ವೀಡಿಯೊ | ಮುಂಬೈ ಅಟಲ್ ಸೇತುವೆಯಿಂದ ಜಿಗಿಯಲು ಯತ್ನಿಸಿದ ಮಹಿಳೆ ; ಕ್ಯಾಬ್‌ ಚಾಲಕ- ಪೊಲೀಸರು ರಕ್ಷಿಸಿದ ವೀಡಿಯೊ ವೈರಲ್‌

ಮುಂಬೈ : ಮುಂಬೈನ ಅಟಲ್ ಸೇತು ಸೇತುವೆಯ ಮೇಲೆ ‘ಶಂಕಿತ’ ಆತ್ಮಹತ್ಯೆ ಯತ್ನದ ಘಟನೆಯಲ್ಲಿ, 56 ವರ್ಷದ ಮಹಿಳೆಯೊಬ್ಬರನ್ನು ನ್ಹವಾ ಶೇವಾ ಘಟಕದ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಸಿಬ್ಬಂದಿ ರಕ್ಷಿಸಿದ್ದಾರೆ. ಮುಲುಂದದ ನಿವಾಸಿಯಾದ ರೀಮಾ ಪಟೇಲ್ ಎಂದು ಗುರುತಿಸಲಾದ ಮಹಿಳೆ ಮುಲುಂದನಿಂದ ಕ್ಯಾಬ್ ಬಾಡಿಗೆಗೆ ಪಡೆದಿದ್ದರು ಎಂದು ಹೇಳಲಾಗಿದೆ.
ಅಟಲ್ ಸೇತು ಸೇತುವೆ ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ರಸ್ತೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕ ಮತ್ತು ಪೊಲೀಸರು ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವೀಡಿಯೊದಲ್ಲಿ, ಮಹಿಳೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ನಂತರ ಮಹಿಳೆ ಸಮುದ್ರಕ್ಕೆ ಏನನ್ನೋ ಎಸೆದಿದ್ದಾರೆ, ನಂತರ ನೀರಿಗೆ ಜಿಗಿಯಲು ಪ್ರಯತ್ನಿಸಿದಂತೆ ಕಂಡುಬಂದಿದೆ. ಸಮಯಕ್ಕೆ ಸರಿಯಾಗಿ ಅಲರ್ಟ್‌ ಆದ ಚಾಲಕ ಮಹಿಳೆಯ ಕೂದಲನ್ನು ಗಟ್ಟಿಯಾಗಿ ಹಿಡಿದುಕೊಂಡು ಆಕೆ ಕೆಳಗೆ ಬೀಳದಂತೆ ತಡೆದಿದ್ದಾನೆ. ಅದೇ ಸಮಯದಲ್ಲಿ, ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ ಆಗಮಿಸಿ ರೇಲಿಂಗ್ ಮೇಲೆ ಹತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.

ನಮ್ಮ ಪೆಟ್ರೋಲಿಂಗ್ ವ್ಯಾನ್ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ನಿಲ್ಲಿಸಿದ ಕಾರನ್ನು ಗಮನಿಸಿದ್ದಾರೆ. ಶೆಲಾರ್ ಟೋಲ್ ನಾಕಾದ ಟೋಲ್ ಬೂತ್ ಸಿಬ್ಬಂದಿ ಸೇತುವೆಯ ಮೇಲೆ ಕಾರು ನಿಲ್ಲಿಸಿರುವುದನ್ನು ಮತ್ತು ಮಹಿಳೆಯೊಬ್ಬರು ರೇಲಿಂಗ್‌ನಲ್ಲಿ ಇರುವುದನ್ನು ಗಮನಿಸಿದ ನಂತರ ಪೊಲೀಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ನ್ಹವಾ ಶೇವಾ ಸಂಚಾರ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಗುಲ್ಫರೋಜ್ ಮುಜಾವರ್ ತಿಳಿಸಿದ್ದಾರೆ.
ಪೊಲೀಸ್ ಪೇದೆಗಳಾದ ಲಲಿತ್ ಅಮರ ಶೇಟ್, ಕಿರಣ್ ಮ್ಹಾತ್ರೆ, ಯಶ್ ಸೋನಾವಾನೆ ಅವರನ್ನೊಳಗೊಂಡ ತಂಡವು ರೇಲಿಂಗ್ ಮೇಲೆ ಹತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ, ಆರಂಭದಲ್ಲಿ ಕ್ಯಾಬ್ ಚಾಲಕ ಸಂಜಯ ದ್ವಾರಕಾ ಯಾದವ್ (31) ಎಂಬ ಚಾಲಕ ಮಹಿಳೆಯನ್ನು ಕೆಳಗೆ ಬೀಳದಂತೆ ಹಿಡಿದುಕೊಂಡಿದ್ದರು.
ಮಹಿಳೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಾನು ಯಾವುದೋ ಆಚರಣೆಯ ಭಾಗವಾಗಿ ದೇವರ ಫೋಟೋಗಳನ್ನು ನದಿಯಲ್ಲಿ ಮುಳುಗಿಸಿದ್ದೇನೆ ಎಂದು ಹೇಳಿದ್ದಾರೆ. “ತಾನು ಮೊದಲು ಐರೋಲಿ ಸೇತುವೆಗೆ ಹೋಗಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ತನ್ನ ಆಧ್ಯಾತ್ಮಿಕ ಗುರುಗಳು ನೀರು ಆಳವಾಗಿರಬೇಕು ಎಂದು ಹೇಳಿದ್ದರು. ಆದ್ದರಿಂದ ತಾನು ಮುಂಬೈ ಕಡೆಯಿಂದ ಅಟಲ್ ಸೇತು ಸೇತುವೆಗೆ ಹೋಗಿ ರೇಲಿಂಗ್ ಅನ್ನು ಹತ್ತಿ ಫೋಟೋಗಳನ್ನು ಎಸೆದಿರುವುದಾಗಿ ಹೇಳಿದ್ದಾರೆ ಎಂದು ಎಂದು ನ್ಹವಾ ಶೇವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮ್ ಬಾಗ್ವಾನ್ ಹೇಳಿದ್ದಾರೆ.

ತಾನು ಫೋಟೊಗಳನ್ನು ಎಸೆಯುತ್ತಿದ್ದಾಗ ಟ್ರಾಫಿಕ್ ಪೋಲೀಸರ ಜೀಪಿನ ಸದ್ದು ಕೇಳಿ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. “ಕ್ಯಾಬ್ ಡ್ರೈವರ್ ಅನುಮಾನಾಸ್ಪದವಾಗಿತ್ತು ಮತ್ತು ಆದ್ದರಿಂದ ಮಹಿಳೆ ಫೋಟೋಗಳನ್ನು ಎಸೆಯುವಾಗ ಆತ ಮಹಿಳೆ ಸಮೀಪವೇ ನಿಂತಿದ್ದ. ಮಹಿಳೆ ಬಿದ್ದಾಗ ಆತ ಮಹಿಳೆಯ ಕೂದಲನ್ನು ಗಟ್ಟಿಯಾಗಿ ಹಿಡಿದುಕೊಂಡ ಕೆಳಗೆ ಬೀಳದಂತೆ ತಡೆದಿದ್ದಾನೆ. ಮತ್ತು ನಂತರ ಟ್ರಾಫಿಕ್ ಪೊಲೀಸ್‌ ತಂಡವು ಮಹಿಳೆಯನ್ನು ರಕ್ಷಿಸಿತು” ಎಂದು ಬಾಗ್ವಾನ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆಯ ಸಂಬಂಧಿಯೊಬ್ಬರು ಅವರಿಗೆ ಮಕ್ಕಳಿಲ್ಲದ ಕಾರಣ ಕೆಲವು ಸಮಯದಿಂದ ಮಾನಸಿಕವಾಗಿ ಕ್ಷೋಭೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಘಟನೆ ನಂತರ ಪುಣೆಯಲ್ಲಿದ್ದ ಆಕೆಯ ಪತಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement