ಕೊಲೆಯಾದ 40 ವರ್ಷಗಳ ನಂತರ ವ್ಯಕ್ತಿಯನ್ನು ಪತ್ನಿ ಕೊಲೆ ಆರೋಪದಿಂದ ಖುಲಾಸೆ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ : 40 ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಪಶ್ಚಿಮ ಬಂಗಾಳದ ನಿವಾಸಿಯೊಬ್ಬರನ್ನು ಸುಪ್ರೀಂ ಕೋರ್ಟ್‌ ಇತ್ತೀಚಿಗೆ ಖುಲಾಸೆಗೊಳಿಸಿದೆ. ಹಾಗೂ ನ್ಯಾಯಾಂಗೇತರ ತಪ್ಪೊಪ್ಪಿಗೆಗಳ ಆಧಾರದ ಮೇಲೆ ಶಿಕ್ಷೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
1983 ಮಾರ್ಚ್ 11ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಪತ್ನಿ ಕೊಲೆಗೆ ಸಂಬಂಧಿಸಿದಂತೆ ಮೂವರು ಗ್ರಾಮಸ್ಥರ ಮುಂದೆ ಆತ ನ್ಯಾಯಾಲಯದ ಹೊರಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಆಧಾರದಲ್ಲಿ 1983ರ ಮಾರ್ಚ್‌ನಲ್ಲಿ ನಿಖಿಲ್ ಚಂದ್ರ ಮಂಡಲ್ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ಮಾರ್ಚ್ 31, 1987 ರಂದು ನಿಖಿಲ್ ಚಂದ್ರ ಮೊಂಡಲ್ ಅವರನ್ನು ಖುಲಾಸೆಗೊಳಿಸಿತ್ತು.
ತೀರ್ಪಿನ ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್‌ ಡಿಸೆಂಬರ್ 15, 2008ರಂದು ಅಧೀನ ನ್ಯಾಯಾಲಯದ ತೀರ್ಪನ್ನು ಪಕ್ಕಕ್ಕಿರಿಸಿತ್ತು. ಕೊಲೆ ಪ್ರಕರಣದಲ್ಲಿ ಮಂಡಲ್ ತಪ್ಪಿತಸ್ಥನೆಂದು ತೀರ್ಪು ನೀಡಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಮೊಂಡಲ್ 2010 ರಲ್ಲಿ ತನ್ನ ಅಪರಾಧ ಮತ್ತು ಶಿಕ್ಷೆಯ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 13 ವರ್ಷ ಆತನ ಅರ್ಜಿ ಅಲ್ಲಿಯೇ ಬಾಕಿ ಉಳಿದಿತ್ತು. ಕೊನೆಗೂ ಆತನ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂಜಯ ಕರೋಲ್ ಅವರ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ನಿರ್ಧಾರ ಸರಿಯಾಗಿದೆ ಎಂದು ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದೆ. 1984 ರ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್‌, ಈ ಪ್ರಕರಣವು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿದೆ. ಸಾಧ್ಯತೆಗಳು ಮತ್ತು ಸಂಭಾವ್ಯತೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಆರೋಪಿಯ ತಪ್ಪನ್ನು ನಿಖರವಾಗಿ ತೋರಿಸುವಂತಹ ಪುರಾವೆಗಳು ಇರಬೇಕು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

ಎಷ್ಟೇ ಬಲವಾದ ಅನುಮಾನವಿದ್ದರೂ, ಅದು ಅನುಮಾನವನ್ನು ಮೀರಿ ಪುರಾವೆಯಾಗಲು ಸಾಧ್ಯವಿಲ್ಲ” ಎಂದು ಪೀಠವು ಹೇಳಿದೆ. ಮೂಲತಃ ಪ್ರಾಸಿಕ್ಯೂಷನ್ ಪ್ರಕರಣವು ಆರೋಪಿಯು ಮೂವರು ಗ್ರಾಮಸ್ಥರ ಮುಂದೆ ನ್ಯಾಯಾಲಯದ ಹೊರಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರ ಮೇಲೆ ನಿಂತಿದೆ. ಆದರೆ ಆ ಮೂವರು ಗ್ರಾಮಸ್ಥರ ಹೇಳಿಕೆಗಳಲ್ಲಿ ವಿರೋಧಾಭಾಸವಿದೆ ಎಂಬುದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿತ್ತು ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ.
ನ್ಯಾಯಾಲಯದ ಹೊರಗೆ ತಪ್ಪೊಪ್ಪಿಗೆಯು ಪುರಾವೆಯ ದುರ್ಬಲ ಅಂಶ ಎಂದು ಕಾನೂನು ಹೇಳುತ್ತದೆ. ನ್ಯಾಯಾಲಯದ ಹೊರಗೆ ತಪ್ಪೊಪ್ಪಿಗೆಯು ಅನುಮಾನಾಸ್ಪದ ಸಂದರ್ಭಗಳಿಂದ ಸುತ್ತವರಿದಿರುತ್ತದೆ. ಅದರ ವಿಶ್ವಾಸಾರ್ಹತೆ ಶಂಕಾಸ್ಪದವಾಗುತ್ತದೆ. ಅದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಅಂತಹ ಯಾವುದೇ ನ್ಯಾಯಾಲಯದ ಹೊರಗಿನ ತಪ್ಪೊಪ್ಪಿಗೆಯನ್ನು ಅವಲಂಬಿಸಿ ತೀರ್ಪು ನೀಡುವುದಕ್ಕೂ ಮುನ್ನ ನ್ಯಾಯಾಲಯವು ಸಾಮಾನ್ಯವಾಗಿ ಸ್ವತಂತ್ರ ವಿಶ್ವಾಸಾರ್ಹ ಸಾಕ್ಷ್ಯಗಳ ಕಡೆ ನೀಡಬೇಕು ಎನ್ನುವುದು ಎಚ್ಚರಿಕೆಯ ನಿಯಮವಾಗಿದೆ” ಎಂದು ಸುಪ್ರೀಂಕೋರ್ಟ್‌ ಪೀಠವು, ಹೇಳಿದೆ.
ಮೊಂಡಲ್, ಈಗ ಸುಮಾರು 64 ವರ್ಷ ವಯಸ್ಸಿನವರಾಗಿದ್ದಾರೆ. ಅವರ ವಕೀಲರಾದ ರುಖ್ಸಾನಾ ಚೌಧರಿ ಪ್ರಕಾರ, ಬಂಧನದ ಸಮಯದಲ್ಲಿ ಮೊಂಡಲ್‌ 24 ವರ್ಷ ವಯಸ್ಸಿನವರಾಗಿದ್ದರು. 2008ರಲ್ಲಿ ತನ್ನ ಪತ್ನಿಯನ್ನು ಕೊಂದ ಆರೋಪದ ಮೇರೆಗೆ ಆತನನ್ನು ಬಂಧಿಸಿದ ನಂತರ ಮತ್ತು 2008 ರಲ್ಲಿ ಉಚ್ಚ ನ್ಯಾಯಾಲಯವು ಆತನಿಗೆ ಶಿಕ್ಷೆ ವಿಧಿಸಿದ ನಂತರ, ಆತ 14 ವರ್ಷಗಳಿಗಿಂತ ಹೆಚ್ಚು ಕಾಲ ಕಂಬಿಗಳ ಹಿಂದೆ ಕಳೆದಿದ್ದಾನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement