ನನ್ನ ಸಂಬಂಧಿಕರಿಂದಲೇ ನನ್ನ ಮೇಲೆ ಗುಂಡಿನ ದಾಳಿ: ನಟ ಶಿವರಂಜನ್ ಆರೋಪ

ಬೈಲಹೊಂಗಲ:ಚಲನಚಿತ್ರ ನಟ, ಉದ್ಯಮಿ ಹಾಗೂ ಕನ್ನಡ ಹೋರಾಟಗಾರ ಶಿವರಂಜನ್ ಬೋಳನ್ನವರ ಅವರು ತಮ್ಮ ಮೇಲೆ ಸಂಬಂಧಿಗಳಿಂದಲೇ ಗುಂಡಿನ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿ ಶಿವರಂಜನ್ ಬೋಳನ್ನವರ ಅವರ ಶಿವರಂಜನ್ ಅವರ ದೂರದ ಸಂಬಂಧಿ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಂಜನ್ ಬೋಳನ್ನವರ ಅವರು, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮೇಲೆ 5 ಸುತ್ತು ಗುಂಡು ಹಾರಿಸಲಾಗಿದೆ. ನಾನು ಆ ಪ್ರದೇಶದಲ್ಲಿ ಓಡಾಡಿ ತಪ್ಪಿಸಿಕೊಂಡೆ. ಹೀಗಾಗಿ ನನಗೆ ಗುಂಡೇಟು ತಗುಲಲಿಲ್ಲ ಎಂದು ಹೇಳಿದ್ದಾರೆ.
ಬೈಲಹೊಂಗಲ ಪಟ್ಟಣದ ಇಂಚಲ ರಸ್ತೆಯ ನಮ್ಮ ಮನೆ ಎದುರು ಬೈಕ್ ಮೇಲೆ ಬಂದ ಕೆಲವರು ಏಕಾಏಕಿ ನನ್ನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸಹೋದರನ ಸಂಬಂಧಿ ಭಾಗಿಯಾಗಿದ್ದು ಅವನ ಮೇಲೆ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ನನ್ನ ಮೇಲೆ ಯಾಕೆ ಗುಂಡು ಹೊಡೆಯಲು ಪ್ರಯತ್ನಿಸಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಪೊಲೀಸರ ತನಿಖೆಯಿಂದಷ್ಟೆ ಪ್ರಕರಣದ ಒಟ್ಟಾರೆ ಮಾಹಿತಿ ಬೆಳಕಿಗೆ ಬರಬೇಕಿದೆ. ಆಸ್ತಿ ವಿವಾದದ ಹಿನ್ನಲೆಯಲ್ಲಿ ಗುಂಡೇಟು ಹೊಡೆದಿರಬಹುದು. ನನ್ನ ಸಹೋದರನ ಕುಮ್ಮಕ್ಕಿನಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement