ಅದಾನಿ ಗ್ರೂಪ್‌ಗೆ ಸಾಲ : ಭಾರತೀಯ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದ ಆರ್‌ಬಿಐ

ನವದೆಹಲಿ: ಅಮೆರಿಕದ ಹಿಂಡಬ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಹಾಗೆಯೇ ಸಂಸ್ಥೆಯು ಬುಧವಾರ ತನ್ನ 20,000 ಕೋಟಿ ರೂಪಾಯಿಗಳ ಎಫ್‌ಪಿಒ ಹಿಂಪಡೆಯುವ ನಿರ್ಧಾರವನ್ನು ಕೂಡಾ ಘೋಷಣೆ ಮಾಡಿದೆ.
ಇದೆಲ್ಲದರ ನಡುವೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅದಾನಿ ಗ್ರೂಪ್‌ಗೆ ಯಾವೆಲ್ಲಾ ಬ್ಯಾಂಕ್‌ಗಳು ಸಾಲ ನೀಡಿವೆ ಹಾಗೂ ಎಷ್ಟು ಪ್ರಮಾಣದ ಸಾಲ ನೀಡಿವೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ಸಂಪರ್ಕ ಮಾಡಿದಾಗ ಆರ್‌ಬಿಐ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದಾರೆ.
ಕ್ರೆಡಿಟ್ ಸ್ಯೂಸ್ ಸಂಸ್ಥೆ ತನ್ನ ಖಾಸಗಿ ಬ್ಯಾಂಕಿಂಗ್ ಕ್ಲೈಂಟ್‌ಗಳಿಗೆ ಮಾರ್ಜಿನ್ ಲೋನ್‌ಗಳಿಗೆ ಮೇಲಾಧಾರವಾಗಿ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಇದಾದ ಬಳಿಕ ಗ್ರಾಹಕರಿಗೆ ಅದಾನಿ ಗ್ರೂಪ್ ಕಂಪನಿಗಳ ಸೆಕ್ಯುರಿಟಿಗಳ ಮೇಲೆ ಸಾಲವನ್ನು ನೀಡುವುದನ್ನು ಕೂಡಾ ನಿಲ್ಲಿಸಲಾಗಿದೆ. ಎಂದು ವರದಿಗಳು ತಿಳಿಸಿವೆ.
ಈ ಎಲ್ಲಾ ಕಾರಣದಿಂದಾಗಿ ಬ್ಯಾಂಕಿಂಗ್‌ನ ನಿಯಂತ್ರಕರಾಗಿರುವ ಆರ್‌ಬಿಐ ಕಣಕ್ಕೆ ಇಳಿದಿರುವ ಸಾಧ್ಯತೆ ಇದೆ. ಎಲ್ಲಾ ಬ್ಯಾಂಕ್‌ಗಳಿಗೆ ಸಾಲದ ಪ್ರಮಾಣವನ್ನು ವಿವರಿಸುವಂತೆ ನೋಟಿಸ್‌ ಜಾರಿ ಮಾಡಿದೆ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ಬುಧವಾರ ವರದಿ ಮಾಡಿದ್ದ ಬ್ಲೂಮ್‌ಬರ್ಗ್, ಗುರುವಾರ ಮತ್ತೊಂದು ವರದಿಯಲ್ಲಿ ಸಿಟಿಗ್ರೂಪ್ ಇಂಕ್‌ನ ಸಂಪತ್ತು ಅದಾನಿ ಗ್ರೂಪ್ ಸಂಸ್ಥೆಗಳ ಸೆಕ್ಯುರಿಟಿಗಳನ್ನು ಮಾರ್ಜಿನ್ ಲೋನ್‌ಗಳಿಗೆ ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದೆ.
ಸೆಬಿಯತಹ ಮಾರುಕಟ್ಟೆ ನಿಯಂತ್ರಕ ಮಧ್ಯ ಪ್ರವೇಶ ಮಾಡುವ ಸಾಧ್ಯತೆಯಿದೆ ಎಂದು ಬ್ಯಾಂಕಿಂಗ್ ಮೂಲವೊಂದು ಹೇಳಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಈವರೆಗೂ ಅದಾನಿ ಷೇರು ಕುಸಿತ ಮತ್ತು 20,000 ಕೋಟಿ ರೂಪಾಯಿಗಳ ಎಫ್‌ಪಿಒ ಅನ್ನು ಹಿಂಪಡೆಯುವ ನಿರ್ಧಾರಗಳ ಬಗ್ಗೆ ಯಾವುದೇ ತನಿಖೆಯನ್ನು ಘೋಷಣೆ ಮಾಡಿಲ್ಲ. ಪ್ರಸ್ತುತ ಅದಾನಿ ಗ್ರೂಪ್ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಹೊಂದಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ ಅದಾನಿ ಗ್ರೂಪ್‌ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲ ನೀಡಿದ್ದರೂ, ಎಷ್ಟು ಪ್ರಮಾಣದ ಸಾಲವನ್ನು ನೀಡಿದೆ ಎನ್ನುವುದನ್ನು ಪ್ರಕಟಿಸಬೇಕಿದೆ. ಇನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅದಾನಿ ಗ್ರೂಪ್‌ಗೆ 7 ಸಾವಿರ ಕೋಟಿ ರೂಪಾಯಿ ಸಾಲ ನೀಡಿದ್ದರೂ, ಅದು ನಗದು ಹಣದ ಹರಿವಿನಿಂದ ಬೆಂಬಲಿತವಾಗಿದೆ ಹಾಗಾಗಿ ಸದ್ಯಸ ಮಟ್ಟಿಗೆ ಮರುಪಾವತಿಯ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದೆ. ಸಾಲದಾತರು 6,300 ಕೋಟಿ ರೂಪಾಯಿಗಳ ನಿಧಿ ಆಧಾರಿತ ಮಾನ್ಯತೆ ಹೊಂದಿದ್ದಾರೆ ಮತ್ತು ಗ್ರೂಪ್‌ನ ವಿವಿಧ ಕಂಪನಿಗಳಿಗೆ 700 ಕೋಟಿ ರೂಪಾಯಿಗಳ ನಿಧಿಯೇತರ ಮಾನ್ಯತೆ ಹೊಂದಿದ್ದಾರೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ ಕೆ ಗೋಯೆಲ್ ಹೇಳಿದ್ದಾರೆ. ಇನ್ನು ಬ್ಯಾಂಕ್‌ ಆಫ್‌ ಬರೋಡಾ 4 ಸಾವಿರ ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ಹೇಳಿದೆ. ಉಳಿದಂತೆ ಮತ್ತೆ ಯಾವುದೇ ಬ್ಯಾಂಕ್‌ಗಳು ತಾವು ಕೊಟ್ಟಿರುವ ಸಾಲದ ಬಗ್ಗೆ ಮಾಹಿತಿ ನೀಡಬೇಕಿದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement