ಪಾಕಿಸ್ತಾನದ ಮಂತ್ರಿಯೊಬ್ಬರು ಅಂಗಡಿಯೊಂದರ ಉದ್ಘಾಟನಾ ಸಮಾರಂಭದಲ್ಲಿ ಹಲ್ಲಿನಿಂದ ರಿಬ್ಬನ್ ಕತ್ತರಿಸುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
21 ಸೆಕೆಂಡುಗಳ ಕ್ಲಿಪ್ ಅನ್ನು ವರದಿಗಾರ ಮುರ್ತಾಜಾ ಅಲಿ ಶಾ ಅವರು ಟ್ವಿಟರ್ಗೆ ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 2 ರಂದು, ಕಾರಾಗೃಹಗಳ ಖಾತೆ ಸಚಿವ ಮತ್ತು ಪಂಜಾಬ್ ಸರ್ಕಾರದ ವಕ್ತಾರರಾದ ಫಯಾಜ್-ಉಲ್-ಹಸನ್ ಚೋಹಾನ್ ಅವರಿಗೆ ರಾವಲ್ಪಿಂಡಿ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ಉದ್ಘಾಟಿಸಲು ಆಹ್ವಾನಿಸಲಾಯಿತು.
ಚೋಹಾನ್ ಅವರಿಗೆ ರಿಬ್ಬನ್ ಕತ್ತರಿಯಿಂದ ಕತ್ತರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಚೋಹಾನ್ ತನ್ನ ಹಲ್ಲುಗಳನ್ನು ರಿಬ್ಬನ್ ಕತ್ತರಿಸಲು ಬಳಸಿದ್ದಾರೆ. ಆಗ ಸಮಾರಂಭದಲ್ಲಿ ಹಾಜರಿದ್ದ ಎಲ್ಲರೂ ಜೋರಾಗಿ ನಗುತ್ತಿದ್ದರು.
ಟ್ವಿಟರ್ನಲ್ಲಿ ಪ್ರತ್ಯೇಕ ಪೋಸ್ಟ್ನಲ್ಲಿ, ಫಯಾಜ್-ಉಲ್-ಹಸನ್ ಚೋಹಾನ್ ಕೂಡ ವೀಡಿಯೊವನ್ನು ಹಂಚಿಕೊಂಡರು ಮತ್ತು ವಿವರಣೆಯನ್ನು ನೀಡಿದರು, “ಕತ್ತರಿ ಮೊಂಡಾಗಿತ್ತು ಮತ್ತು ಅದರಿಂದ ರಿಬ್ಬನ್ ಕತ್ತರಿಸಲು ಸಾಧ್ಯವಾಗಲಿಲ್ಲ. ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ