ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುವುದು ಇಸ್ಲಾಂ ವಿರುದ್ಧ : ವಿವಾದಕ್ಕೆ ಕಾರಣವಾದ ಅಹಮದಾಬಾದ್ ಮೌಲ್ವಿಯ ಶಾಕಿಂಗ್‌ ಹೇಳಿಕೆ

ಅಹಮದಾಬಾದ್: ಮುಸ್ಲಿಂ ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವವರು ಇಸ್ಲಾಂ ಧರ್ಮದ ವಿರುದ್ಧ ಮತ್ತು ಅವರು ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಮುಖ್ಯ ಧರ್ಮಗುರು ಭಾನುವಾರ ಗುಜರಾತ್‌ ಎರಡನೇ ಹಂತದ ಮತದಾನಕ್ಕೆ ಹೋಗುವ ಒಂದು ದಿನ ಮೊದಲು ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದಾರೆ.
“ನೀವು ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದರೆ, ಈ ಧರ್ಮದಲ್ಲಿ ನಮಾಜ್‌ಗಿಂತ ಮುಖ್ಯವಾದುದು ಯಾವುದೂ ಇಲ್ಲ, ಇಲ್ಲಿ ಯಾರಾದರೂ ಮಹಿಳೆಯರು ನಮಾಜ್ ಓದುವುದನ್ನು ನೀವು ನೋಡಿದ್ದೀರಾ? ಇಸ್ಲಾಂನಲ್ಲಿ ಮಹಿಳೆಯರು ಎಲ್ಲರ ಮುಂದೆ ಬರುವುದು ಸರಿ ಎಂದಾದರೆ ಅವರು ಹಾಗೆ ಮಾಡುವುದರಿಂದ ಅವರನ್ನು ತಡೆಯುತ್ತಿರಲಿಲ್ಲ ಎಂದು ಶಬ್ಬೀರ್ ಅಹ್ಮದ್ ಸಿದ್ದಿಕಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.
ಮಹಿಳೆಯರಿಗೆ ಇಸ್ಲಾಂನಲ್ಲಿ ನಿರ್ದಿಷ್ಟ ಸ್ಥಾನವಿದೆ ಎಂಬ ಕಾರಣಕ್ಕಾಗಿ ಅವರು ನಮಾಜ್ ಓದಲು ಮಸೀದಿಗಳಿಗೆ ಬರುವುದನ್ನು ನಿಲ್ಲಿಸಲಾಗಿದೆ. ಅದಕ್ಕಾಗಿಯೇ, ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುವವರು ಇಸ್ಲಾಂ ವಿರುದ್ಧ ಎಂದು ಶಾಹಿ ಇಮಾಮ್ ಹೇಳಿದರು.

ನೀವು ಮಹಿಳೆಯರನ್ನು ಸ್ಪರ್ಧಿಸಲು ಕರೆತರಲು ಯಾರೂ ಪುರುಷರು ಉಳಿದಿಲ್ಲವೇ? ಇದು ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತದೆ. ದುರ್ಬಲಗೊಳಿಸುತ್ತದೆ ಹೇಗೆಂದರೆ ನೀವು ಮಹಿಳೆಯರನ್ನು ಶಾಸಕರು ಮತ್ತು ಕೌನ್ಸಿಲರ್‌ಗಳನ್ನು ಮಾಡಿದರೆ, ನಾವು ಹಿಜಾಬ್ ಅನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಲವು ಮುಸ್ಲಿಂ ಮಹಿಳೆಯರು ಧರಿಸಿರುವ ತಲೆ ಸ್ಕಾರ್ಫ್ ಬಗೆಗಿನ ಕರ್ನಾಟಕದ ವಿವಾದವನ್ನು ಉಲ್ಲೇಖಿಸಿದರು.
ಚುನಾವಣೆಯಲ್ಲಿ ಹೋರಾಡಲು ಯಾರೇ ಆದರೂ ಮನೆ-ಮನೆಗೆ ಭೇಟಿ ಮಾಡಬೇಕು. ಆದ್ದರಿಂದ, ನಾನು ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತೇನೆ. ಪುರುಷರಿಗೆ ಚುನಾವಣಾ ಟಿಕೆಟ್ ನೀಡಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಮಹಿಳೆಯರಿಗೆ ಟಿಕೆಟ್ ನೀಡಲು ಕಾರಣವೆಂದರೆ ಈ ದಿನಗಳಲ್ಲಿ ಎಲ್ಲ ವಿಷಯಗಳಲ್ಲಿ ಮಹಿಳೆಯರು ಹೇಳುವುದು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಆದ್ದರಿಂದ ನೀವು ಮಹಿಳೆಯರನ್ನು ತೆಗೆದುಕೊಂಡರೆ, ಇಡೀ ಕುಟುಂಬವೂ ಬರುತ್ತದೆ. ಇದಕ್ಕಿಂತ ಬೇರೆ ಯಾವುದೇ ಕಾರಣವನ್ನು ನನಗೆ ಕಾಣುತ್ತಿಲ್ಲ ಎಂದು ಸಿದ್ದಿಕಿ ಹೇಳಿದರು.
ಆಡಳಿತಾರೂಢ ಬಿಜೆಪಿ, ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟವನ್ನು ಕಾಣುತ್ತಿರುವ ಗುಜರಾತ್‌ನ 93 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಮುಂಚಿತವಾಗಿ ಧರ್ಮಗುರುಗಳ ಮೂಲಭೂತವಾದಿ ಹೇಳಿಕೆ ಬಂದಿದೆ.
ರಾಜ್ಯದ ಸುಮಾರು 6.4 ಕೋಟಿ ಜನರಲ್ಲಿ ಮುಸ್ಲಿಮರು ಶೇಕಡಾ 10 ರಷ್ಟಿದ್ದಾರೆ, ಆದರೆ ಮುಸ್ಲಿಂ ಮಹಿಳೆಯರು ಶಾಸಕಾಂಗದಲ್ಲಿ ಶೂನ್ಯ ಪ್ರಾತಿನಿಧ್ಯವನ್ನು ಹೊಂದಿದ್ದಾರೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement