ಪಶ್ಚಿಮ ಬಂಗಾಳ ಎಬಿಪಿ-ಸಿ ವೋಟರ್ಸ್‌ ಸಮೀಕ್ಷೆ 2021:ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ತುಸು ಹಿಂದೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುಂಚಿನ ಮನಸ್ಥಿತಿಯನ್ನು ನಿರ್ಧರಿಸುವ ಸಲುವಾಗಿ, ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಮತದಾರರ ಮನಸ್ಸಿನಲ್ಲಿ ಯಾವ ರಾಜಕೀಯ ಪಕ್ಷವು ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಲು ಕ್ಷಿಪ್ರ ಸಮೀಕ್ಷೆ ನಡೆಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಮತದಾನವು ಶನಿವಾರ ನಡೆಯಲಿದೆ. ಮತದಾನದ ದಿನಾಂಕ ಹತ್ತಿರವಾಗುವ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಎಬಿಪಿ-ಸಿ ವೋಟರ್‌ ಅತ್ಯಂತ ತುರುಸಿನಿಂದ ಕೂಡದ ಸ್ಪರ್ಧೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ ತೀವ್ರ ಪೈಪೋಟಿ ನೀಡಿಯೂ ಟಿಎಂಸಿಯಿಂದ ಸ್ವಲ್ಪ ಹಿಂದೆ ಇದೆ. ಕಾಂಗ್ರೆಸ್-ಎಡ-ಐಎಸ್‌ಎಫ್‌ನ ಮೈತ್ರಿಸಮೀಕ್ಷೆ ಪ್ರಕಾರ ಮತದಾರರ ಮೇಲೆ ಹೇಳಿಕೊಳ್ಳುವಂಥ ಪ್ರಬಾವ ಬೀರಿಲ್ಲ ಎಂದು ಸಮೀಕ್ಷೆ ಹೇಳಿದೆ.

ಪಕ್ಷವಾರು ಮತ ಹಂಚಿಕೆ ಪ್ರಮಾಣ:
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಹುಮುಖಿ ಬಿಜೆಪಿ ಮಧ್ಯೆ ರಾಜ್ಯಾದ್ಯಂತ ಬಹುತೇಕ ಕಡೆ ನೇರ ಸ್ಪರ್ಧೆ ಇದೆ. ಬಹುತೇಕ ಕಳೆದ ಲೋಕಸಭೆ ಚುನಾವಣೆ ರೀತಿಯಲ್ಲಿಯೇ ಮತದ ಪ್ರಮಾಣ ಹಂಚಿಕೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಎಬಿಪಿ-ಸಿ ವೋಟರ್ ಸ್ನ್ಯಾಪ್ ಸಮೀಕ್ಷೆ ಪ್ರಕಾರ, 42.1% ಮತದಾರರು ಇನ್ನೂ ಟಿಎಂಸಿ ನಂಬಿದ್ದಾರೆ, ಇದು 2016 ರ ವಿಧಾನಸಭಾ ಚುನಾವಣೆಗಳಿಂದ 2.8% ರಷ್ಟು ಕಡಿಮೆಯಾಗಿದೆ. ಸತತ ಎರಡು ಅವಧಿಗೆ ಅಧಿಕಾರ ನಡೆಸಿರುವ ಟಿಎಂಸಿ ಅಧಿಕಾರಕ್ಕೆ ಬರಲು ಈ ಕುಸಿತ ಅಡ್ಡಿಯಾಗುವುದಿಲ್ಲ. ಕಳೆದ ಬಾರಿ 10% ರಷ್ಟು ಮತಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ ಶೇ. 37.4ರಷ್ಟು ಮತಗಳನ್ನು ಪಡೆಯುವ ಮೂಲಕ ತೀವ್ರ ಸ್ಪರ್ಧೆ ನೀಡುತ್ತಿದೆ.

ಪಕ್ಷದ ಮತ ಹಂಚಿಕೆ%:   2016 ಫಲಿತಾಂಶಗಳು,    2021 ಪ್ರೊಜೆಕ್ಷನ್ ಸ್ವಿಂಗ್       ಹೆಚ್ಚಳ/ಕುಸಿತ
ಟಿಎಂಸಿ                      44.9                          42.1                                -2.8
ಬಿಜೆಪಿ                       10.2                           37.4                                 27.2
ಕಾಂಗ್ರೆಸ್‌+ ಎಡ+
ಐಎಸ್‌ಎಫ್‌                 37.9                          13.0                                -24.9
ಇತರರು                     7.0                            7.5                                   0.5

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಈ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದೆಂದರೆ ಊಹಿಸಲಾಗುತ್ತಿರುವ ಮತ ಪಾಲು ಬಿಜೆಪಿಗೆ ಎಷ್ಟರ ಮಟ್ಟಿಗೆ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆಯೆಂದು. ಎಬಿಪಿ-ಸಿ ವೊಟರ್ ಸ್ನ್ಯಾಪ್ ಪೋಲ್ ಬಿಜೆಪಿ ತನ್ನ ಮತದ ಪಅಲನ್ನು ಗಣನೀಯವಾಗಿ ಹೆಚ್ಚಳ ಮಾಡಿಕೊಳ್ಳುತ್ತದೆ ಎಂದು ಸೂಚಿಸುತ್ತದೆ, ಇದು ರಾಜ್ಯದಲ್ಲಿ ಟಿಎಂಸಿಗೆ ಬೆದರಿಕೆ ಹಾಕುವಷ್ಟು ಹತ್ತಿರದಲ್ಲಿದೆ. 160 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಂತೆ ಟಿಎಂಸಿಗೆ ಬಹುಮತ ಸಿಗಲಿದೆ ಎಂದು ಸ್ನ್ಯಾಪ್ ಪೋಲ್ ಸೂಚಿಸುತ್ತದೆ. ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ 112 ಸ್ಥಾನಗಳಲ್ಲಿದೆ, ಇದು ಕಳೆದ ಬಂಗಾಳ ವಿಧಾನಸಭಾ ಚುನಾವಣೆಯಿಂದ 109 ಸ್ಥಾನಗಳ ಲಾಭವಾಗಿದೆ.

ಪಕ್ಷಗಳು             2016ರ ಸ್ಥಾನಗಳು   2021ಗೆಲ್ಲಬಹುದಾದ ಸ್ಥಾನಗಳು(ಪ್ರೊಜೆಕ್ಷನ್‌)     ಹೆಚ್ಚು/ಕಡಿಮೆ
ಟಿಎಂಸಿ              211                      160                                                      -51
ಬಿಜೆಪಿ                3                          112                                                      109
ಕಾಂಗ್ರೆಸ್‌+ ಎಡ

+ಐಎಸ್‌ಎಫ್‌       76                         22                                                        -54
ಇತರರು             4                           0                                                          -4
ಒಟ್ಟು 294

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಎಬಿಪಿ-ಸಿವೊಟರ್ ಸ್ನ್ಯಾಪ್ ಪೋಲ್ ಟಿಎಂಸಿಗೆ 152 ರಿಂದ 168 ಸ್ಥಾನಗಳನ್ನು ಗಳಿಸಲು ಸಾಧ್ಯವಾಗುತ್ತದೆ, ಬಿಜೆಪಿ 104 ರಿಂದ 120 ಸ್ಥಾನಗಳ ನಡುವೆ ತೂಗಾಡಲಿದೆ, ಕಾಂಗ್ರೆಸ್-ಎಡ -ಐಎಸ್ಎಫ್ ನಡುವೆ ಹೊಸದಾಗಿ ರೂಪುಗೊಂಡ ಮೈತ್ರಿ 18 ರಿಂದ 26 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಬಗ್ಗೆ ಹೇಳಿದೆ.

ಪಕ್ಷಗಳು                            ಗೆಲ್ಲುವ ಸ್ಥಾನಗಳ ಶ್ರೇಣಿ
ಟಿಎಂಸಿ                             152 ರಿಂದ 168
ಬಿಜೆಪಿ                              104 ರಿಂದ 120
ಕಾಂಗ್ರೆಸ್‌-ಎಡ                    18 ರಿಂದ 26
ಇತರರು                            0 ರಿಂದ 2

ಮಾರ್ಚ್ 27 ರ ಶನಿವಾರ ಪಶ್ಚಿಮ ಬಂಗಾಳದ 30 ವಿಧಾನಸಭಾ ಸ್ಥಾನಗಳಿಗೆ ಮತದಾನದ ಮೊದಲ ಹಂತದ ಮತದಾನ ನಡೆಯಲಿದೆ. ಇಡೀ ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 29 ರ ವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆಯುತ್ತಿದೆ ಮತ್ತು ಮೇ 2 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.

4.3 / 5. 3

ಶೇರ್ ಮಾಡಿ :

2 Responses

  1. Geek

    ಬಂಗಾಳದಲ್ಲಿ ಬಿಜೆಪಿ ಅಥವಾ ತೃಣಮೂಲ ಬರುವುದಕ್ಕಿಂತಲೂ ಅಲ್ಲಿ ಕಮ್ಯೂನಿಸ್ಟ್ ಪಕ್ಷಗಳ ವೋಟ್ ಶೇರ್ ತೀವ್ರ ಮಟ್ಟದಲ್ಲಿ ಕುಸಿಯುತ್ತಿರುವುದು ಆತಂಕಕಾರಿಯಾಗಿದೆ. ದೇಶವನ್ನು ಇನ್ನೂ ಹೆಚ್ಚು ಸುಲಭವಾಗಿ ವಿದೇಶಿ ಬಂಡವಾಳಶಾಹಿಗಳಿಗೆ ಒಪ್ಪಿಸಲು ಮೋದಿ ಸರಕಾರಕ್ಕೆ ಅನುಕೂಲವಾಗಲಿದೆ.

  2. Hanumesh belgavi

    ಬಂಗಾಳಿ ಜನರು ನಿಮ್ಮಷ್ಟು ಜಾಣರಲ್ಲ, ಅನುಭವಿಗಲು

ನಿಮ್ಮ ಕಾಮೆಂಟ್ ಬರೆಯಿರಿ

advertisement