ಮತ್ತೆ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ..!

ಪೆಟ್ರೋಲ್, ಡೀಸೆಲ್ ದರ ತೀವ್ರ ಹೆಚ್ಚಾಗಿರುವ ಸಂದರ್ಭದಲ್ಲಿ ಮತ್ತೆ ಕಚ್ಚಾ ತಐಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ತೈಲ ಬೆಲೆಯು 20 ತಿಂಗಳ ಬಳಿಕ ಮತ್ತೆ ಗರಿಷ್ಠ ಮಟ್ಟ ತಲುಪಿದೆ.
ಸೌದಿ ಅರೇಬಿಯಾದ ಇಂಧನ ದೈತ್ಯ ಅರಾಮ್ಕೊ ಒಡೆತನದ ಸಂಸ್ಕರಣಾ ಕೇಂದ್ರದ ಮೇಲೆ ಕ್ಷಿಪಣಿ ದಾಳಿಯ ನಂತರ ಹಾಗೂ ಕೋವಿಡ್‌-19 ಸಾಂಕ್ರಾಮಿಕಕ್ಕೂ ಮೊದಲು ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ ಬೆಲೆ ತಲುಪಿತ್ತು. ಅದಾದ ೨೦ ತಿಂಗಳ ನಂತರ ಈಗ ಕಚ್ಚಾ ತೈಲ ಮತ್ತೆ ಗರಿಷ್ಠ ಬೆಲೆ ತಲುಪಿದೆ.
ಕೊವಿಡ್‌ ಮಧ್ಯಯೇ ಜಾಗತಿಕ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಂತೆಯೇ ಬ್ರೆಂಟ್ ಕಚ್ಚಾ ತೈಲವು ಸೋಮವಾರ ಎರಡು ಪ್ರತಿಶತಕ್ಕಿಂತ ಹೆಚ್ಚಾಗಿದೆ. ಬ್ಯಾರೆಲ್‌ಗೆ ಶೇಕಡಾ 2.11ರಷ್ಟು ಜಿಗಿದು 70.82 ಅಮೆರಿಕಾ ಡಾಲರ್‌ಗೆ ಬಂದು ನಿಂತಿದೆ. ಇದು 2019 ರ ಮೇ ನಂತರದದಲ್ಲಿಯೇ ಕಚ್ಚಾ ತೈಲ ಬೆಲೆಯ ಬ್ಯಾರೆಲ್‌ ಒಂಕ್ಕೆ ಅತಂತ್ಯ ಗರಿಷ್ಠ ಮೊತ್ತವಾಗಿದೆ.
ಕ್ಷಿಪಣಿ ಮತ್ತು ಡ್ರೋನ್ ದಾಳಿ ಮೂಲಕ ಸೌದಿ ಅರೇಬಿಯಾದ ಪ್ರಮುಖ ತೈಲ ಉದ್ಯಮ ಘಟಕದ ಮೇಲೆ ಬಂಡುಕೋರರ ಡ್ರೋನ್‌ ದಾಳಿ ಹಿನ್ನೆಲೆಯಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ವಿಶ್ವದಾದ್ಯಂತ ತೈಲ ಬೆಲೆ ಮೇಲೆ ಭಾರೀ ಪರಿಣಾಮ ಬೀರಿತ್ತು. ದಿನವೊಂದಕ್ಕೆ 70 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲ ಸಂಸ್ಕರಿಸಿ ರಫ್ತು ಮಾಡುವ ಸಾಮರ್ಥ್ಯ ಹೊಂದಿರುವ ಅರಾಮ್ಕೊ ಘಟಕದ ಮೇಲಿನ ದಾಳಿಯಿಂದ ತೈಲ ಮಾರುಕಟ್ಟೆ ತಲ್ಲಣವಾಗಿತ್ತು ಎಂಬುದನ್ನು ಸ್ಮರಿಸಬಹುದು.

ಪ್ರಮುಖ ಸುದ್ದಿ :-   2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement