೇ ಈ ವಸ್ತುಗಳು ದೊರೆಯಲಿವೆ. ತರಕಾರಿ ಮತ್ತು ಹಾಲು ಮಾರಾಟಕ್ಕೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ರವರೆಗೆ ಅವಕಾಶ ಇರುವುದರಿಂದ ಇವುಗಳ ಪೂರೈಕೆ ಎಂದಿನಂತೆಯೇ ಇರುತ್ತದೆ. ಇವುಗಳ ಸಮಯದಲ್ಲಿ ಬದಲಾವಣೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

ಆರ್ಡರ್‌ ಪ್ರತಿ ಇದೆ..

Revised Order-1

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement