ಅಮೃತಪಾಲ್ ಸಿಂಗ್ ಪರಾರಿಯಾದ ಬೈಕ್ ಪತ್ತೆ ಮಾಡಿದ ಪೊಲೀಸರು

ನವದೆಹಲಿ : ಶನಿವಾರ ಪರಾರಿಯಾಗಿದ್ದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಮೋಟಾರ್‌ಸೈಕಲ್ ಅನ್ನು ಪಂಜಾಬ್ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಜಾಜ್ ಪ್ಲಾಟಿನಾ ಬೈಕ್ ಜಲಂಧರ್ ನಗರದಿಂದ 45 ಕಿ.ಮೀ ದೂರದಲ್ಲಿರುವ ಜಲಂಧರ್‌ನ ದಾರಾಪುರ ಪ್ರದೇಶದ ಕಾಲುವೆಯೊಂದರ ಬಳಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಂಗ್ ಪರಾರಿಯಾಗಲು ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ. ಶನಿವಾರದಂದು ತನ್ನ ವಾಹನ ಬಿಟ್ಟು ಬೇರೆ ವಾಹನದಲ್ಲಿ ಸಿಂಗ್ ಪರಾರಿಯಾಗಿದ್ದ. ಪೊಲೀಸರು ಆತನ ವಿರುದ್ಧ ಮತ್ತು ಆತ ‘ವಾರಿಸ್ ಪಂಜಾಬ್ ದೇ’ ವಿರುದ್ಧ ಕಾರ್ಯಾವರಣೆ ಆರಂಭಿಸಿದ್ದಾರೆ. ಆರಂಭದಲ್ಲಿ ತಮ್ಮ ಮರ್ಸಿಡಿಸ್ ವಾಹನದಲ್ಲಿದ್ದ ಆತ ನಂತರ ಪೋಲೀಸ್ ಕ್ರಮದ ಸಮಯದಲ್ಲಿ ಮಾರುತಿ ಬ್ರೆಝಾಗೆ ಬದಲಾಯಿಸಿದ.
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಹೊಸ ಫೋಟೋದಲ್ಲಿ, ಅಮೃತಪಾಲ್ ಸಿಂಗ್ ಬೈಕ್‌ನಲ್ಲಿ ಸವಾರಿ ಮಾಡುವುದನ್ನು ಕಾಣಬಹುದು.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಜಲಂಧರ್ ಟೋಲ್ ಪ್ಲಾಜಾದ ಮತ್ತೊಂದು ಸಿಸಿಟಿವಿ ಕ್ಲಿಪ್ ಅಮೃತಪಾಲ್ ಸಿಂಗ್ ಎಸ್‌ಯುವಿಯಲ್ಲಿ ಪರಾರಿಯಾಗುವುದನ್ನು ತೋರಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement